ಹಿಜಾಬ್ ವಿವಾದದ ಹಿಂದಿದೆ ಹಿಂದುತ್ವ ರಾಜಕೀಯ ಅಜೆಂಡಾ !

Update: 2022-03-20 15:45 GMT
Photo: Thenewsminute.com

ಕರ್ನಾಟಕ ಬಿಜೆಪಿ ಸರಕಾರವು ವಿದ್ಯಾಸಂಸ್ಥೆಗಳಲ್ಲಿ ಹಿಜಾಬ್‌ ನಿಷೇಧ ಮಾಡಿದ್ದನ್ನು ಎತ್ತಿಹಿಡಿದ ಹೈಕೋರ್ಟ್‌ ರಾಜಕೀಯ ಹಿತಾಸಕ್ತಿಯ ವಾತಾವರಣದಲ್ಲೇ ತೀರ್ಪನ್ನು ನೀಡಿದೆ.   ಹಿಜಾಬ್‌ ಪ್ರಕರಣದ ಕುರಿತಾದ ಈ 129 ಪುಟಗಳ ತೀರ್ಪು, ವಿಚಾರಣೆ ಪ್ರಕ್ರಿಯೆ ನಡೆಯುತ್ತಿರುವಾಗ ಹೊರಗಡೆ ಸೃಷ್ಟಿಯಾಗಿದ್ದ ಉದ್ವಿಗ್ನ ಪರಿಸ್ಥಿತಿಯನ್ನು ಸಂಪೂರ್ಣವಾಗಿ ಮರೆತು ಬಿಟ್ಟಿದೆ. 

ಸಾರ್ವಜನಿಕ ಹಿತಾಸಕ್ತಿಯಾಗಬೇಕಿದ್ದ ಅರ್ಜಿಗಳನ್ನು ತ್ರಿಸದಸ್ಯ ನ್ಯಾಯಪೀಠವು ವಜಾಗೊಳಿಸಿತು. ಮಾತ್ರವಲ್ಲ, ಇದನ್ನು ಹಿಜಾಬ್‌ ಧಾರಿ ವಿದ್ಯಾರ್ಥಿನಿಯರು ಮತ್ತು ಅಧಿಕಾರದ ನಡುವಿನ ಪ್ರಕರಣವಾಗಿ ಸೀಮಿತಗೊಳಿಸಿಬಿಟ್ಟಿತು ಮತ್ತು ಪ್ರಮುಖ ವಿಚಾರಗಳಿಗೆ ಮಾತ್ರ ಇದನ್ನು ನಿರ್ಬಂಧಿಸಿತು.

ಮೊದಲನೆಯದಾಗಿ, ಹಿಜಾಬ್‌ ಧರಿಸುವುದು ಇಸ್ಲಾಂ ಆಚರಣೆಯ ಅತ್ಯಗತ್ಯ ಭಾಗವೇ? ಎರಡನೇಯದಾಗಿ, ಶಿಕ್ಷಣ ಸಂಸ್ಥೆಗಳು ಸಮವಸ್ತ್ರ ಹೇರುವುದರ ಮೂಲಕ ಮೂಲಭೂತ ಹಕ್ಕುಗಳನ್ನು ಉಲ್ಲಂಘಿಸುತ್ತಿದೆಯೇ? ಮೂರು, ಕರ್ನಾಟಕ ಸರ್ಕಾರದ ಹಿಜಾಬ್ ನಿಷೇಧ ಆದೇಶವು ನಿರಂಕುಶ ಮತ್ತು ಕಾನೂನು ವಿರೋಧಿಯಾಗಿದೆಯೇ? ನಾಲ್ಕನೆಯದಾಗಿ, ಉಡುಪಿಯ ಕಾಲೇಜು ಅಧಿಕಾರಿಗಳು ಕಾನೂನು ಬಾಹಿರವಾಗಿ ವರ್ತಿಸುತ್ತಿದ್ದಾರೆಯೇ? ಎಂಬ ವಿಷಯಗಳಲ್ಲಿ ನ್ಯಾಯಾಲಯವು ಕಾಳಜಿ ವಹಿಸಿತು. 

ನ್ಯಾಯಾಲಯವು ʼನಿಷ್ಪಕ್ಷಪಾತ ಘಟಕವಾಗಿದೆ ಮತ್ತು ಯಾವುದೇ ಹೊರಗಿನ ಪರಿಗಣನೆಗಳಿಗೆ ಕಾಳಜಿ ವಹಿಸಬಾರದುʼ ಎನ್ನಲು ಕೆಲವರು ಕಣ್ಣಿಗೆ ಬಟ್ಟೆ ಕಟ್ಟಿದ ನ್ಯಾಯದೇವತೆಯೆಡೆಗೆ ಬೆರಳು ತೋರಿಸಬಹುದು. ಆದರೆ ಈ ಪ್ರಕರಣದ ತೀರ್ಪಿನ ಬಗ್ಗೆ, ಕರ್ನಾಟಕದ ಬೀದಿಗಳು ಮತ್ತು ಸಾರ್ವಜನಿಕ ಸಂಸ್ಥೆಗಳಲ್ಲಿ ಕಲುಷಿತ ವಾತಾವರಣವನ್ನು ಸೃಷ್ಟಿಸಲು ಹೊರಟವರ ಕ್ರೂರತನಕ್ಕೆ ನ್ಯಾಯಾಂಗವು ಕುರುಡಾಗುವುದಿಲ್ಲ ಎಂಬ ಭರವಸೆ ಇತ್ತು.
 
 ಇಸ್ಲಾಂ ಧರ್ಮದ ಆಚರಣೆಗೆ ಹಿಜಾಬ್ ಧರಿಸುವುದು ಅನಿವಾರ್ಯವಲ್ಲ, ಅದು ಕಡ್ಡಾಯವಲ್ಲ ಎಂದು ಕೋರ್ಟ್‌ ಆದೇಶವು ಹೇಳುತ್ತದೆ. 1,400 ವರ್ಷಗಳಷ್ಟು ಹಳೆಯದಾದ ಧರ್ಮದ ಅಗತ್ಯ ಆಚರಣೆಗಳ ಬಗ್ಗೆ ತೀರ್ಪು ನೀಡುವ ಮೂಲಕ ಮತ್ತು ಹಿಜಾಬ್ ಸಾರ್ವಜನಿಕ ಸುವ್ಯವಸ್ಥೆಗೆ ಭಂಗ ತರುತ್ತದೆಯೇ ಎಂದಷ್ಟೇ ಪರಿಶೀಲಿಸುವ ಮೂಲಕ, ರಾಜ್ಯದಲ್ಲಿ ಅಧಿಕಾರದಲ್ಲಿರುವ ಸರ್ಕಾರವು ಹಿಜಾಬ್ ಧರಿಸಿರುವ ಮಹಿಳೆಯರಿಗೆ ಸಾರ್ವಜನಿಕವಾಗಿ ಕಿರುಕುಳ ನೀಡಿದ ʼಕೇಸರಿ ಧಾರಿʼ ಗುಂಪನ್ನು ಸಹಾನುಭೂತಿಯಿಂದ ನೋಡುತ್ತಿದೆ ಎಂಬ ಅಂಶವನ್ನು ನ್ಯಾಯಾಲಯವು ಸಂಪೂರ್ಣವಾಗಿ ಕಡೆಗಣಿಸಿದಂತೆ ಕಂಡುಬರುತ್ತದೆ.
 
ಹಿಜಾಬ್ ಧರಿಸಿದವರ ನಂಬಿಕೆಯನ್ನು ತನಿಖೆ ಮಾಡುವುದು ಸೂಕ್ತವೆಂದು ಭಾವಿಸಿದ ಅದೇ ನ್ಯಾಯಾಧೀಶರು, ಹಿಜಾಬ್ ಅನ್ನು ವಿರೋಧಿಸುವವರ ಧಾರ್ಮಿಕ ಮತ್ತು ರಾಜಕೀಯ ಉದ್ದೇಶಗಳನ್ನು ಪರಿಶೀಲಿಸುವುದು ಅನಿವಾರ್ಯ ಎಂದು ಭಾವಿಸಿಲ್ಲ. ಪ್ರಕರಣದ ಸುತ್ತಲಿನ ಸಾಮಾಜಿಕ ಮತ್ತು ರಾಜಕೀಯ ಅಂಶಗಳನ್ನು ಗಣನೆಗೆ ತೆಗೆದುಕೊಳ್ಳದಿರುವ ಮೂಲಕ, ನ್ಯಾಯಾಲಯವು ವಾಸ್ತವಗಳಿಂದ ದೂರ ಸರಿದು  ಕೃತಕ ಬುಗ್ಗೆಯೊಂದನ್ನು ಮಾತ್ರ ಸೃಷ್ಟಿಸಿದೆ. ಈ  ವಿಷಯದಲ್ಲಿ ನ್ಯಾಯಲಯವು ವಿಶಾಲ ದೃಷ್ಟಿಕೋನವನ್ನು ಬಳಸಿದ್ದಿದ್ದರೆ, ಚುನಾಯಿತ ಪ್ರತಿನಿಧಿಗಳು, ಮಂತ್ರಿಗಳು ಮತ್ತು ಪೊಲೀಸರು ಈ ಅಶಾಂತಿಯ ಸಂದರ್ಭದಲ್ಲೂ ಉದ್ವಿಗ್ನತೆಯನ್ನು ಹೆಚ್ಚಿಸುವ ರೀತಿಯನ್ನು ನ್ಯಾಯಾಧೀಶರಿಗೆ ನೋಡಲು ಸಾಧ್ಯವಾಗುತ್ತಿತ್ತು.

ಸಾರ್ವಜನಿಕ ಸ್ಥಳಗಳಲ್ಲಿ ಹಿಜಾಬ್ ಮೇಲೆ ನಿರ್ಬಂಧಗಳನ್ನು ಹೇರುವುದು ಸಮಂಜಸವಾಗಿದೆ ಎಂಬ ತೀರ್ಮಾನಕ್ಕೆ ಬರುವಲ್ಲಿ ನ್ಯಾಯಾಲಯವು 'ಸಾರ್ವಜನಿಕ ಸುವ್ಯವಸ್ಥೆʼ ಕಾಪಾಡುವುದನ್ನು ಪದೇ ಪದೇ ಉಲ್ಲೇಖಿಸಿದೆ. ಆದೇಶದ ಆಧಾರದಲ್ಲೇ ಹೇಳುವುದಾದರೆ, ಹಿಜಾಬ್‌ ಅನ್ನು ಕಳಚುವಂತೆ ಸಾರ್ವಜನಿಕವಾಗಿ ಬೆದರಿಕೆ ಹಾಕುವ ಉದ್ರಿಕ್ತ ಗುಂಪಿಗಿಂತಲೂ, ಹಿಜಾಬ್ ಧರಿಸಿರುವ ಮಹಿಳೆ ಸಾರ್ವಜನಿಕ ಸುವ್ಯವಸ್ಥೆಗೆ ದೊಡ್ಡ ಬೆದರಿಕೆ ಎಂದು ನಾವು ಭಾವಿಸಬೇಕೇ?
 
ಅಲ್ಲದೆ, ಈ ವಿವಾದವನ್ನು ಮುಸ್ಲಿಂ ವಿದ್ಯಾರ್ಥಿನಿಯರ ಗುಂಪು ಮತ್ತು ಸರ್ಕಾರಿ ಅಧಿಕಾರಿಗಳ ನಡುವಿನ ನ್ಯಾಯ ತೀರ್ಮಾನಕ್ಕಷ್ಟೇ ಸೀಮಿತಗೊಳಿಸುವ ಮೂಲಕ, ಅರ್ಜಿದಾರರು (ವಿದ್ಯಾರ್ಥಿನಿಯರು) ತಮ್ಮೊಂದಿಗೆ ಇಡೀ ಸಮುದಾಯದ ಆಕಾಂಕ್ಷೆಗಳನ್ನು ಹೊತ್ತಿದ್ದಾರೆ ಎಂಬ ವಿಷಯವನ್ನು ನ್ಯಾಯಾಲಯವು ಗುರುತಿಸಿಲ್ಲ. ಮಾತ್ರವಲ್ಲ, ಕಾಲೇಜು ಆಡಳಿತ ಮತ್ತು ಸರ್ಕಾರವು ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪಂಥೀಯ, ಸಂವಿಧಾನ ವಿರೋಧಿ ಮತ್ತು ನಿರ್ದಿಷ್ಟವಾಗಿ ಮುಸ್ಲಿಂ ವಿರೋಧಿ ಸಿದ್ಧಾಂತಕ್ಕೆ ಬದ್ಧವಾಗಿದೆ ಎಂಬ ಅಂಶವನ್ನೂ ನ್ಯಾಯಾಲಯ ನಿರ್ಲಕ್ಷಿಸಿದೆ. 
 
ಈ ವಿಷಯಗಳ ಕಡೆಗೆ ಗಮನಹರಿಸಲು ಸ್ವಲ್ಪ ಮಟ್ಟಿಗೆ ವಸ್ತುನಿಷ್ಠತೆಯ ಅಗತ್ಯವಿರುತ್ತದೆ, ಬಹುಶಃ ನ್ಯಾಯಾಂಗದ ಕಡೆಯಿಂದ ವಿಶಾಲ ಮನಸ್ಸಿನ ಕ್ರಿಯಾಶೀಲತೆಯೂ ಬೇಕಾಗುತ್ತದೆ. ಆದರೆ, ನ್ಯಾಯಾಲಯವು ಸಂಬಂಧಪಟ್ಟ ವಿಷಯಕ್ಕಿಂತ ʼಮುಸ್ಲಿಂ ಮಹಿಳೆಯರನ್ನು ವಿಮೋಚನೆಗೊಳಿಸುವʼ, ʼಇಸ್ಲಾಂ ಆಚರಣೆಯಿಂದ ಹಿಜಾಬ್ ಅನ್ನು ಬೇರ್ಪಡಿಸಲು ಕಾರಣಗಳನ್ನು ಹುಡುಕುವʼಲ್ಲಿ ಹೆಚ್ಚಿನ ಉತ್ಸಾಹ ತೋರಿದೆ.
 
ಉದಾಹರಣೆಗೆ, ನ್ಯಾಯಾಲಯವು, "ಹಿಜಾಬ್‌ ಮಹಿಳೆಯರ ಸ್ವಾತಂತ್ರ್ಯವನ್ನು ನಿರ್ಬಂಧಿಸುವುದಕ್ಕಲ್ಲ, ಆದರೆ ಅಂದಿನ ಕಾಲದಲ್ಲಿ ಮದೀನಾದಲ್ಲಿ ಇದ್ದ ಪರಿಸ್ಥಿತಿಯ ಕಾರಣದಿಂದ ಅವರನ್ನು ಹಾನಿ ಮತ್ತು ಕಿರುಕುಳದಿಂದ ರಕ್ಷಿಸಲು ಬಳಸಲಾಗಿತ್ತು" ಎಂದು ವಿದ್ವಾಂಸ ಮತ್ತು ನ್ಯಾಯಶಾಸ್ತ್ರಜ್ಞ ಅಬ್ದುಲ್ಲಾ ಯೂಸುಫ್ ಅಲಿಯ ಹೇಳಿಕೆಯನ್ನು ಉಲ್ಲೇಖಿಸುತ್ತದೆ.

ಇಂದು ಭಾರತದಲ್ಲಿ ಅಸ್ತಿತ್ವದಲ್ಲಿರುವ ಹೀನಾಯ ಪರಿಸ್ಥಿತಿಗಳ ಬಗ್ಗೆ ನ್ಯಾಯಾಲಯವು ಆಳವಾದ ತಿಳುವಳಿಕೆಯನ್ನು ಹೊಂದಬೇಕೆಂದು ನಿರೀಕ್ಷಿಸುವುದು ಅಸಮಂಜಸವಾಗಿದೆಯೇ? ಹಿಜಾಬಿ ಮಹಿಳೆಯರ ಮೇಲಿನ ಈ ದ್ವೇಷದ ಮೂಲವನ್ನು ಹುಡುಕಲು ನ್ಯಾಯಾಧೀಶರು ಹಿಂದುತ್ವ ಸಿದ್ಧಾಂತದೊಳಗೆ ಗಮನಹರಿಸಬಹುದೇ? ಮುಸ್ಲಿಂ ಮಹಿಳೆ ತನ್ನ ತಲೆಯನ್ನು ಮುಚ್ಚಿಕೊಳ್ಳುವುದರಿಂದ ಹಿಂದೂ ಧರ್ಮ ಅಥವಾ ಹಿಂದುತ್ವದ ಆಚರಣೆಗೆ ಧಕ್ಕೆ ಬರುವಂತಹದ್ದು ಏನಾದರೂ ಇದೆಯೇ? ಹಿಂದುತ್ವವಾದಿಗಳು ತಮ್ಮ ಸಾಮಾಜಿಕ ಮಾಧ್ಯಮಗಳಲ್ಲಿ ಮುಸ್ಲಿಂ ಮಹಿಳೆಯರು, ಹಿಜಾಬ್ ಮತ್ತು ಇಸ್ಲಾಂ ಧರ್ಮದ ಬಗ್ಗೆ ಏನು ಹೇಳುತ್ತಾರೆ? (ಎಂಬುದನ್ನು ಗಮನಿಸುತ್ತದೆಯೇ)

ನ್ಯಾಯಾಲಯದ ಇಂತಹ ವಿವರಣೆಯು ಕೇವಲ ಹಿಜಾಬ್ ಮಾತ್ರವಲ್ಲ, ಮುಸ್ಲಿಮರ ಜೀವನದ ಪ್ರತಿಯೊಂದು ಅಂಶವನ್ನಿಟ್ಟುಕೊಂಡು, ದ್ವೇಷದ ಮೇಲೆ ನಿರ್ಮಿಸಿದ ಕರಾಳ ಪ್ರಪಂಚವೊಂದಕ್ಕೆ ಕರೆದೊಯ್ಯುತ್ತದೆ. ಮುಸ್ಲಿಮರ ವಿರುದ್ಧ ನರಮೇಧಗಳನ್ನು ಉತ್ತೇಜಿಸುವ ಮತ್ತು ಹೆಚ್ಚು ನಿರ್ದಿಷ್ಟವಾಗಿ, ಮುಸ್ಲಿಂ ಮಹಿಳೆಯರ ಮೇಲೆ ಲೈಂಗಿಕ ದಾಳಿಯನ್ನು ಪ್ರೋತ್ಸಾಹಿಸುವ ಅಸಂಖ್ಯಾತ ಸಾಮಾಜಿಕ ಮಾಧ್ಯಮ ಖಾತೆಗಳಿವೆ. 

ಸಲ್ಲಿ ಡೀಲ್ಸ್‌, ಬುಲ್ಲೀ ಬಾಯ್‌ ಮೊದಲಾದ ಅಪ್ಲಿಕೇಶನ್‌ಗಳು ಮುಸ್ಲಿಂ ಪುರುಷರನ್ನು ನಿರ್ವೀಯರನ್ನಾಗಿಸುವ ಮತ್ತು ಮುಸ್ಲಿಂ ಸ್ತ್ರೀಯರನ್ನು (ಲೈಂಗಿಕ) ಗುಲಾಮರನ್ನಾಗಿಸುವ ಸಿದ್ಧಾಂತದ ಅಭಿವ್ಯಕ್ತಿಗಳಾಗಿವೆ. ಇದೀಗ, ದಿ ಕಾಶ್ಮೀರ್‌ ಫೈಲ್ಸ್‌ ಸಿನೆಮಾ ನೋಡಿ ಚಿತ್ರಮಂದಿರದಲ್ಲೇ ಮುಸ್ಲಿಂ ಸ್ತ್ರೀಯರನ್ನು ಬಳಸಿಕೊಂಡು (ಹಿಂದೂ ಪುರುಷರು) ಮಕ್ಕಳನ್ನು ಹೆರುವಂತೆ ಬಹಿರಂಗ ಕರೆ ನೀಡಿರುವ ವ್ಯಕ್ತಿಯದ್ದೂ ಇದೇ ಮನಸ್ಥಿತಿಯಾಗಿದೆ.
 
ನ್ಯಾಯಾಲಯವು ಮಾಡಿದ ʼಕಾನೂನು ಸುವ್ಯವಸ್ಥೆʼಯ ಪುನರಾವರ್ತಿತ ಉಲ್ಲೇಖವು ಕಾನೂನು ಸುವ್ಯವಸ್ಥೆ ಮತ್ತು ನಮ್ಮ ಸಾರ್ವಜನಿಕ ಸ್ಥಳಗಳ ಸ್ವರೂಪದ ಬಗ್ಗೆ ತನಿಖೆಗೆ ಕಾರಣವಾಗಬಲ್ಲದು. ಶಾಲೆಗಳು, ನ್ಯಾಯಾಲಯಗಳು, ವಾರ್‌ ರೂಮ್‌ಗಳು ಮತ್ತು ರಕ್ಷಣಾ ಶಿಬಿರಗಳಂತಹ ʼಅರ್ಹ ಸಾರ್ವಜನಿಕ ಸ್ಥಳʼಗಳಲ್ಲಿ ಶಿಸ್ತು ಮತ್ತು ಶಿಷ್ಟಾಚಾರ ಪಾಲಿಸುವ ಉದ್ದೇಶದ ನಿಟ್ಟಿನಲ್ಲಿ ವ್ಯಕ್ತಿಗಳ ಸ್ವಾತಂತ್ರ್ಯವನ್ನು ಕಡಿಮೆಗೊಳಿಸಲಾಗಿದೆ ಎಂದು ನ್ಯಾಯಾಲಯ ಹೇಳುತ್ತದೆ.

ಆದರೆ, ಎಲ್ಲಾ ವರ್ಷ ಕೋರ್ಟ್‌ ಆವರಣಗಳಲ್ಲಿ ಹಿಂದೂ ವಕೀಲರಿಂದ ವಾರಗಟ್ಟಲೇ ಗಣೇಶ ಚತುರ್ಥಿಗೆ ಪೆಂಡಾಲ್‌ ಹಾಕಲಾಗುತ್ತದೆ. ಅದೇ, ಮುಸ್ಲಿಂ ವಕೀಲರು ಕೋರ್ಟ್‌ ಆವರಣದಲ್ಲಿ ರಮಝಾನ್‌ ತಿಂಗಳಲ್ಲಿ ನಮಾಝ್‌ ಮಾಡಿದರೆ, ಕಾನೂನು ಸುವ್ಯವಸ್ಥೆ ಹದಗೆಡುತ್ತಲ್ಲವೇ? ವಿಧಾನಸೌಧದೊಳಗೆ ಹಿಂದೂ ದೇವಾಲಯ ಇದೆ. ಅದೇ ಸ್ಥಳದಲ್ಲಿ ಚರ್ಚ್‌ ಮತ್ತು ಮಸೀದಿಯನ್ನು ಕಟ್ಟಬಹುದೇ? ಅಲ್ಲದೆ, 'ಅರ್ಹತೆಯಿರುವ ಸಾರ್ವಜನಿಕ ಸ್ಥಳಗಳು' ಎಂಬ ವ್ಯಾಖ್ಯಾನದ ಪ್ರಕಾರ, ಹಿಂದೂ ಮೂಲಭೂತವಾದಿಗಳು ಈಗ ಇತರ ಸಾರ್ವಜನಿಕ ಸ್ಥಳಗಳಲ್ಲಿಯೂ ಹಿಜಾಬ್ ಅನ್ನು ನಿಷೇಧಿಸಲು ಧೈರ್ಯಮಾಡಬಹುದೇ?
 
ಭಾರತೀಯ ಸಂವಿಧಾನ ಶಿಲ್ಪಿ ಬಿ.ಆರ್. ಅಂಬೇಡ್ಕರ್ ಅವರು 1945ರಲ್ಲಿ ಬರೆದ 'ಪಾಕಿಸ್ತಾನ್ ಆರ್ ದಿ ಪಾರ್ಟಿಷನ್ ಆಫ್ ಇಂಡಿಯಾ' (Pakistan or the Partition of India) ಎಂಬ ಪುಸ್ತಕದಲ್ಲಿ ಮುಸ್ಲಿಂ ಸಮಾಜದ ಕುರಿತ ಅವರ ಹೇಳಿಕೆಯೊಂದನ್ನು ಮಾತ್ರ ಆಯ್ದು ಉಲ್ಲೇಖಿಸಿರುವ ರೀತಿಯಿಂದ ಈ ತೀರ್ಪಿನಲ್ಲಿ ಸಾಂದರ್ಭಿಕ ಅಡಿಪಾಯದ ಅನುಪಸ್ಥಿತಿಯು ಸ್ಪಷ್ಟವಾಗಿದೆ. 
 
“...(ಮುಸ್ಲಿಂ) ಮಹಿಳೆಯನ್ನು ತನ್ನ ಮಗ, ಸಹೋದರರು, ತಂದೆ, ಚಿಕ್ಕಪ್ಪ, ಮತ್ತು ಪತಿ, ಅಥವಾ ಯಾವುದೇ ಇತರ ಹತ್ತಿರದ ಸಂಬಂಧಿಕರು ಮಾತ್ರ ನೋಡಲು ಅನುಮತಿಸಲಾಗಿದೆ. ಅವಳು ಪ್ರಾರ್ಥನೆ ಮಾಡಲು ಮಸೀದಿಗೆ ಹೋಗಲು ಸಾಧ್ಯವಿಲ್ಲ ಮತ್ತು ಅವಳು ಹೊರಗೆ ಹೋಗಬೇಕಾದರೆ ಬುರ್ಕಾ ಧರಿಸಬೇಕು. ಈ ಬುರ್ಕಾಧಾರಿ ಮಹಿಳೆ ಬೀದಿಗಳಲ್ಲಿ ಹೋಗುವುದು ಭಾರತದಲ್ಲಿ ಒಬ್ಬರು ನೋಡಬಹುದಾದ ಅತ್ಯಂತ ಭೀಕರ ದೃಶ್ಯವಾಗಿದೆ, ಮುಸ್ಲಿಮರು ಹಿಂದೂಗಳ ಎಲ್ಲಾ ಸಾಮಾಜಿಕ ದುಷ್ಟತನಗಳನ್ನು ಹೊಂದಿದ್ದಾರೆ ಮತ್ತು ಹಿಂದೂಗಳಿಗಿಂತ ಇನ್ನೂ ಹೆಚ್ಚಿನದನ್ನು ಹೊಂದಿದ್ದಾರೆ. ಮುಸ್ಲಿಮ್ ಮಹಿಳೆಯರಿಗೆ ಕಡ್ಡಾಯವಾದ ಪರ್ದಾ ವ್ಯವಸ್ಥೆಯು ಇಂತಹದ್ದರಲ್ಲಿ ಒಂದು... ಹೊರಗಿನ ಪ್ರಪಂಚದಿಂದ ಸಂಪೂರ್ಣವಾಗಿ ಪ್ರತ್ಯೇಕವಾಗಿರುವ ಅವರು ತಮ್ಮ ದೃಷ್ಟಿಕೋನದಲ್ಲಿ ಸಂಕುಚಿತ ಮತ್ತು ನಿರ್ಬಂಧಿತರಾಗಿ ತಮ್ಮ ಮನಸ್ಸನ್ನು ಸಣ್ಣ ಕೌಟುಂಬಿಕ ಕಲಹಗಳಲ್ಲಿ ತೊಡಗಿಸಿಕೊಳ್ಳುತ್ತಾರೆ.... ಅವರು ಯಾವುದೇ ಹೊರಾಂಗಣ ಚಟುವಟಿಕೆಯಲ್ಲಿ ಭಾಗವಹಿಸಲು ಸಾಧ್ಯವಿಲ್ಲ ಮತ್ತು ಗುಲಾಮ ಮನಸ್ಥಿತಿ ಮತ್ತು ಕೀಳರಿಮೆ ಸಂಕೀರ್ಣದಿಂದ ಬಳಲುತ್ತಾರೆ ... ನಿರ್ದಿಷ್ಟವಾಗಿ ಪರ್ದಾಧಾರಿ ಮಹಿಳೆಯರು ಅಸಹಾಯಕರಾಗುತ್ತಾರೆ, ಅಂಜುಬುರುಕರಾಗುತ್ತಾರೆ ... ಭಾರತದಲ್ಲಿನ ಮುಸ್ಲಿಮರಲ್ಲಿ ಹೆಚ್ಚಿನ ಸಂಖ್ಯೆಯ ಪರ್ದಾಧಾರಿ ಮಹಿಳೆಯರನ್ನು ಪರಿಗಣಿಸಿ, ಒಂದು ಪರ್ದಾ ಸಮಸ್ಯೆಯ ಅಗಾಧತೆ ಮತ್ತು ಗಂಭೀರತೆಯನ್ನು ಸುಲಭವಾಗಿ ಅರ್ಥಮಾಡಿಕೊಳ್ಳಬಹುದು…ಪರ್ದಾ ವ್ಯವಸ್ಥೆಯ ಪರಿಣಾಮವಾಗಿ, ಮುಸ್ಲಿಂ ಮಹಿಳೆಯರಲ್ಲಿ ಪ್ರತ್ಯೇಕತೆಯನ್ನು ತರಲಾಗುತ್ತದೆ..” (ಅಂಬೇಡ್ಕರ್‌ ಉಲ್ಲೇಖ)

ಇದು ಹಿಂದೂ ಮಹಾಸಭಾ ಮತ್ತು ಮುಸ್ಲಿಂ ಲೀಗ್ ಎಂಬ ಎರಡು ಮೂಲಭೂತವಾದಿ ಶಕ್ತಿಗಳ ಪೈಪೋಟಿಯ ಹಕ್ಕುಗಳನ್ನು ಪರಿಶೀಲಿಸುವ ದ್ವಿ ರಾಷ್ಟ್ರ ಸಿದ್ಧಾಂತದ ಸಂದರ್ಭವನ್ನು ಉಲ್ಲೇಖಿಸಿ ಅಂಬೇಡ್ಕರ್ ಅವರು ಬರೆದ ಪುಸ್ತಕದಿಂದ ನ್ಯಾಯಾಲಯವು ತೀರ್ಪಿನ ಸಂದರ್ಭದಲ್ಲಿ ಉಲ್ಲೇಖಿಸಲು ಆಯ್ಕೆಮಾಡುವುದು ಭಯಾನಕ ವಿಚಾರವಾಗಿದೆ.

ಅಂಬೇಡ್ಕರ್‌ ಅವರ ಕಾಲಘಟ್ಟದಲ್ಲಿ ನಿಸ್ಸಂದೇಹವಾಗಿಯೂ  ಅಂಬೇಡ್ಕರ್ ಓರ್ವ ಶ್ರೇಷ್ಟ ಸಮಾಜ ಸುಧಾರಕರೂ, ಬುದ್ಧಿಜೀವಿಯೂ ಆಗಿದ್ದರು. ಆದರೆ, ಪರ್ದಾ ವಿಷಯದಲ್ಲಿ ಅವರ ಈ ಅಭಿಪ್ರಾಯವು ಸಮಸ್ಯಾತ್ಮಕವಾಗಿದೆ. ಇದಲ್ಲದೆ, ಅಂಬೇಡ್ಕರ್‌ ಅವರ ಅತ್ಯಂತ ಕಟ್ಟಾ ಅನುಯಾಯಿಗಳು ಸಹ ಅವರನ್ನು ಮುಸ್ಲಿಂ ವಿಮೋಚನೆಯ ಪ್ರಶ್ನೆಯಲ್ಲಿ ಪರಿಣಿತ ಎಂದು ಒಪ್ಪಲು ಹಿಂಜರಿಯುತ್ತಾರೆ. 
 
ಜಾಗತಿಕ ಇಸ್ಲಾಮೋಫೋಬಿಯಾ ಮತ್ತು ಭಾರತದಲ್ಲಿನ ಉಗ್ರ ಹಿಂದುತ್ವದ ಕಾಲದಲ್ಲಿ, ಅಸಂಖ್ಯಾತ ಮುಸ್ಲಿಂ ಮಹಿಳೆಯರು ಇಸ್ಲಾಮಿನ ಪರ್ದಾವನ್ನು ತಮ್ಮ ಸಾಂಸ್ಕೃತಿಕ ಸಂಕೇತವಾಗಿ ಮತ್ತು ಸಮುದಾಯದ ಮೇಲಿನ ಆಯ್ದ ದಾಳಿ ವಿರುದ್ಧ ಪ್ರತಿರೋಧದ ಸಂಕೇತವಾಗಿ ಮತ್ತೊಮ್ಮೆ ಆಯ್ದುಕೊಂಡಿದ್ದಾರೆ.  ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿರುವ ಯುವ ಮುಸ್ಲಿಂ ಮಹಿಳೆಯರು ಅಸಹಾಯಕರೋ, ಅಂಜುಬುರುಕರೋ ಅಥವಾ ಕೀಳರಿಮೆಯಿಂದ ಬಳಲುತ್ತಿರುವವರೋ  ಅಥವಾ ಸಂಕುಚಿತ ದೃಷ್ಟಿಕೋನದವರು ಅಥವಾ ಬಾಹ್ಯ ನಿರ್ಬಂಧಿತರೋ ಅಲ್ಲ ಎನ್ನುವುದು ಈಗಾಗಲೇ ಸಾಬೀತಾಗಿದೆ.
 
ಅವರು ಸರಾಸರಿ ವಿದ್ಯಾರ್ಥಿಗಳಿಂತ ಮೇಲ್ಮಟ್ಟದವರು. ಇಂಗ್ಲಿಷ್‌ ಸೇರಿದಂತೆ ಕನಿಷ್ಟ ಮೂರು ಭಾಷೆಗಳಲ್ಲಿ ನಿರರ್ಗಳವಾಗಿ ಮಾತನಾಡಬಲ್ಲವರು. ಅವರ ಸ್ನೇಹಿತರು ಮತ್ತು ಶಿಕ್ಷಕರು ಅವರನ್ನು ʼಸ್ವತಂತ್ರ ಸ್ವಭಾವʼದವರು ಮತ್ತು ತಮ್ಮದೇ ಆದ ಆಲೋಚನೆಗಳನ್ನು ಹೊಂದಿರುವವರು ಎಂದು ವಿವರಿಸುತ್ತಾರೆಯೇ ಹೊರತು ಅಂಬೇಡ್ಕರ್ ತಮ್ಮ ಪುಸ್ತಕದಲ್ಲಿ ವಿವರಿಸುವ ರೀತಿಯ ಕರುಣಾಜನಕ ಜೀವಿಗಳಲ್ಲ. ಅಂಬೇಡ್ಕರ್‌ ಅವರನ್ನು ಉಲ್ಲೇಖಿಸುವ ಮೂಲಕ ಹಿಜಾಬ್‌ ವಿಚಾರದಲ್ಲಿ ಕೋರ್ಟ್‌ ʼನೈತಿಕʼ ಜವಾಬ್ದಾರಿಯ ಸ್ಥಾನ ತುಂಬಲು ಪ್ರಯತ್ನಿಸುತ್ತದೆ. ಆದರೆ ಮುಸ್ಲಿಂ ಮಹಿಳೆಯರನ್ನು ಬೆಂಬಲಿಸುವ ಮತ್ತು ಮುಸ್ಲಿಂ ಸಮಾಜದ ಮತ್ತು ಸಂಸ್ಕೃತಿಯ ಮೇಲೆ ತೀರ್ಪು ನೀಡುವ ಉತ್ಸುಕತೆಯಲ್ಲಿ, ಅಂಬೇಡ್ಕರ್ ಅವರ ಅದೇ ಪುಸ್ತಕದಲ್ಲಿನ ಹಿಂದಿನ ಪ್ರಮುಖ ಭಾಗಗಳನ್ನು ತಪ್ಪಿಸಿಕೊಂಡಿದೆ.
 
ಪುಟ 163 ರಲ್ಲಿ, ಅಂಬೇಡ್ಕರ್ ವಿಡಿ ಸಾವರ್ಕರ್ ಮತ್ತು ಅವರ ಹಿಂದೂ ರಾಷ್ಟ್ರದ ಸಿದ್ಧಾಂತದ ಬಗ್ಗೆ ಕಟುವಾದ ಅವಲೋಕನವನ್ನು ಮಾಡುತ್ತಾರೆ. ಇದು ನಮ್ಮ ಕಾಲಕ್ಕೆ ಮತ್ತು ನಿರ್ದಿಷ್ಟವಾಗಿ ಹಿಜಾಬ್ ಪ್ರಕರಣಕ್ಕೆ ತುಂಬಾ ಪ್ರಸ್ತುತವಾಗಿದೆ:
 
“ಮಿ. ಸಾವರ್ಕರ್ ಅವರು ಇತಿಹಾಸದ ಅಧ್ಯಯನದೊಂದಿಗೆ ವರ್ತಮಾನದ ಕಡೆಗೂ ಹೆಚ್ಚು ಗಮನ ಹರಿಸಿದರೆ, ಸಾವರ್ಕರ್ ಅವರು ತಮ್ಮ ಹಿಂದೂ ಧರ್ಮಕ್ಕೆ ಸಲಹೆ ನೀಡುತ್ತಿರುವಂತಹದ್ದೇ ಸಂಗತಿಗಳ ವ್ಯವಸ್ಥೆಯನ್ನು ಉಳಿಸಿಕೊಳ್ಳಲು ನಿರ್ಬಂಧಿಸಿದ್ದಕ್ಕಾಗಿ ಹಳೆಯ ಆಸ್ಟ್ರಿಯಾ ಮತ್ತು ಹಳೆಯ ಟರ್ಕಿ ನಾಶವಾಯಿತು ಎಂದು ಅವರು ಅರಿಯುತ್ತಿದ್ದರು.  ಅವುಗಳೆಂದರೆ, ಒಂದು ಸ್ವರಾಜ್ಯವನ್ನು ಸ್ಥಾಪಿಸುವುದೆಂದರೆ ಇದರಲ್ಲಿ ಒಂದೇ ಸಂವಿಧಾನದ ಕವಚದ ಅಡಿಯಲ್ಲಿ ಎರಡು ರಾಷ್ಟ್ರಗಳು ಇರುತ್ತವೆ. ಇದರಲ್ಲಿ ಪ್ರಮುಖ ರಾಷ್ಟ್ರವು ಚಿಕ್ಕ ರಾಷ್ಟ್ರವನ್ನು ತನ್ನ ಅಧೀನದಲ್ಲಿ ಹಿಡಿದಿಡಲು ಅವಕಾಶ ನೀಡುತ್ತದೆ. ಸಾವರ್ಕರ್  ರೂಪಿಸಿದ ಸ್ವರಾಜ್ಯ ಯೋಜನೆಯು ಹಿಂದೂಗಳಿಗೆ ಮುಸ್ಲಿಮರ ಮೇಲೆ ಚಕ್ರಾಧಿಪತ್ಯವನ್ನು ನೀಡುತ್ತದೆ ಮತ್ತು ಆ ಮೂಲಕ ಸಾಮ್ರಾಜ್ಯಶಾಹಿ ಜನಾಂಗ ಎಂಬ ಅವರ ದುರಭಿಮಾನ ಮತ್ತು ಹೆಮ್ಮೆಯನ್ನು ತೃಪ್ತಿಪಡಿಸುತ್ತದೆ. ಆದರೆ, ಮುಸ್ಲಿಮರು ಎಂದಿಗೂ ಅಂತಹ ಭೀಕರ ಪರ್ಯಾಯ ವ್ಯವಸ್ಥೆಗೆ  ಮಣಿಯುವುದಿಲ್ಲ ಎಂಬ ಕಾರಣಕ್ಕಾಗಿ ಹಿಂದೂಗಳಿಗೆ ಸ್ಥಿರವಾದ ಮತ್ತು ಶಾಂತಿಯುತ ಭವಿಷ್ಯವನ್ನು ಅದು ಎಂದಿಗೂ ಖಚಿತಪಡಿಸುವುದಿಲ್ಲ.” (ಅಂಬೇಡ್ಕರ್‌ ಬರಹ)

 
ಹಿಂದೂ ಸಾಮ್ರಾಜ್ಯದ ವಿನ್ಯಾಸಗಳ ಹಿನ್ನೆಲೆಯನ್ನಿಟ್ಟುಕೊಂಡು ಹಿಜಾಬ್ ವಿರೋಧಿ ಆಂದೋಲನಗಳನ್ನು ನೋಡುವಲ್ಲಿ ನ್ಯಾಯಾಲಯವು ವಿಫಲವಾಗಿದೆ. ಸಾವರ್ಕರ್ ಅವರ ಸಿದ್ಧಾಂತದ ವಾರಸುದಾರರು ಇಂದು ಅಧಿಕಾರದಲ್ಲಿದ್ದಾರೆ. ಅವರು ಮುಸ್ಲಿಮರ ವಿಶಿಷ್ಟ ಸಾಂಸ್ಕೃತಿಕ ಮತ್ತು ಧಾರ್ಮಿಕ ಗುರುತನ್ನು ಕಿತ್ತೊಗೆಯುವ ಮೂಲಕ ಅವರ ಮೇಲೆ ಹಿಂದೂ ಪ್ರಾಬಲ್ಯವನ್ನು ಸ್ಥಾಪಿಸುವ ಯೋಜನೆಯಲ್ಲಿದ್ದಾರೆ. ಆದರೆ ಸಾವರ್ಕರ್ ಅನುಯಾಯಿಗಳ ‘ಹಿಂದೂಡೊಂ’ ಯೋಜನೆಗೆ ಮಣಿಯದಿರಲು ಮುಸ್ಲಿಂ ಮಹಿಳೆಯರಿಗೆ ಹಿಜಾಬ್ ಒಂದು ಅಸ್ತ್ರವಾಗಿದೆ ಎಂಬ ಅಂಶವನ್ನು ಗಮನಹರಿಸುವ ಸೂಕ್ಷ್ಮತೆಯು ನ್ಯಾಯಾಧೀಶರಿಂದ ಕಂಡುಬಂದಿಲ್ಲ.

"ಅರ್ಧ ಶತಮಾನಗಳ ಹಿಂದೆ ಸಂವಿಧಾನ ಶಿಲ್ಪಿ ಅಂಬೇಡ್ಕರ್‌ ರವರಯ ಪರ್ದಾ ಕುರಿತು ಗಮನಿಸಿರುವ ಅಂಶವು, ಸ್ತ್ರಿ ವಿಮೋಚನೆ ಸಂದರ್ಭದಲ್ಲಿ, ನಿರ್ದಿಷ್ಟವಾಗಿ ಮುಸ್ಲಿಂ ಮಹಿಳೆಯರಿಗೆ ಮಾತ್ರವಲ್ಲದೆ ಎಲ್ಲಾ ಮಹಿಳೆಯರ ಗೂಂಗಟ್, ಶಾಲು ಮೊದಲಾದವುಗಳೊಂದಿಗೆ ಅನ್ವಯಿಸುವ ವಾದಕ್ಕೆ ಕೂಡಾ ಸಾಕಷ್ಟು ಅವಕಾಶವಿದೆ." ಎಂದು ಕೋರ್ಟ್‌ ಹೇಳಿದೆ.
 
ಮುಸ್ಲಿಂ ಮಹಿಳೆಯರ ಸಂರಕ್ಷಕನಾಗುವ ಉತ್ಸಾಹದಲ್ಲಿ, ನ್ಯಾಯಾಧೀಶರು ಮುಸ್ಲಿಂ ಮಹಿಳೆಯರ ರಾಜಕೀಯ ಪ್ರತಿಪಾದನೆಯನ್ನು ಮತ್ತು ಅವರ ಸ್ವಯಂ-ವ್ಯಾಖ್ಯಾನವನ್ನು ಗುರುತಿಸಲು ವಿಫಲರಾಗಿದ್ದಾರೆ ಎಂಬುದು ವಿಪರ್ಯಾಸ. ಮುಸ್ಲಿಂ ಯುವತಿಯರಲ್ಲಿನ ಪ್ರತಿರೋಧದ ಮನೋಭಾವ ಮತ್ತು ಅವರ ಬುದ್ಧಿವಂತಿಕೆಯು ಅವರು ಸಾರ್ವಜನಿಕವಾಗಿ ಮಾತನಾಡುವುದನ್ನು ನೋಡಿದ ಯಾರಿಗಾದರೂ ಸ್ಪಷ್ಟವಾಗಿ ಕಾಣಿಸುತ್ತದೆ.

ಹಿಜಾಬ್ ಮುಸ್ಲಿಂ ಮಹಿಳೆಯರ ದಬ್ಬಾಳಿಕೆಯ ಸಂಕೇತವಾಗಿದೆ ಎಂಬ ಅಭಿಪ್ರಾಯವನ್ನು ತೆಗೆದುಕೊಳ್ಳುವ ಮೂಲಕ, ಬಲಪಂಥೀಯ ಹಿಂದೂ ಪಕ್ಷವಾದ ಬಿಜೆಪಿಯು ಮುಸ್ಲಿಂ ಮಹಿಳೆಯರನ್ನು ಮೂಲಭೂತವಾದಿಗಳ ಹಿಡಿತದಿಂದ ಮುಕ್ತಗೊಳಿಸಲು ಪ್ರಯತ್ನಿಸುತ್ತಿದೆ ಎಂಬ ಅಸಂಬದ್ಧ ಕಲ್ಪನೆಗೆ ನ್ಯಾಯಾಲಯವು ನ್ಯಾಯಸಮ್ಮತತೆಯನ್ನು ನೀಡಿತು. ಈ ದೃಷ್ಟಿಕೋನವು ಹಿಜಾಬಿ ವಿದ್ಯಾರ್ಥಿಗಳನ್ನು ಬೆಂಬಲಿಸುವ ಮುಸ್ಲಿಂ ರಾಜಕೀಯ ಸಂಘಟನೆಗಳ ಮೇಲೆ ನ್ಯಾಯಾಲಯವು ತೀವ್ರವಾಗಿ ದಾಳಿ ನಡೆಸಲು ಆಧಾರವನ್ನು ಸಿದ್ಧಪಡಿಸಿತು.

ತೀರ್ಪಿನಲ್ಲಿ "ಹಿಜಾಬ್ ವಿವಾದವು ಆರಂಭವಾಗಿರುವ ವಿಧಾನವು ಸಾಮಾಜಿಕ ಅಸ್ಥಿರತೆ ಮತ್ತು ಅಶಾಂತಿ ಸೃಷ್ಟಿಸಲು ಕೆಲವು 'ಕಾಣದ ಕೈಗಳು' ಕೆಲಸ ಮಾಡುತ್ತಿವೆ ಎಂಬ ವಾದಕ್ಕೆ ಅವಕಾಶ ನೀಡುತ್ತದೆ. ಶೈಕ್ಷಣಿಕ ಅವಧಿಯ ಮಧ್ಯದಲ್ಲಿ ಅದು ಹೇಗೆ ಇದ್ದಕ್ಕಿದ್ದಂತೆ ಹಿಜಾಬ್‌ನ ಸಮಸ್ಯೆಯನ್ನು ಹುಟ್ಟುಹಾಕುತ್ತದೆ ಎಂಬುವುದರ ಕುರಿತು ನಾವು ದಿಗ್ಭ್ರಮೆಗೊಂಡಿದ್ದೇವೆ. ಹೆಚ್ಚು ನಿರ್ದಿಷ್ಟವಾಗಿ ಹೇಳುವ ಅಗತ್ಯವಿಲ್ಲ. ನಡೆಯುತ್ತಿರುವ ಪೊಲೀಸ್ ತನಿಖೆಯ ಮೇಲೆ ಪರಿಣಾಮ ಬೀರುವಂತೆ ನಾವು ಯಾವುದೇ ಪ್ರತಿಕ್ರಿಯೆ ನೀಡುತ್ತಿಲ್ಲ. ಮುಚ್ಚಿದ ಕವರ್‌ನಲ್ಲಿ ಒದಗಿಸಲಾದ ಪೊಲೀಸ್ ದಾಖಲೆಗಳ ಪ್ರತಿಗಳನ್ನು ಪರಿಶೀಲಿಸಿ, ಹಿಂದಿರುಗಿಸಲಾಗಿದೆ. ಈ ವಿಷಯದ ಬಗ್ಗೆ ತ್ವರಿತ ಮತ್ತು ಪರಿಣಾಮಕಾರಿ ತನಿಖೆಗಾಗಿ ನ್ಯಾಯಾಲಯವು ನಿರೀಕ್ಷೆಯನ್ನು ವ್ಯಕ್ತಪಡಿಸಿದ್ದು, ಅಪರಾಧಿಗಳನ್ನು ಕಾನೂನು ಕ್ರಮಕ್ಕೆ ತರಲು ಯಾವುದೇ ವಿಳಂಬವನ್ನು ಮಾಡಬಾರದು"  ಎಂದು ಹೇಳಲಾಗಿದೆ.

ಆ ಮೂಲಕ, ʼಇಸ್ಲಾಮಿಕ್ ಮೂಲಭೂತವಾದಿಗಳುʼ ವಿವಾದವನ್ನು, ಅಶಾಂತಿಯನ್ನು ಸೃಷ್ಟಿಸಿದ್ದಾರೆ ಎಂಬ ಬಿಜೆಪಿ ರಾಜ್ಯ ಸರ್ಕಾರದ ಹೇಳಿಕೆಯನ್ನು ನ್ಯಾಯಾಲಯವು ಪ್ರಶ್ನಾತೀತ ದೃಷ್ಟಿಕೋನದಲ್ಲಿ ತೆಗೆದುಕೊಂಡಿದೆ ಎಂಬುದು ಸ್ಪಷ್ಟವಾಗಿದೆ.

ಸರ್ಕಾರವು ನ್ಯಾಯಾಲಯಕ್ಕೆ ಸಲ್ಲಿಸಿದ್ದ ಅರ್ಜಿಯಲ್ಲಿ,” ಈ ರಿಟ್ ಅರ್ಜಿಯನ್ನು ಭಾರತದ ಸಂವಿಧಾನದ 226 ನೇ ವಿಧಿಯ ಅಡಿಯಲ್ಲಿ ಸಲ್ಲಿಸಲಾಗಿದೆ. ಕರ್ನಾಟಕ ರಾಜ್ಯವು ಕರ್ನಾಟಕ ಶಿಕ್ಷಣ ಕಾಯಿದೆ 1983 ರ ಅಡಿಯಲ್ಲಿ ಫೆಬ್ರವರಿ 5 2022ರಂದು ಆದೇಶ ಹೊರಡಿಸಿದ ಬಳಿಕ ಮತ್ತು ದೇಶದಾದ್ಯಂತ ಹಿಜಾಬ್‌ ವಿಚಾರದಲ್ಲಿ ನಡೆಯುತ್ತಿರುವ ಬೃಹತ್ ಆಂದೋಲನ ಮತ್ತು ಅಂತಾ

Similar News