ಅಪಾಯ ,ಕಠಿಣ ಕೆಲಸದ ಭತ್ತೆಗಾಗಿ ಸಿಆರ್ಪಿಎಫ್, ಬಿಎಸ್ಎಫ್ ಯೋಧರಿಗೆ 4 ಸಾವಿರ ಕೋಟಿ ರೂ. ವ್ಯಯ

Update: 2022-03-22 18:21 GMT

ಹೊಸದಿಲ್ಲಿ,ಮಾ.21: ಅಪಾಯಕಾರಿ ಹಾಗೂ ಕಠಿಣ ಕೆಲಸಗಳಿಗಾಗಿ ಸಿಆರ್‌ಪಿಎಫ್ ಹಾಗೂ ಬಿಎಸ್‌ಎಫ್‌ನಂತಹ ಕೇಂದ್ರೀಯ ಭದ್ರತಾ ಸಂಘಟನೆಗಳಿಗೆ ಭತ್ತೆಗಳನ್ನು ನೀಡಲು ಸುಮಾರು 4 ಸಾವಿರ ಕೋಟಿ ರೂ.ಗಳನ್ನು ವ್ಯಯಿಸಲಾಗಿದೆಯೆಂದು ಕೇಂದ್ರ ಗೃಹ ಸಚಿವಾಲಯವು ಮಂಗಳವಾರ ತಿಳಿಸಿದೆ.

 ಜಮ್ಮುಕಾಶ್ಮೀರ, ಲಡಾಕ್ ಹಾಗೂ ಈಶಾನ್ಯ ಪ್ರಾಂತದಂತಹ ಕಠಿಣ ಅಥವಾ ಕಾರ್ಯಾಚರಣಾ ಸ್ಥಳಗಳಲ್ಲಿ ಕರ್ತವ್ಯ ನಿರ್ವಹಿಸುವ ಎಲ್ಲಾ ಕೇಂದ್ರೀಯ ಸರಕಾರಿ ಅಧಿಕಾರಿಗಳು, ಉದ್ಯೋಗಿಗಳಿಗೆ ಅಪಾಯ ಹಾಗೂ ಕಠಿಣ ಕೆಲಸಗಳಿಗಾಗಿನ ಭತ್ತೆಯನ್ನು ನೀಡಲಾಗುತ್ತಿದೆ.

  ಎಲ್ಲಾ ಕೇಂದ್ರೀಯ ಸಶಸ್ತ್ರ ಪಡೆಗಳು ಹಾಗೂ ಅಸ್ಸಾಂ ರೈಫಲ್ಸ್ ಸಿಬ್ಬಂದಿಗಾಗಿ 68,623,.73 ಕೋಡಟಿ ರೂ. ವೇತನವನ್ನು ನೀಡಲಾಗುತ್ತಿದೆ. ಈ ಪೈಕಿ 3944 ಕೋಟಿ ರೂ.ಗಳನ್ನು ಅಪಾಯ ಹಾಗೂ ಕಠಿಣ ಭತ್ತೆಗಳಿಗಾಗಿ ಪಾವತಿಸಲಾಗುತ್ತಿದೆ. ಇದು ಒಟ್ಟು ವೇತನ ಬಜೆಟ್ನ ಶೇ.5.74 ಆಗಿರುವುದಾಗಿ ಗೃಹ ಖಾತೆಯ ಸಹಾಯಕ ಸಚಿವ ನಿತ್ಯಾನಂದ ರಾಯ್ ಅವರು ತಿಳಿಸಿದ್ದಾರೆ.
    2022-23ನೇ ಸಾಲಿನ ಬಜೆಟ್‌ನ ಬಂಡವಾಳ ವಿಭಾಗದಲ್ಲಿ ಬಿಎಸ್ಎಫ್, ಐಟಿಬಿಪಿ, ಸಶಸ್ತ್ರ ಸೀಮಾಬಲ್‌ನ ಗಡಿಕಾವಲು ಪಡೆಗಳಿಗೆ 3,158.06 ಕೋಟಿ ರೂ. ಅನುದಾನವನ್ನು ಘೋಷಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News