×
Ad

ಹಿಜಾಬ್ ಕುರಿತ ಹೈಕೋರ್ಟ್ ತೀರ್ಪು ದುರುಪಯೋಗ: ಮಂಗಳೂರು ವಿವಿ ವಿದ್ಯಾರ್ಥಿ ಸಮನ್ವಯ ಸಮಿತಿ ಆರೋಪ

Update: 2022-03-23 20:13 IST

ಮಂಗಳೂರು : ಹಿಜಾಬ್ ಕುರಿತಂತೆ ರಾಜ್ಯ ಹೈಕೋರ್ಟ್ ನೀಡಿರುವ ತೀರ್ಪನ್ನು ದುರುಪಯೋಗ ಪಡಿಸಲಾಗು ತ್ತಿದೆ ಎಂದು  ಮಂಗಳೂರು ವಿವಿ ವಿದ್ಯಾರ್ಥಿಗಳ ಸಮನ್ವಯ ಸಮಿತಿ ಆರೋಪಿಸಿದೆ. ಪದವಿ ಕಾಲೇಜಿಗೆ ಅನ್ವಯ ವಾಗದ ಈ ತೀರ್ಪನ್ನು ದುರುಪಯೋಗ ಪಡಿಸುತ್ತಿರುವ ಶಿಕ್ಷಣ ಸಂಸ್ಥೆಗಳ ವಿರುದ್ಧ ಕ್ರಮ ಜರಗಿಸಬೇಕು. ಇಲ್ಲದಿ ದ್ದರೆ ಹೋರಾಟ ಮಾಡುವುದಾಗಿ ಎಚ್ಚರಿಸಿದೆ.

ಹಿಜಾಬ್ ವಿಚಾರವಾಗಿ ಹೈಕೋರ್ಟ್ ನೀಡಿದ ತನ್ನ ತೀರ್ಪಿನಲ್ಲಿ ಱಇದು ಹೈಸ್ಕೂಲ್ ಹಾಗೂ ಪದವಿ ಪೂರ್ವ ಕಾಲೇಜುಗಳಿಗೆ ಮಾತ್ರ ಅನ್ವಯ ಎಂದು ಸ್ಪಷ್ಟಪಡಿಸಿದೆ. ಆದರೆ ಈ ತೀರ್ಪನ್ನು ನೆಪವಾಗಿಟ್ಟುಕೊಂಡು ಕೆಲವು ಪದವಿ ಕಾಲೇಜುಗಳು ಕೂಡ ಸಮಸ್ಯೆಯನ್ನು ಸೃಷ್ಟಿಸುತ್ತಿದೆ. ವಿದ್ಯಾರ್ಥಿನಿಯರನ್ನು ತರಗತಿ ಹಾಜರಾಗಲು, ಪರೀಕ್ಷೆ ಬರೆಯಲು ತಡೆಯುತ್ತಿದೆ ಎಂದು ಸಮಿತಿ ಆರೋಪಿಸಿದೆ.

ಸರಕಾರಿ ಶಾಲೆಗಳಲ್ಲಿ ಅಲ್ಲಿನ ಸಿಡಿಸಿ ಕಮಿಟಿಯು ನಿರ್ಣಯಿಸಿದ ಸಮವಸ್ತ್ರ, ಖಾಸಗಿ ಶಾಲೆಗಳಲ್ಲಿ ಆಡಳಿತ ಮಂಡಳಿ ಹಾಗೂ ಸಿಡಿಸಿ ಕಮಿಟಿ ತೀರ್ಮಾನಿಸಿದ ಸಮವಸ್ತ್ರ, ಪದವಿ ಪೂರ್ವ ಕಾಲೇಜುಗಳಲ್ಲಿ ಪಿಯು ಬೋರ್ಡ್ ನಿಗದಿಪಡಿಸಿದ ಸಮವಸ್ತ್ರವೇ ಅಂತಿಮ ಎಂದು ಸ್ಪಷ್ಟವಾಗಿ ತಿಳಿಸಿದೆ. ಇದರಲ್ಲಿ ಎಲ್ಲಿಯೂ ಕೂಡ ಪದವಿ ಕಾಲೇಜುಗಳ ಸಮವಸ್ತ್ರ ಬಗ್ಗೆ ಉಲ್ಲೇಖಿಸಿಲ್ಲ. ಯುಜಿಸಿ ಕೂಡ ಪದವಿ ಕಾಲೇಜುಗಳಿಗೆ ಸಮವಸ್ತ್ರ ನಿಗದಿಪಡಿಸಿಲ್ಲ. ಆದರೆ ಇಂದು ಕೆಲವು ಪದವಿ ಕಾಲೇಜುಗಳು ವಿದ್ಯಾರ್ಥಿಗಳನ್ನು ತರಗತಿ ಹಾಗೂ ಪರೀಕ್ಷೆ ಬರೆಯಲು ತಡೆಯು ತ್ತಿದೆ. ಇದು ಕಾಲೇಜುಗಳ ಪೂರ್ವಾಗ್ರಹ ಪೀಡಿತ ನಿಯಮಗಳಾಗಿದ್ದು, ಇದನ್ನು ತಕ್ಷಣ ಬಗೆಹರಿಸಬೇಕು. ಇಲ್ಲದಿದ್ದರೆ ತೀವ್ರ ಹೋರಾಟ ನಡೆಸಲಿದೆ ಎಂದು ಸಮಿತಿ ತಿಳಿಸಿದೆ.

ಸಮಿತಿಯ ನಿಯೋಗವು ಮಂಗಳೂರು ವಿವಿ ಡಾ. ಕಿಶೋರ್ ಕುಮಾರ್ ಸಿ.ಕೆ. ಅವರಿಗೆ ಈ ನಿಟ್ಟಿನಲ್ಲಿ ಮನವಿ ಸಲ್ಲಿಸಿದೆ. ಸಮಿತಿಯ ಅಧ್ಯಕ್ಷ ರಿಯಾಝ್ ಅಂಕತಡ್ಕ, ಸಂಚಾಲಕ ಅಶಾಮ್, ಮಾಧ್ಯಮ ವಕ್ತಾರ ಜಾಬೀರ್, ಸದಸ್ಯರಾದ ಮುಕ್ತಾರ್, ಝಾಹಿದ್ ನಿಯೋಗದಲ್ಲಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News