×
Ad

ಬಜೆಟ್ ನಲ್ಲಿ ದಲಿತರ ಯೋಜನೆಗಳಿಗೆ ಅನುದಾನ ಕಡಿತ: ಗೋಪಾಲಕೃಷ್ಣ ಅರಳಹಳ್ಳಿ

Update: 2022-03-20 12:04 IST

ಮಂಗಳೂರು, ಮಾ.20: ಕೇಂದ್ರ ಮತ್ತು ಕರ್ನಾಟಕ ರಾಜ್ಯ ಸರಕಾರವು ಬಜೆಟ್ ನಲ್ಲಿ ದಲಿತರ ಯೋಜನೆಗಳಿಗೆ ಅನುದಾನ ಕಡಿತ ಮಾಡುವ ಮೂಲಕ ದಲಿತ ವಿರೋಧಿ ನೀತಿಯನ್ನು ಅನುಸರಿಸುತ್ತಿದೆ ಎಂದು ದಲಿತ ಹಕ್ಕುಗಳ ಸಮಿತಿಯ ರಾಜ್ಯ ಸಮಿತಿಯ ಸಂಚಾಲಕ ಗೋಪಾಲಕೃಷ್ಣ ಅರಳಹಳ್ಳಿ ಎಂದು ಆರೋಪಿಸಿದ್ದಾರೆ.

ಬಲ್ಮಠ ಶಾಂತಿನಿಲಯದ ಬಳಿಯ ಯು.ಬಿ.ಎಂ.ಸಿ. ಕುದ್ಮುಲ್ ರಂಗರಾವ್ ವೇದಿಕೆಯ ಗೋಕುಲ್ ದಾಸ್ ನಗರದ ಸಭಾಂಗಣದಲ್ಲಿಂದು ಮಂಗಳೂರು ದಲಿತ ಹಕ್ಕು ಗಳ ಸಮಿತಿಯ ವತಿಯಿಂದ ಹಮ್ಮಿಕೊಂಡಿದ್ದ ದೌರ್ಜನ್ಯ, ದಬ್ಬಾಳಿಕೆ, ನಿರುದ್ಯೋಗ, ಅಸಮಾನತೆಗಳ ವಿರುದ್ಧದ 'ದಲಿತ ಚೈತನ್ಯ ಸಮಾವೇಶ'ವನ್ನು ಉದ್ದೇಶಿಸಿ ಅವರು ಮಾತನಾಡುತ್ತಿದ್ದರು.

ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವವರು ಸಂಘ ಪರಿವಾರದ ದಿಕ್ಸೂಚಿಯಲ್ಲಿ ರಾಜ್ಯವನ್ನು ಕೋಮುವಾದದ ಉಗ್ರಾಣ ಮಾಡಲು ಹೊರಟಿದ್ದಾರೆ. ರಾಜ್ಯದಲ್ಲಿ ದಲಿತರ ಮೇಲಿನ ದೌರ್ಜನ್ಯ ಹೆಚ್ಚುತ್ತಿದೆ. ಪ್ರಜಾಪ್ರಭುತ್ವ ವ್ಯವಸ್ಥೆಯನ್ನು  ದುರ್ಬಲಗೊಳಿಸುವ ಪ್ರಯತ್ನ, ಸಂವಿಧಾನ ದತ್ತ ದಲಿತರ ಹಕ್ಕುಗಳನ್ನು ನಿರಾಕರಿಸುವ ಘಟನೆಗಳು ಹೆಚ್ಚುತ್ತಿವೆ ಎಂದು ಎಂದು ಆತಂಕ ವ್ಯಕ್ತಪಡಿಸಿದರು.

ಭೂಮಿ ಒಡೆತನದ ಯೋಜನೆಗೆ ಸರಕಾರ ಹಣ ಬಿಡುಗಡೆ ಮಾಡುತ್ತಿಲ್ಲ. ದಲಿತ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ಬಿಡುಗಡೆಯಾಗುತ್ತಿಲ್ಲ. ಈ ಸಂದರ್ಭದಲ್ಲಿ ಸಮಾನತಯ ಆಶಯದಲ್ಲಿ, ದಲಿತರಲ್ಲಿ ಚೈತನ್ಯ ತುಂಬಲು ಈ ಸಮಾವೇಶ ಹಮ್ಮಿಕೊಳ್ಳಲಾಗಿದೆ ಎಂದರು

ಪ್ರಾಸ್ತಾವಿಕವಾಗಿ ಮಾತನಾಡಿದ ಡಾ.ಕೃಷ್ಣಪ್ಪ ಕೊಂಚಾಡಿ, ಸಮಾವೇಶ  ದಲಿತರ ಮೇಲಿನ ದೌರ್ಜನ್ಯ, ದಬ್ಬಾಳಿಕೆ, ನಿರುದ್ಯೋಗ, ಅಸಮಾನತೆಯ ವಿರುದ್ಧವಾದ ಹೋರಾಟದ ನಿಟ್ಟಿನಲ್ಲಿ ಪ್ರಮುಖ ಹೆಜ್ಜೆ ಯಾಗಿದೆ ಎಂದರು.

 ಸಭೆಯ ಅಧ್ಯಕ್ಷ ತೆಯನ್ನು ಮಂಗಳೂರು ದಲಿತ ಹಕ್ಕು ಗಳ ಸಮಿತಿಯ ಅಧ್ಯಕ್ಷ  ನಾಗೇಂದ್ರ ವಹಿಸಿದ್ದರು.

ವೇದಿಕೆಯಲ್ಲಿ ಸಂಘಟನೆಯ ಮುಖಂಡ ರಾದ ತಿಮ್ಮಯ್ಯ, ಕೆ.ಕೃಷ್ಣಪ್ಪ ಕೊಣಾಜೆ, ಡಿವೈಎಫ್ ಐ ಮುಖಂಡರಾದ ಸಂತೋಷ್ ಕುಮಾರ್, ಅಹ್ಮದ್ ಬಶೀರ್, ದಲಿತ ಮುಖಂಡರಾದ ರಾಧಾಕೃಷ್ಣ, ಚಂದ್ರಶೇಖರ್, ನಾರಾಯಣ ತಲಪಾಡಿ, ಸುರೇಶ್, ಶಶಿಕಲಾ, ರಾಮಕೃಷ್ಣ ನಂತೂರು, ರವಿ, ಶಿವಾನಂದ ಮೊದಲಾದ ವರು ಉಪಸ್ಥಿತರಿದ್ದರು.

ಯೋಗೀಶ್ ಜಪ್ಪಿನಮೊಗರು, ಪ್ರವೀಣ್ ಕೊಂಚಾಡಿ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News