×
Ad

ಏಕ ನಿವೇಶನ ವಿನ್ಯಾಸ ಹಗರಣ: ನ್ಯಾಯಕ್ಕಾಗಿ ಸಿದ್ದರಾಮಯ್ಯಗೆ ಮನವಿ

Update: 2022-03-22 19:52 IST

ಉಡುಪಿ : ಉಡುಪಿ ನಗರಾಭಿವೃದ್ಧಿ ಪ್ರಾಧಿಕಾರದ ವ್ಯಾಪ್ತಿಯ ಪ್ರದೇಶದಲ್ಲಿ ನಡೆದ ಅನಧಿಕೃತ ಬಡಾವಣೆ ಮತ್ತು ಏಕ ನಿವೇಶನ ವಿನ್ಯಾಸ ಹಗರಣದ ಸಂತ್ರಸ್ತರ ನಿಯೋಗವು ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯ, ಮಾಜಿ ನಗರಾಭಿವೃದ್ಧಿ ಸಚಿವ ವಿನಯಕುಮಾರ್ ಸೊರಕೆ ಮತ್ತು ಉಡುಪಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮನೋಹರ್ ಕಲ್ಮಾಡಿ ಅವರನ್ನು ಇತ್ತೀಚೆಗೆ ಉಡುಪಿಯಲ್ಲಿ ಭೇಟಿಯಾಗಿ ಕಳೆದ ೧೫-೨೦ ವರ್ಷಗಳಿಂದ ನೆನೆಗುದಿಗೆ ಬಿದ್ದಿ ರುವ ಈ ಸಮಸ್ಯೆಯನ್ನು ಪರಿಹರಿಸಿ ಸಂತ್ರಸ್ತರಿಗೆ ನ್ಯಾಯ ದೊರಕಿಸಿಕೊಡುವಂತೆ ಮನವಿಯನ್ನು ಸಲ್ಲಿಸಿತು.

ಕಳೆದ ಒಂದು ವರ್ಷದ ಅವಧಿಯಲ್ಲಿ ಸಂತ್ರಸ್ತರು ನ್ಯಾಯಕ್ಕಾಗಿ ಹಲವಾರು ಪ್ರತಿಭಟನೆ, ಜಾಥಾಗಳನ್ನು ನಡೆಸಿದ್ದಾರೆ. ನಲ್ವತ್ತಕ್ಕೂ ಅಧಿಕ ಮಂದಿ ಸಚಿವರು, ಅಟಾರ್ನಿ ಜನರಲ್, ನ್ಯಾಯಾಧೀಶರು ಮೊದಲಾದವರನ್ನು ಭೇಟಿಯಾಗಿ ಮನವಿಯನ್ನು ಸಲ್ಲಿಸಿದ್ದಾರೆ. ಆದರೆ ಯಾವುದೂ ಫಲ ನೀಡಿಲ್ಲ ಎಂದು ಮನವಿ ಯಲ್ಲಿ ಸಂತ್ರಸ್ತರು ಆರೋಪಿಸಿದರು.

ಸಚಿವ  ಸುನಿಲ್ ಕುಮಾರ್ ಒಂದು ತಿಂಗಳ ಸಮಯದಲ್ಲಿ ಪರಿಹಾರ ತಂದುಕೊಡುವುದಾಗಿ ವಾಗ್ದಾನ ಮಾಡಿ ದ್ದರು. ಮೂರು ತಿಂಗಳಲ್ಲಿ ಸಮಸ್ಯೆಯನ್ನು ಪರಿಹರಿಸುವುದಾಗಿ ಕಂದಾಯ ಸಚಿವರು ಆಶ್ವಾಸನೆ ನೀಡಿದ್ದರು. ಆದರೆ ಸಂತ್ರಸ್ತರ ಪಾಲಿಗೆ ನ್ಯಾಯ ಮರೀಚಿಕೆಯಾಗಿಯೇ ಉಳಿದಿದೆ. ಇನ್ನು ಎರಡು ತಿಂಗಳಲ್ಲಿ ಈ ಅಕ್ರಮ ಬಡಾವಣೆ ಮತ್ತು ಏಕ ನಿವೇಶನ ವಿನ್ಯಾಸ ಸಮಸ್ಯೆಗೆ ಪರಿಹಾರ ಬರದಿದ್ದರೆ ಸಂತ್ರಸ್ತರು ವಿಧಾನಸೌಧ ಚಲೋ ಜಾಥಾವನ್ನು ನಡೆಸಲು ತೀರ್ಮಾನ ಕೈಗೊಂಡಿದ್ದಾರೆ ಎಂದು ಮನವಿಯಲ್ಲಿ ಎಚ್ಚರಿಕೆ ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News