×
Ad

ಕಾರ್ಕಳದ ಡಾ. ಟಿಎಂಎ ಪೈ ರೋಟರಿ ಆಸ್ಪತ್ರೆಗೆ ಎನ್ಎಬಿಎಚ್ ಪ್ರಮಾಣಪತ್ರ

Update: 2022-03-22 12:55 IST

ಕಾರ್ಕಳ : ಕಾರ್ಕಳದ ಡಾ. ಟಿಎಂಎ ಪೈ ರೋಟರಿ ಆಸ್ಪತ್ರೆಯು ರಾಷ್ಟ್ರೀಯ ಆಸ್ಪತ್ರೆ ಮತ್ತು ಆರೋಗ್ಯ ಪೂರೈಕದಾರರ ಮಾನ್ಯತೆ ಪಡೆದ ಸಂಘ (ಎನ್ಎಬಿಎಚ್), ಗುಣಮಟ್ಟದ ಮಂಡಳಿ (ಕ್ವಾಲಿಟಿ ಕೌನ್ಸಿಲ್ ಆಫ್ ಇಂಡಿಯಾ) ಪೂರ್ವ ಮಾನ್ಯತೆಗಾಗಿ (ಪ್ರವೇಶ ಮಟ್ಟ) ಮರು ಪ್ರಮಾಣೀಕರಿಸಲ್ಪಟ್ಟಿದೆ.

ಮಾಹೆ ಮಣಿಪಾಲದ ಸಹ ಕುಲಾಧಿಪತಿ ಡಾ. ಎಚ್ ಎಸ್ ಬಲ್ಲಾಳ್ ಮತ್ತು ಉಪಕುಲಪತಿ ಲೆಫ್ಟಿನೆಂಟ್ ಜನರಲ್ ಡಾ. ಎಂಡಿ ವೆಂಕಟೇಶ್ ರವರು ಕಾರ್ಕಳದ ಡಾ. ಟಿಎಂಎ ಪೈ ರೋಟರಿ ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿ ಡಾ. ಕೀರ್ತಿನಾಥ ಬಲ್ಲಾಳ, ಗುಣಮಟ್ಟ ಅನುಷ್ಠಾನದ ಸಲಹೆಗಾರ ಡಾ. ಸುನೀಲ್ ಸಿ ಮುಂಡ್ಕೂರ್, ಸಹ ವ್ಯವಸ್ಥಾಪಕರಾದ ನಟೇಶ್ ಅವರಿಗೆ ಪ್ರಮಾಣಪತ್ರ ಹಸ್ತಾಂತರಿಸಿದರು.

ಈ ಸಂದರ್ಭ ಮಾಹೆ ಸಹ ಉಪಕುಲಪತಿಗಳಾದ  ಡಾ. ಪಿ ಎಲ್ ಎನ್ ಜಿ ರಾವ್ ಮತ್ತು ಎಂ ವೆಂಕಟ್ರಾಯ ಪ್ರಭು, ಕುಲಸಚಿವರಾದ ಡಾ. ನಾರಾಯಣ ಸಭಾಹಿತ, ಕೆ ಎಂ ಸಿ ಮಣಿಪಾಲದ ಡೀನ್ ಡಾ. ಶರತ್ ಕುಮಾರ್ ರಾವ್, ಕಸ್ತೂರ್ಬಾ ಆಸ್ಪತ್ರೆಯ ಮುಖ್ಯ ನಿರ್ವಹಣಾಧಿಕಾರಿ ಸಿ ಜಿ ಮುತ್ತಣ, ವೈದ್ಯಕೀಯ ಅಧೀಕ್ಷಕ ಡಾ. ಅವಿನಾಶ ಶೆಟ್ಟಿ,  ಮತ್ತು ಸಮುದಾಯ ಅರೋಗ್ಯ ವಿಭಾಗದ ಮುಖ್ಯಸ್ಥ ಡಾ. ಅಶ್ವಿನಿ ಕುಮಾರ್ ಉಪಸ್ಥಿತರಿದ್ದರು.

ಡಾ ಟಿಎಂಎ ಪೈ ರೋಟರಿ ಆಸ್ಪತ್ರೆಯು, ಈ ಮಾನ್ಯತೆ ಹೊಂದಿರುವ ಕಾರ್ಕಳದ ಏಕೈಕ ಆಸ್ಪತ್ರೆ ಮತ್ತು 2019 ರಲ್ಲಿ  ಮೊದಲ ಬಾರಿಗೆ ಈ ಮಾನ್ಯತೆ ಪಡೆದಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News