ಯುಡಿಐಡಿ ಕಾರ್ಡ್‌ಗಾಗಿ ನೋಂದಾಯಿಸಲು ಸೂಚನೆ
Update: 2022-03-28 19:35 IST
ಮಂಗಳೂರು : ವಿಶಿಷ್ಟ ಅಂಗವೈಕಲ್ಯ ಕಾರ್ಡ್ ಕಡ್ಡಾಯವಾಗುವ ಹಾಗೂ ಹಳೆ ಗುರುತು ಚೀಟಿ ರದ್ದುಗೊಳ್ಳುವ ಸಾಧ್ಯತೆಯಿರುವ ಕಾರಣ ಜಿಲ್ಲೆಯ ವಿಕಲಚೇತನರು ಸರಕಾರದ ಸೌಲಭ್ಯಗಳನ್ನು ಪಡೆದುಕೊಳ್ಳಲು ಅನುಕೂಲವಾಗುವಂತೆ ತಕ್ಷಣ ತಮ್ಮ ವಾಸ ಸ್ಥಳ ವ್ಯಾಪ್ತಿಯ ಆರ್‌ಡಬ್ಲ್ಯೂ, ಯುಆರ್‌ಡಬ್ಲ್ಯೂ ಹಾಗೂ ಎಂಆರ್‌ಡಬ್ಲ್ಯೂ ಅವರನ್ನು ಸಂಪರ್ಕಿಸಿ ಸಾರ್ವಜನಿಕ ಆರೋಗ್ಯ ಕೇಂದ್ರಗಳಲ್ಲಿ ನಿಗದಿಪಡಿಸಿದ ದಿನಾಂಕದಂದು ಯುಡಿಐಡಿ ಕಾರ್ಡ್ ಪಡೆಯಲು ನೋಂದಾಯಿಸಿಕೊಳ್ಳುವಂತೆ ಜಿಲ್ಲಾ ವಿಕಲಚೇತನರ ಕಲ್ಯಾಣಾಧಿಕಾರಿ ಪ್ರಕಟನೆಯಲ್ಲಿ ತಿಳಿಸಿದ್ದಾರೆ.