×
Ad

"ಕಂಗನಾ ರಣಾವತ್ ಆರೋಪಿ ಎಂಬುದನ್ನು ಮರೆಯಬಾರದು": ಮಾನನಷ್ಟ ಪ್ರಕರಣದಲ್ಲಿ ನ್ಯಾಯಾಲಯ

Update: 2022-03-24 22:47 IST

ಮುಂಬೈ, ಮಾ. 24: ನಟಿ ಕಂಗನಾ ರಣಾವತ್ ಸೆಲೆಬ್ರಿಟಿ ಆಗಿರಬಹುದು, ವೃತ್ತಿಪರ ನಿಯೋಜನೆ ಇರಬಹುದು. ಆದರೆ, ಅವರು ಪ್ರಕರಣವೊಂದರ ಆರೋಪಿ ಎಂಬುದನ್ನು ಮರೆಯ ಬಾರದು ಎಂದು ಇಲ್ಲಿನ ಸ್ಥಳೀಯ ನ್ಯಾಯಾಲಯ ಹೇಳಿದೆ.

ಬಾಲಿವುಡ್ ಗೀತೆ ರಚನೆಕಾರ ಜಾವೇದ್ ಅಖ್ತರ್ ಸಲ್ಲಿಸಿದ ಮಾನನಷ್ಟ ಮೊಕದ್ದಮೆಯ ವಿಚಾರಣೆಯ ಹಾಜರಾತಿಯಿಂದ ಶಾಶ್ವತ ವಿನಾಯತಿ ನೀಡಲು ನಿರಾಕರಿಸಿದ ಸ್ಥಳೀಯ ನ್ಯಾಯಾಲಯ ಈ ಅಭಿಪ್ರಾಯ ವ್ಯಕ್ತಪಡಿಸಿದೆ. ತನಗೆ ವೃತ್ತಿಪರ ಬದ್ಧತೆ ಇರುವುದರಿಂದ ವಿಚಾರಣೆಯಲ್ಲಿ ಹಾಜರಾಗುವುದರಿಂದ ಶಾಶ್ವತ ವಿನಾಯತಿ ನೀಡುವಂತೆ ಕೋರಿ ರಣಾವತ್ ಸಲ್ಲಿಸಿದ ಮನವಿಯನ್ನು ಮೆಟ್ರೋಪಾಲಿನ್ ಮ್ಯಾಜಿಸ್ಟ್ರೇಟ್ ಆರ್.ಆರ್. ಖಾನ್ ಮಂಗಳವಾರ ತಿರಸ್ಕರಿಸಿದ್ದಾರೆ. ಟಿ.ವಿ. ಸಂದರ್ಶನದಲ್ಲಿ ರಣಾವತ್ ಅವರು ತನ್ನ ವಿರುದ್ಧ ಮಾನ ಹಾನಿಕರ ಹೇಳಿಕೆ ನೀಡಿದ್ದಾರೆ ಹಾಗೂ ತನ್ನ ಗೌರವಕ್ಕೆ ಧಕ್ಕೆ ತಂದಿದ್ದಾರೆ ಎಂದು ಆರೋಪಿಸಿ ಅಖ್ತರ್ ಅವರು 2020 ನವೆಂಬರ್ನಲ್ಲಿ ್ಯಾಯಾಲಯದಲ್ಲಿ ದೂರು ಸಲ್ಲಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News