ಅಫ್ಗಾನ್: ಮೂವರು ಪತ್ರಕರ್ತರ ಬಿಡುಗಡೆ

Update: 2022-03-19 18:38 GMT

ಕಾಬೂಲ್, ಮಾ.19: ಅಂತರಾಷ್ಟ್ರೀಯ ಒತ್ತಡಕ್ಕೆ ಮಣಿದ ಅಫ್ಗಾನ್‌ನ ತಾಲಿಬಾನ್ ಆಡಳಿತ ಮೂವರು ಬಂಧಿತ ಪತ್ರಕರ್ತರನ್ನು ಬಿಡುಗಡೆಗೊಳಿಸಿದೆ ಎಂದು ವರದಿಯಾಗಿದೆ.

ಟೋಲೋ ನ್ಯೂಸ್‌ನ ನಿರ್ದೇಶಕ ಖುಪೂಲ್ವಕ್ ಸಪಾಯ್, ಮೋಬಿ ಸಮೂಹ ಸಂಸ್ಥೆಯ ಕಾನೂನು ವ್ಯವಸ್ಥಾಪಕ ನಫಿ ಖಲೀಖ್, ಟೋಲೂ ನ್ಯೂಸ್ ಪ್ರಸ್ತುತಪಡಿಸುವ ಬಹ್ರಾಮ್ ಅಮಾನ್ ಬಂಧನದಿಂದ ಬಿಡುಗಡೆಗೊಂಡವರು.

 ಮಾಧ್ಯಮ ಸಂಸ್ಥೆಯಾಗಿ, ನಮ್ಮ ಕ್ರಿಯೆಗಳು ಸರಕಾರ ಮತ್ತು ಜನತೆಯ ನಡುವೆ ಸಂಪರ್ಕ ಸೇತುವೆಯಾಗಿದ್ದವು. ಜನತೆಗೆ ಮಾಹಿತಿಯನ್ನು ರವಾನಿಸುವುದು ನಮ್ಮ ಕಾರ್ಯವಾಗಿದೆ. ಆದ್ದರಿಂದ ಮಾಧ್ಯಮ ಅಥವಾ ಟೋಲೊ ನ್ಯೂಸ್‌ಗೆ ಸಂಬಂಧಿಸಿದ ಯಾವುದೇ ಸಮಸ್ಯೆಯನ್ನು ಮಾಹಿತಿ ಮತ್ತು ಸಂಸ್ಕೃತಿ ಇಲಾಖೆಯ ಮೂಲಕ ನಮ್ಮೊಂದಿಗೆ ಹಂಚಿಕೊಳ್ಳಬೇಕು ಎಂದು ಟೋಲೊ ನ್ಯೂಸ್ ವೆಬ್‌ಸೈಟ್ ಹೇಳಿಕೆ ನೀಡಿದೆ. ಕಳೆದ ಆಗಸ್ಟ್‌ನಲ್ಲಿ ಅಫ್ಗಾನಿಸ್ತಾನದಲ್ಲಿ ತಾಲಿಬಾನ್ ಮತ್ತೆ ಅಧಿಕಾರಕ್ಕೆ ಬಂದ ಬಳಿಕ ಭಿನ್ನಾಭಿಪ್ರಾಯದ ಧ್ವನಿ ಮತ್ತು ಅಲ್ಪಸಂಖ್ಯಾತರನ್ನು ಹತ್ತಿಕ್ಕುವ ಪ್ರಕ್ರಿಯೆ ನಡೆದಿದ್ದು ಆ ಸಂದರ್ಭ ಈ ಮೂವರು ಪತ್ರಕರ್ತರನ್ನು ಬಂಧಿಸಲಾಗಿತ್ತು. ಬಂಧನವನ್ನು ಅಂತಾರಾಷ್ಟ್ರೀಯ ಸಂಸ್ಥೆಗಳು ಹಾಗೂ ಮಾನವ ಹಕ್ಕು ಸಂಘಟನೆ ತೀವ್ರವಾಗಿ ಖಂಡಿಸಿತ್ತು. ಟೋಲೊ ನ್ಯೂಸ್‌ನ ಪತ್ರಕರ್ತರನ್ನು ತಕ್ಷಣ ಬಿಡುಗಡೆಗೊಳಿಸಿ ದೇಶದ ಮಾಧ್ಯಮ ಸಮುದಾಯದೊಂದಿಗೆ ರಚನಾತ್ಮಕ ಮಾತುಕತೆ ನಡೆಸಬೇಕೆಂದು ಅಫ್ಗಾನಿಸ್ತಾನದಲ್ಲಿನ ವಿಶ್ವಸಂಸ್ಥೆಯ ನಿಯೋಗ ಆಗ್ರಹಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News