ರಶ್ಯ: ಅಲೆಕ್ಸಿ ನವಾಲ್ನಿ ವಿರುದ್ಧದ ವಂಚನೆಯ ಅಪರಾಧ ಸಾಬೀತು

Update: 2022-03-22 17:05 GMT
Photo: PTI

  ಮಾಸ್ಕೊ, ಮಾ.22: ರಶ್ಯದ ವಿಪಕ್ಷ ಮುಖಂಡ ಅಲೆಕ್ಸಿ ನವಾಲ್ನಿ ವಿರುದ್ಧಧ ವಂಚನೆ ಹಾಗೂ ನ್ಯಾಯಾಂಗ ನಿಂದನೆ ಆರೋಪ ಸಾಬೀತಾಗಿದೆ ಎಂದು ರಶ್ಯದ ನ್ಯಾಯಾಲಯವೊಂದು ಮಂಗಳವಾರ ತೀರ್ಪು ನೀಡಿದೆ.

  ಇದರೊಂದಿಗೆ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ರನ್ನು ನಿರ್ಭೀತಿಯಿಂದ ಟೀಕಿಸುತ್ತಿದ್ದ ರಾಜಕೀಯ ಮುಖಂಡ ಇನ್ನಷ್ಟು ವರ್ಷ ಜೈಲುವಾಸ ಅನುಭವಿಸುವುದು ಖಚಿತವಾಗಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ. ಮತ್ತೊಂದು ಪ್ರಕರಣದಲ್ಲಿ ನವಾಲ್ನಿ ಈಗಾಗಲೇ ಎರಡೂವರೆ ವರ್ಷದ ಜೈಲುಶಿಕ್ಷೆ ಅನುಭವಿಸುತ್ತಿದ್ದಾರೆ. ಇದೀಗ ಮಂಗಳವಾರ ಸಾಬೀತಾಗಿರುವ ಅಪರಾಧದಡಿ ಅವರಿಗೆ ಹೆಚ್ಚುವರಿ 13 ವರ್ಷದ ಜೈಲುಶಿಕ್ಷೆಯಾಗುವ ಸಾಧ್ಯತೆಯಿದೆ.

ನ್ಯಾಯಾಲಯವನ್ನು ಬಹಿರಂಗವಾಗಿ ಟೀಕಿಸುವ ಮೂಲಕ ನವಾಲ್ನಿ ನ್ಯಾಯಾಲಯಕ್ಕೆ ಅಪಮಾನ ಮಾಡಿದ್ದಾರೆ ಎಂದು ತೀರ್ಪು ಪ್ರಕಟಿಸಿದ ನ್ಯಾಯಾಧೀಶೆ ಮಾರ್ಗರಿಟಾ ಕೊಟೊವಾ ಹೇಳಿದ್ದಾರೆ. ತಮ್ಮ ವಿರುದ್ಧದ ಆರೋಪವನ್ನು ನವಾಲ್ನಿ ನಿರಾಕರಿಸಿದ್ದರು. ಶಿಕ್ಷೆಯ ಅವಧಿಯನ್ನು ನ್ಯಾಯಾಲಯ ಇನ್ನಷ್ಟೇ ಪ್ರಕಟಿಸಬೇಕಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News