×
Ad

ಆಂಧ್ರಪ್ರದೇಶ: ಕಣಿವೆಗೆ ಉರುಳಿ ಬಿದ್ದ ಬಸ್; 8 ಮಂದಿ ಸಾವು, 45 ಮಂದಿಗೆ ಗಾಯ

Update: 2022-03-27 10:33 IST

ಚಿತ್ತೂರು (ಆಂಧ್ರಪ್ರದೇಶ):  ಆಂಧ್ರಪ್ರದೇಶದ ಚಿತ್ತೂರು ಜಿಲ್ಲೆಯಲ್ಲಿ ಶೇಷಾಚಲಂ ಘಾಟ್ ರಸ್ತೆಯಲ್ಲಿ ಬಸ್ಸೊಂದು 100 ಅಡಿ ಕಣಿವೆಗೆ ಉರುಳಿ ಬಿದ್ದ ಪರಿಣಾಮ 8 ಮಂದಿ ಸಾವನ್ನಪ್ಪಿದ್ದು, 40 ಮಂದಿ ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

 ಚಾಲಕನ ನಿರ್ಲಕ್ಷ್ಯವೇ ಅಪಘಾತಕ್ಕೆ ಕಾರಣ ಎಂದು ತಿರುಪತಿ ಪೊಲೀಸ್ ವರಿಷ್ಠಾಧಿಕಾರಿ (ಎಸ್‌ಪಿ) ಹೇಳಿದ್ದಾರೆ.

ತಿರುಪತಿಯಿಂದ 25 ಕಿ.ಮೀ. ದೂರದಲ್ಲಿರುವ ಬಕ್ರಪೇಟಾದಲ್ಲಿ ಚಾಲಕನ ನಿರ್ಲಕ್ಷ್ಯದಿಂದ ಬಸ್ ಕಣಿವೆಗೆ ಬಿದ್ದು ಅಪಘಾತ ಸಂಭವಿಸಿದೆ ಎಂದು ಅವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News