×
Ad

ಕಿನ್ನಿಗೋಳಿ ನೂತನ ಸುನ್ನಿ ಸೆಂಟರ್ ಉದ್ಘಾಟನೆ

Update: 2022-03-26 18:06 IST

ಕಿನ್ನಿಗೋಳಿ : ಕಿನ್ನಿಗೋಳಿ ಬಸ್ ನಿಲ್ದಾಣದ ಸಮೀಪದ ಡೈಮಂಡ್ ಆರ್ಕೇಡ್ ಸಮುಚ್ಚಯದಲ್ಲಿ ನೂತನವಾಗಿ ಆರಂಭಗೊಂಡ ಸುನ್ನಿ ಸೆಂಟರ್ ಕಚೇರಿಯನ್ನು ಜಾಫರ್ ಸಾಧಿಕ್ ತಂಙಳ್ ಕುಂಬೋಳ್ ಅವರು ಶನಿವಾರ ಉದ್ಘಾಟಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಎಸ್ ವೈ ಎಸ್ ಕಿನ್ನಿಗೋಳಿ ಬ್ರಾಂಚ್ ಅಧ್ಯಕ್ಷ ಫಯಾಝ್ ಹಾಜಿ ವಹಿಸಿದ್ದರು.
ಸಭಾ ಕಾರ್ಯಕ್ರಮವನ್ನು ಎಸ್ ವೈ ಎಸ್ ಸುರತ್ಕಲ್ ಸೆಂಟರ್ ಅಧ್ಯಕ್ಷ ಅಬ್ದುಲ್ ಲತೀಫ್ ಸಖಾಫಿ ಉದ್ಘಾಟಿಸಿದರು.

ಮುಖ್ಯ ಪ್ರಭಾಷಣವನ್ನು ಎಸ್ ವೈಎಸ್ ದ.ಕ. ವೆಸ್ಟ್ ಜಿಲ್ಲೆಯ ಸಾಂತ್ವನ ವಿಭಾಗದ ಕಾರ್ಯದರ್ಶಿ ವಿ.ಯು. ಇಸ್ಹಾಕ್ ಝುಹ್ರಿ ಸೂರಿಂಜೆ ಮಾಡಿದರು.

ಸಮಾರಂಭದಲ್ಲಿ ಎಸ್ ವೈ ಎಸ್ ಸುರತ್ಕಲ್ ಸೆಂಟರ್ ಕಾರ್ಯದರ್ಶಿ ಫಾರೂಕ್ ಶೇಡಿಗುರಿ, ಸುರತ್ಕಲ್ ಡಿವಿಜನ್ ಅಧ್ಯಕ್ಷ ಹನೀಫ್ ಅಹ್ಸನಿ, ಕಿನ್ನಿಗೋಳಿ ಡೈಮಂಡ್ ಮಾರ್ಕೆಟ್ ಮಾಲಕ ಅಬ್ದುಲ್ ರಶೀದ್, ಎಸ್ ವೈ ಎಸ್ ಗುತ್ತಕಾಡು ಅಧ್ಯಕ್ಷ ಬಿ. ಮುಹಮ್ಮದ್, ಪುನರೂರು ಜುಮಾ ಮಸೀದಿಯ ಖತೀಬ್ ಬಶೀರ್ ಮದನಿ, ಗುತ್ತಕಾಡು ಎಸ್ ವೈ ಎಸ್ ನ ಟಿ.ಕೆ. ಅಬ್ದುಲ್ ಖಾದರ್, ಗುತ್ತಕಾಡು ಜುಮಾ ಮಸೀದಿಯ ಖತೀಬ್ ಫಾರೂಕ್ ಸಖಾಫಿ, ಸಿದ್ದಿಕ್ ಪುನರೂರು, ಟಿ.ಎಚ್.ಮಯ್ಯದಿ, ಹಾಜಿ ಪಲ್ಲಿಕುಟ್ಟಿ ಪಕ್ಷಿಕೆರೆ, ಶಂಸುದ್ದೀನ್ ಮೊದಲಾದವರು ಉಪಸ್ಥಿತರಿದ್ದರು. ಎಸ್ಎಸ್ಎಫ್ ಮುಲ್ಕಿ ಸೆಕ್ಟರ್ ಅಧ್ಯಕ್ಷ ರವೂಫ್ ಹಿಮಮಿ ಸಖಾಫಿ ಸ್ವಾಗತಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News