×
Ad

ಎಸ್ಕೆಎಸ್ಸೆಸ್ಸೆಫ್ ಕೊಲ್ನಾಡು ಶಾಖೆ ವತಿಯಿಂದ ಅನುಸ್ಮರಣೆ ಕಾರ್ಯಕ್ರಮ

Update: 2022-03-19 18:06 IST

ಮುಲ್ಕಿ : ಎಸ್ಕೆಎಸ್ಸೆಸ್ಸೆಫ್  ಕೊಲ್ನಾಡು ಶಾಖೆಯ ವತಿಯಿಂದ "ಮನಸ್ಸನ್ನದ್ಧತೆ ಕಾರ್ಯಕ್ರಮ" ಹಾಗೂ ಪಾಣಕ್ಕಾಡ್ ಹೈದರ್ ಅಲಿ ಶಿಹಾಬ್ ತಂಙಲ್  ಅವರ ಅನುಸ್ಮರಣಾ ಕಾರ್ಯಕ್ರಮ ಇತ್ತೀಚೆಗೆ ಮುಲ್ಕಿ ಕೊಲ್ನಾಡು ಶಾಖೆಯ ಕಚೇರಿಯಲ್ಲಿ ನಡೆಯಿತು.

ಕೊಲ್ನಾಡು ಶಾಖೆಯ ಅಧ್ಯಕ್ಷ ಯಾಸರ್ ಅರಫಾತ್ ಅಧ್ಯಕ್ಷತೆ ವಹಿಸಿದ್ದರು. ಕೊಲ್ನಾಡು ಅಲ್ಖುಬಾ ಜುಮಾ‌ ಮಸೀದಿಯ ಖತೀಬ್ ಶರೀಫ್ ದಾರಿಮಿ ಅಲ್ ಹೈತಮಿ "ಅಸೂಯೆಯಿಂದ ದೂರವಿರಿ ಬೆಂಕಿಯು ಕಟ್ಟಿಗೆಯನ್ನು ನುಂಗಿದಂತೆ ಅಸೂಯೆಯು ಸತ್ಕರ್ಮಗಳನ್ನು ನುಂಗುತ್ತದೆ" ಎಂಬ ವಿಷಯದ ಕುರಿತು ಮುಖ್ಯ ಪ್ರಭಾಷಣ ನಡೆಸಿದರು.‌

ಈ ಸಂದರ್ಭ ಎಸ್ಕೆಎಸ್ಸೆಸ್ಸೆಫ್ ನ ಮುಖಂಡರು, ಸ್ಥಳೀಯರು‌ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News