ನ್ಯೂಝಿಲ್ಯಾಂಡ್‌ ನಲ್ಲಿ ವಿವಾದಾತ್ಮಕ ‘ದಿ ಕಾಶ್ಮೀರ ಫೈಲ್ಸ್’ ಬಿಡುಗಡೆಗೆ ತಡೆ

Update: 2022-03-20 17:09 GMT

ಹೊಸದಿಲ್ಲಿ, ಮಾ. 20: ವಿವಾದಾತ್ಮಕ ಬಾಲಿವುಡ್ ಚಲನಚಿತ್ರ ‘ದಿ ಕಾಶ್ಮೀರ ಫೈಲ್ಸ್’ ಬಿಡುಗಡೆಗೆ ನ್ಯೂಝಿಲ್ಯಾಂಡ್ ತಡೆ ನೀಡಿದೆ. ನ್ಯೂಝಿಲ್ಯಾಂಡ್ ನ ಸೆನ್ಸಾರ್ ಮಂಡಳಿ ಈ ಹಿಂದೆ ಚಲನಚಿತ್ರ ಬಿಡುಗಡೆಗೆ ಅನುಮತಿ ನೀಡಿತ್ತು.

ಆದರೆ, ಮುಸ್ಲಿಂ ಸಮುದಾಯದ ಕೆಲವು ಸದಸ್ಯರು ಕಳವಳ ವ್ಯಕ್ತಪಡಿಸಿ ಸೆನ್ಸಾರ್ ಮಂಡಳಿಯನ್ನು ಸಂಪರ್ಕಿಸಿದ್ದವು. ಅನಂತರ ಸೆನ್ಸಾರ್ ಮಂಡಳಿ ತನ್ನ ನಿರ್ಧಾರವನ್ನು ಮರು ಪರಿಶೀಲಿಸಲು ತೀರ್ಮಾನಿಸಿದೆ.

ಆದರೆ, ಚಲನಚಿತ್ರ ಬಿಡುಗಡೆಗೆ ತಡೆ ವಿಧಿಸಿರುವ ಸೆನ್ಸಾರ್ ಮಂಡಳಿಯನ್ನು ನ್ಯೂಝಿಲ್ಯಾಂಡ್ ನ ಮಾಜಿ ಉಪ ಮುಖ್ಯಮಂತ್ರಿ ವಿನ್ಸ್ಟಂಟ್ ಪೀಟರ್ ತರಾಟೆಗೆ ತೆಗೆದುಕೊಂಡಿದ್ದಾರೆ. ಚಲನಚಿತ್ರವನ್ನು ಸೆನ್ಸಾರ್ ಮಾಡುವುದು ನ್ಯೂಝಿಲ್ಯಾಂಡ್ ಪ್ರಜೆಗಳ ಸ್ವಾತಂತ್ರದ ಮೇಲಿನ ದಾಳಿ ಎಂದು ಅವರು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News