×
Ad

ಮಾ. 20ಕ್ಕೆ ರಜಕ ಯಾನೆ ಮಡಿವಾಳ ಸಂಘದ ವಿಶೇಷ ಸಭೆ

Update: 2022-03-18 19:09 IST

ಉಡುಪಿ : ಇಲ್ಲಿನ ಅಂಬಾಗಿಲು ಶ್ರೀರಜಕ ಯಾನೆ ಮಡಿವಾಳ ಸಂಘದ ವಿಶೇಷ ಸಭೆಯು ಮಾ. 20ರ ರವಿವಾರ ಬೆಳಗ್ಗೆ 9 ಗಂಟೆಗೆ ಅಂಬಾಗಿಲಿನ ಸಂಘದ ಕಚೇರಿಯಲ್ಲಿ ನಡೆಯಲಿದೆ.

ಈ ಸಭೆಯಲ್ಲಿ ಹೊಸ ಸದಸ್ಯರ ಸೇರ್ಪಡೆ, ಕಟ್ಟಡ ಕಾಮಗಾರಿಯ ಮುಂದುವರಿಕೆಯ ಬಗ್ಗೆ ಸಮಾಲೋಚನೆ, ಕುಲಬಾಂಧವರಿಂದ ಶ್ರಮದಾನ ಕಾರ್ಯಕ್ರಮ ನಡೆಯಲಿದೆ ಎಂದು ಸಂಘದ ಅಧ್ಯಕ್ಷ ಪ್ರದೀಪ್ ಮಡಿವಾಳ ಹೆರ್ಗ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News