×
Ad

ಪಕ್ಷಿಕೆರೆ: ನವೀಕೃತ ಮಸೀದಿಯ ವಕ್ಫ್ ನಿರ್ವಹಣೆ, ಉದ್ಘಾಟನಾ ಸಮಾರಂಭ

Update: 2022-03-19 23:56 IST

ಮುಲ್ಕಿ, ಮಾ. 19: ಬದ್ರಿಯಾ ಜುಮಾ‌ ಮಸೀದಿ ಪಕ್ಷಿಕೆರೆ ಇದರ 41ನೇ ವಾರ್ಷಿಕ ಹಾಗೂ ನವೀಕೃತ ಮಸೀದಿಯ ವಕ್ಫ್ ನಿರ್ವಹಣೆ ಮತ್ತು ಉದ್ಘಾಟನಾ ಸಮಾರಂಭದ ಉದ್ಘಾಟನಾ ಕಾರ್ಯಕ್ರಮ ಶನಿವಾರ ಜುಮಾ‌ ಮಸೀದಿಯ ವಠಾರದಲ್ಲಿ ನಡೆಯಿತು.

ಮತ ಪ್ರಭಾಷಣ ಕಾರ್ಯಕ್ರಮವನ್ನು ಉದ್ಘಾಟಿಸಿ‌ ಮಾತನಾಡಿದ‌ ಅಲ್ ಮದರಸತ್ತುನ್ನೂರಾನಿಯಾ ಪಕ್ಷಿಕೆರೆಯ ಸದರ್‌ ಮುಅಲ್ಲಿಮ್ ಅಲ್ಹಾಜ್ ಮುಹಮ್ಮದ್ ಹನೀಫ್ ಸಅದಿ,  ಸಣ್ಣ ಊರಾಗಿರುವ ಪಕ್ಷಿಕೆರೆಯಲ್ಲಿ ಯುವ ಸಮುದಾಯದ ಹುಮ್ಮಸ್ಸು ಹಾಗೂ ಹಿರಿಯರ ಪ್ರೋತ್ಸಾಹದ ಫಲವಾಗಿ ಬದ್ರಿಯಾ ಜುಮಾ ಮಸೀದಿ  ಪುನರ್ ನಿರ್ಮಾಣ ಮಾಡಲು ಸಾಧ್ಯವಾಗಿದೆ. ಇಂತಹಾ ಯುವಕರು ಮತ್ತು ಅವರನ್ನು ಹುರಿದುಂಬಿಸಿ ಧಾರ್ಮಿಕ ಕಾರ್ಯಕ್ರಮಗಳಲ್ಲಿ ತೋಡಗಿಕೊಳ್ಳುವಂತಾಗಬೇಕು ಎಂದು ನುಡಿದರು.

ಅಧ್ಯಕ್ಷತೆಯನ್ನು ಬದ್ರಿಯಾ ಜುಮಾ‌ ಮಸೀದಿಯ ಅಧ್ಯಕ್ಷ ಅಲ್ಹಾಜ್ ಕೆ.ಯು. ಮುಹಮ್ಮದ್ ನೂರಾನಿಯಾ ವಹಿಸಿ ಮಾತನಾಡಿದರು.

ದುಆ ಆಶೀರ್ವಚನವನ್ನು ಬದ್ರಿಯಾ ಜುಮಾ‌ ಮಸೀದಿಯ ಖತೀಬ್ ಅಬೂರಾಶಿದ ಎಂ. ಆದಂ ಅಮಾನಿ ನೆರವೇರಿಸಿದರು. ಅಲ್ ಮದರಸತ್ತುನ್ನೂರಾನಿಯಾದ ಮುಅಲ್ಲಿಮ್ ಕಲಂದರ್ ಶರೀಫ್ ಸಾದಿ ಅವರು, " ಔಲಿಯಾಗಳ ಅದ್ಭುತ ಜಗತ್ತು"  ಎಂಬ ಕುರಿತು ವಿಶೇಷ ಉಪನ್ಯಾಸ‌ ನೀಡಿದರು.

ಜುಮಾ ಮಸೀದಿ ಸಮಿತಿಯ ಸದಸ್ಯ ಕೆ.ಎಂ. ಅಶ್ರಫ್ ಅಂಜದಿ, ಕೆ.ಪಿ.  ಸಫ್ವಾನ್ ,  ಕೆ.ಪಿ.  ಪಲ್ಲಿಕುಟ್ಟಿ , ಕೆ.ಎಮ್. ಮೊಯ್ದೀನ್ ಬಾವ, ಮಾಜಿ ಅಧ್ಯಕ್ಷ ಹಮೀದ್ ಮೊದಲಾದವರು ಉಪಸ್ಥಿತರಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News