×
Ad

ಕಲಾವಿದ ಸುಹೇಲ್‌ಗೆ ರಂಗ ಸಾಧಕ ಸನ್ಮಾನ

Update: 2022-03-22 19:53 IST

ಉಡುಪಿ : ಜಿಲ್ಲೆಯಲ್ಲಿ ರಂಗದ ಮುನ್ನೆಲೆ, ಹಿನ್ನೆಲೆ ಕಲಾವಿದರಾಗಿ ಅನೇಕರು ಕೆಲಸ ಮಾಡಿದ್ದಾರೆ. ಕೆಲವರಷ್ಟೇ ಬೆಳಕಿಗೆ ಬರುತ್ತಾರೆ. ಅನೇಕರು ನೇಪಥ್ಯದಲ್ಲಿಯೇ ಇರುತ್ತಾರೆ. ಬೆಳಕಿಗೆ ಬಾರದ ಪ್ರತಿಭೆಗಳನ್ನು ಗುರುತಿಸಿ ಗೌರವಿಸುವ ಕೆಲಸವನ್ನು ಸುಮನಸಾ ಸಂಸ್ಥೆ ಮಾಡುತ್ತಿದೆ ಎಂದು ಕೊಡವೂರಿನ ಶಿರಡಿ ಸಾಯಿಬಾಬಾ ಮಂದಿರದ ಧರ್ಮದರ್ಶಿ ದಿವಾಕರ ಶೆಟ್ಟಿ ತೋಟದಮನೆ ತಿಳಿಸಿದ್ದಾರೆ.

ಅಜ್ಜರಕಾಡು ಬಯಲು ಮಂದಿರದಲ್ಲಿ ಹಮ್ಮಿಕೊಳ್ಳಲಾದ ಸುಮನಸಾ ಕೊಡವೂರು ಸಾಂಸ್ಕೃತಿಕ ಸಂಘಟನೆಯ ರಾಷ್ಟ್ರೀಯ ರಂಗಹಬ್ಬ ಬಹುಭಾಷಾ ನಾಟಕೋತ್ಸವದಲ್ಲಿ ಸೋಮವಾರ ೨ನೇದಿನದ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತಿದ್ದರು.

ಮೇಕಪ್ ಮತ್ತು ಕಾಸ್ಮೊಟಿಕ್ ಕಲಾವಿದ ಸುಹೇಲ್ ಅವರಿಗೆ ರಂಗಸಾಧಕ ಸನ್ಮಾನ ನೆರವೇರಿಸಲಾಯಿತು.  ನಗರಸಭಾ ಉಪಾಧ್ಯಕ್ಷೆ ಲಕ್ಷ್ಮೀ ಮಂಜುನಾಥ್, ಕೊಡವೂರು ಸಿ.ಎ.ಬ್ಯಾಂಕ್ ಅಧ್ಯಕ್ಷ ನಾರಾಯಣ ಬಲ್ಲಾಳ್, ಕರಾವಳಿ ಕ್ರೆಡಿಟ್ ಕೋ-ಅಪರೇಟಿವ್ ಸೊಸೈಟಿ ಅಧ್ಯಕ್ಷ ಉಮೇಶ್ ಶೆಟ್ಟಿ ಮುಖ್ಯ ಅತಿಥಿ ಗಳಾಗಿದ್ದರು.

ಸುಮನಸಾದ ಅಧ್ಯಕ್ಷ ಪ್ರಕಾಶ್ ಜಿ.ಕೊಡವೂರು, ಯೋಗೀಶ್ ಕೊಳಲಗಿರಿ ಉಪಸ್ಥಿತರಿದ್ದರು. ಯೋಗೀಶ್ ಕೊಳಲಗಿರಿ ಸ್ವಾಗತಿಸಿದರು. ಅಶೋಕ್ ಅಮ್ಮುಂಜೆ ವಂದಿಸಿದರು. ರಾಧಿಕಾ ದಿವಾಕರ್ ಕಾರ್ಯಕ್ರಮ ನಿರೂಪಿಸಿದರು. ಬಳಿಕ ತಮಿಳು ನಾಡಿನ ಅದಿಶಕ್ತಿ ಥಿಯೇಟರ್ಸ್‌ ತಂಡದಿಂದ ಭೂಮಿ ಇಂಗ್ಲೀಪ್ ನಾಟಕ ಪ್ರದರ್ಶನಗೊಂಡಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News