×
Ad

ಮಾ.24: ನೇರಳಕಟ್ಟೆಯಲ್ಲಿ ಪೇರೋಡ್ ಉಸ್ತಾದರಿಂದ ಉಪನ್ಯಾಸ

Update: 2022-03-23 17:35 IST

ವಿಟ್ಲ : ಕರ್ನಾಟಕ ರಾಜ್ಯ ಸುನ್ನಿ ಯುವಜನ ಸಂಘ (ಎಸ್‌ವೈಎಸ್)  ದಕ್ಷಿಣ ಕನ್ನಡ ಈಸ್ಟ್ ಜಿಲ್ಲಾ ಸಮಿತಿಯ ವತಿಯಿಂದ  ಸ್ಟಿಮ್ಯುಲೇಟ್-22 ಅಭಿಯಾನದ ಅಂಗವಾಗಿ ಜಿಲ್ಲಾ ಕ್ಲಾಸ್ ರೂಂ ಕಾರ್ಯಕ್ರಮವು  ಮಾ.24 ರಂದು ಮಾಣಿ ಸಮೀಪದ ನೇರಳಕಟ್ಟೆ ಜನಪ್ರಿಯ ಗಾರ್ಡನ್ ನ ಮರ್ಹೂಂ ಜೋಗಿಬೆಟ್ಟು ಆಶಿಖ್ ಫಹದ್ ಫಖ್ರುದ್ದೀನ್ ವೇದಿಕೆಯಲ್ಲಿ ನಡೆಯಲಿದೆ.

ಕಾರ್ಯಕ್ರಮವು ಬೆಳಗ್ಗೆ  10 ರಿಂದ ಮಧ್ಯಾಹ್ನ 2 ರವರೆಗೆ ನಡೆಯಲಿದ್ದು,  ಎಸ್‌ವೈಎಸ್ ದಕ್ಷಿಣ ಕನ್ನಡ ಈಸ್ಟ್ ಜಿಲ್ಲಾದ್ಯಕ್ಷ ಅಬೂಬಕ್ಕರ್ ಸ‌ಅದಿ ಮಜೂರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸುವರು. ಎಸ್‌ವೈಎಸ್ ರಾಜ್ಯ ಸದಸ್ಯರಾದ ಸಯ್ಯಿದ್ ಇಸ್ಮಾಯಿಲ್ ತಂಙಲ್ ಉಜಿರೆ ದುಆಃ ಗೈಯ್ಯಲಿದ್ದು, ಸುನ್ನಿ ಜಂ- ಇಯ್ಯತುಲ್ ಉಲಮಾ ಕರ್ನಾಟಕ ರಾಜ್ಯಾಧ್ಯಕ್ಷ ಖಾಝಿ ಝೈನುಲ್ ಉಲಮಾ ಅಬ್ದುಲ್ ಹಮೀದ್ ಉಸ್ತಾದ್ ಮಾಣಿ ಉದ್ಘಾಟಿಸುವರು.

ಎಸ್‌ವೈಎಸ್ ರಾಜ್ಯಾಧ್ಯಕ್ಷ ಡಾ. ಎಂ. ಎಸ್. ಎಂ. ಝೈನಿ ಕಾಮಿಲ್  ಪ್ರಸ್ತಾವನೆ ಗೈಯುವರು. ಶೈಖುನಾ ಪೇರೋಡ್ ಅಬ್ದುರ್ರಹ್ಮಾನ್ ಸಖಾಫಿ ಉಸ್ತಾದರು ಪ್ರಮುಖ ತರಗತಿ ಮಂಡಿಸಲಿದ್ದಾರೆ.

ಎಸ್‌ವೈಎಸ್ ರಾಜ್ಯ ಸದಸ್ಯರು, ರಾಜ್ಯ ಪ್ರತಿನಿಧಿಗಳು, ಜಿಲ್ಲಾ  ಸಮಿತಿ ಸದಸ್ಯರು, ಜಿಲ್ಲಾ ಕೌನ್ಸಿಲರ್ ಹಾಗೂ  ಸೆಂಟರ್ ಕಾರ್ಯಕಾರಿ ಸಮಿತಿ, ಬ್ರಾಂಚುಗಳ ಪದಾಧಿಕಾರಿಗಳು ಸೇರಿದಂತೆ ಸುಮಾರು 1500 ಪ್ರತಿನಿಧಿಗಳು ಭಾಗವಹಿಸಲಿರುವ ವಿಶೇಷ ಕಾರ್ಯಕ್ರಮ ಇದಾಗಿದೆ ಎಂದು ಎಸ್ ವೈ ಎಸ್ ದಕ್ಷಿಣ ಈಸ್ಟ್ ಜಿಲ್ಲಾ ಸಮಿತಿ ಮಾಧ್ಯಮ ಕಾರ್ಯದರ್ಶಿ ಯೂಸುಫ್ ಸಈದ್ ನೇರಳಕಟ್ಟೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News