ದ.ಕ. ಜಿಲ್ಲೆ: ಮತ್ತೆ ಶೂನ್ಯಕ್ಕಿಳಿದ ಕೋವಿಡ್ ಸೋಂಕು
Update: 2022-03-26 18:45 IST
ಮಂಗಳೂರು : ದ.ಕ.ಜಿಲ್ಲೆಯಲ್ಲಿ ಶನಿವಾರವೂ ಕೋವಿಡ್ ಪ್ರಕರಣ ಪತ್ತೆಯಾಗಿಲ್ಲ. ಕೋವಿಡ್ ಸೋಂಕು ಪ್ರಕರಣಗಳು ಬೆಳಕಿಗೆ ಬಂದ ಬಳಿಕ ದ.ಕ.ಜಿಲ್ಲೆಯಲ್ಲಿ ಶುಕ್ರವಾರ ಮೊದಲ ಬಾರಿಗೆ ಕೋವಿಡ್ ಪತ್ತೆಯಾಗಿರಲಿಲ್ಲ. ಶನಿವಾರವೂ ಒಂದೇ ಒಂದು ಕೋವಿಡ್ ಸೋಂಕಿನ ಪ್ರಕರಣ ದಾಖಲಾಗಿಲ್ಲ.
ಶನಿವಾರವೂ ಒಬ್ಬರು ಕೋವಿಡ್‌ನಿಂದ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದಾರೆ. ಜಿಲ್ಲೆಯಲ್ಲಿ ಈವರೆಗೆ ೧,೩೫,೪೮೦ ಪಾಸಿಟಿವ್ ಪ್ರಕರಣ ದಾಖಲಾಗಿದ್ದರೆ, ಸೋಂಕಿತರ ಪೈಕಿ ಒಟ್ಟು ೧,೩೩,೬೨೧ ಮಂದಿ ಗುಣಮುಖರಾಗಿ ಬಿಡುಗಡೆಗೊಂಡಿದ್ದಾರೆ. ಅಲ್ಲದೆ ಈವರೆಗೆ ಕೋವಿಡ್‌ಗೆ ಬಲಿಯಾದವರ ಸಂಖ್ಯೆ ೧೮೫೦ಕ್ಕೇರಿದೆ. ಸದ್ಯ 9 ಸಕ್ರಿಯ ಪ್ರಕರಣವಿದೆ.