ಮಂಗಳೂರು ರಾಮ ಲಕ್ಷ್ಮಣ ಜೋಡು ಕರೆ ಕಂಬಳ ಸಮಾರೋಪ
ಮಂಗಳೂರು: ನಗರದ ಬಂಗ್ರಕೂಳೂರು ಗೋಲ್ಡ್ ಪಿಂಚ್ ಸಿಟಿಯಲ್ಲಿ ಶನಿವಾರ ಆರಂಭಗೊಂಡ ಮಂಗಳೂರು ರಾಮ-ಲಕ್ಷ್ಮಣ ಜೋಡು ಕರೆ ಕಂಬಳ ಇಂದು ತೆರೆ ಕಂಡಿದೆ. ಅಂತಿಮವಾಗಿ 142 ಜೋಡಿ ಓಟದ ಕೋಣಗಳು ಪಾಲ್ಗೊಂಡವು.
ಫಲಿತಾಂಶ :- ಕನೆಹಲಗೆ ವಿಭಾಗದಲ್ಲಿ ಕಾಂತಾವರ ಬೇಲಾಡಿ ಬಾವ ಅಶೋಕ ಶೆಟ್ಟಿ ಪ್ರಥಮ. ಓಡಿಸಿದವರು ತೆಕಟ್ಟೆ ಸುಧೀರ್ ದೇವಾಡಿಗ, ಕಾಂತಾವರ ಶಾಂತರಾಮ ಶೆಟ್ಟಿ, ದ್ವಿತೀಯ ಓಡಿಸಿದವರು ಮಂದಾರ್ತಿ ಶಿರೂರು ಗೋಪಾಲ ನಾಯ್ಕ,
*ಹಗ್ಗ ಹಿರಿಯ :- ಪದವು ಕಾನಡ್ಕ ಪ್ಲೇವಿ ಡಿ ಸೋಜ ದ್ವಿತೀಯ. ಓಡಿಸಿದವರು ಬಜಗೋಳಿ ಜೋಗಿ ಬೆಟ್ಟು ನಿಶಾಂತ್ ಶೆಟ್ಟಿ, ಯೆಡ್ತೆರೆ ವೈ.ಭರತ್ ಶೆಟ್ಟಿ. ಪ್ರಥಮ ಓಡಿಸಿದವರು ಮಿಜಾರು ಅಶ್ವಥಪುರ ಶ್ರೀ ನಿವಾಸ ಗೌಡ.
*ಹಗ್ಗ ಕಿರಿಯ ವಿಭಾಗ:- ಕೊಳಕೆ ಇರ್ವತ್ತೂರು ಭಾಸ್ಕರ ಸುಬ್ಬಯ್ಯ ಕೋಟ್ಯಾನ್ ಪ್ರಥಮ. ಓಡಿಸಿದವರು ಕೊಳಕೆ ಇರ್ವತ್ತೂರು ಆನಂದ, ಗುರುಪುರ ಕಾರಮುಗೇರ್ ಗುತ್ತು ಯಸ್. ಜಗದೀಶ್ ಆಳ್ವ ದ್ವಿತೀಯ, ಓಡಿಸಿದವರು ಬೈಂದೂರು ವಿವೇಕ್ ಪೂಜಾರಿ.
*ಅಡ್ಡ ಹಲಗೆ - ಹಂಕರಜಾಲು ಶ್ರೀ ನಿವಾಸ ಬಿರ್ಮಣ್ಣ ಶೆಟ್ಟಿ ಪ್ರಥಮ, ದ್ವಿತೀಯ ಓಡಿಸಿದವರು ತೆಕಟ್ಟೆ ಸುಧೀರ್ ದೇವಾಡಿಗ, ವಾಲ್ವಾಡಿ ಹಾಲಾಜೆ ಲೂಯಿಸ್ ಲಾರೆನ್ಸ್ ಸಲ್ದಾನ ಪ್ರಥಮ, ಬೈಂದೂರು ಹೊಸಕೋಟೆ ಮಹೇಶ್ ಪೂಜಾರಿ.
*ನೇಗಿಲು ಹಿರಿಯ:- ಬೋಳದ ಗುತ್ತು ಜಗದೀಶ್ ಶೆಟ್ಟಿ ಪ್ರಥಮ, ಓಡಿಸಿದವರು ಮರೋಡಿ ಶ್ರೀ ಧರ, ಸಿದ್ಧಕಟ್ಟೆ ಪೊಡುಂಬು ಹೊಸ ಮನೆ ಸರೋಜಿನಿ ಸಂಜೀವ ಶೆಟ್ಟಿ ದ್ವಿತೀಯ, ಓಡಿಸಿದವರು ಹೊಕ್ಕಾಡಿ ಗೋಳಿ ಹಕ್ಕೇರಿ ಸುರೇಶ್ ಎಂ.ಶೆಟ್ಟಿ,
*ನೇಗಿಲು ಕಿರಿಯ ವಿಭಾಗ:- ಕಾಂತಾವರ ಬೇಲಾಡಿ ಬಾವ ಅಶೋಕ್ ಶೆಟ್ಟಿ ಪ್ರಥಮ.ಓಡಿಸಿದವರು ಮರೋಡಿ ಶ್ರೀಧರ, ಪಡೀಲು ಕಬತ್ತಾರು ಗುತ್ತು ದಿನಕರ ಜಯರಾಮ ಶೆಟ್ಟಿ, ದ್ವಿತೀಯ ಓಡಿಸಿದವರು ಪಣಪೀಲು ಪ್ರವೀಣ್ ಕೋಟ್ಯಾನ್ ಪ್ರಶಸ್ತಿ ಪಡೆದುಕೊಂಡಿದ್ದಾರೆ.
ಮಂಗಳೂರು ಕಂಬಳ ಸಮಿತಿಯ ಅಧ್ಯಕ್ಷ ಕ್ಯಾ.ಬೃಜೇಶ್ ಚೌಟ ನೇತೃತ್ವದಲ್ಲಿ ಪ್ರಶಸ್ತಿ ವಿಜೇತ ರಿಗೆ ಬಹುಮಾನ ವಿತರಿಸಲಾಯಿತು.