×
Ad

ಕಡಬ: ಪೇರಳೆ ಮರದಿಂದ ಬಿದ್ದು ಬಾಲಕ ಮೃತ್ಯು

Update: 2022-03-18 12:18 IST

ಕಡಬ, ಮಾ.18: ಪೇರಳೆ ಮರದಿಂದ ಬಿದ್ದು ಬಾಲಕನೋರ್ವ ಮೃತಪಟ್ಟ ದಾರುಣ ಘಟನೆ ತಾಲೂಕಿನ ದೋಳ್ಪಾಡಿ ಗ್ರಾಮದ ಮರಕ್ಕಡ ಎಂಬಲ್ಲಿ ಗುರುವಾರ ಸಂಜೆ ನಡೆದಿರುವುದು ವರದಿಯಾಗಿದೆ.

 ಮರಕ್ಕಡ ನಿವಾಸಿ ದಿವಾಕರ ಎಂಬವರ ಪುತ್ರ ಉಲ್ಲಾಸ್(8) ಮೃತಪಟ್ಟ ಬಾಲಕ. 3ನೇ ತರಗತಿಯಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದ ಉಲ್ಲಾಸ್ ಗುರುವಾರವೂ ಎಂದಿನಂತೆ ಶಾಲೆಗೆ ಹೋಗಿದ್ದ. ಸಂಜೆ ಮನೆಗೆ ಬಂದು ಮನೆಯ ಹತ್ತಿರದ ವಠಾರದಲ್ಲಿದ್ದ ಪೇರಳೆ ಮರಕ್ಕೆ ಹತ್ತಿ ಆಟವಾಡುತ್ತಿದ್ದ ವೇಳೆ ಆಕಸ್ಮಿಕವಾಗಿ ಕಾಲುಜಾರಿ ನೆಲಕ್ಕೆ ಬಿದ್ದಿದ್ದಾನೆ. ಈ ವೇಳೆ ತಲೆಗೆ ಗಂಭೀರ ಗಾಯವಾಗಿದ್ದು, ತಕ್ಷಣವೇ ಕಡಬ ಸರಕಾರಿ ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ, ಅದಾಗಲೇ ಉಲ್ಲಾಸ್ ಕೊನೆಯುಸಿರೆಳೆದಿದ್ದ ಎಂದು ತಿಳಿದುಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News