ಪ್ರಥಮ ಪಿಯುಸಿ ಪರೀಕ್ಷೆ: ಹಿಜಾಬ್ ಹಕ್ಕಿಗಾಗಿ ನ್ಯಾಯಾಲಯದ ಮೆಟ್ಟಿಲೇರಿರುವ ಇಬ್ಬರು ವಿದ್ಯಾರ್ಥಿನಿಯರು ಗೈರು
Update: 2022-03-29 12:04 IST
ಉಡುಪಿ, ಮಾ.29: ಇಂದು ನಡೆದ ಪ್ರಥಮ ಪಿಯುಸಿ ಅಂತಿಮ ಪರೀಕ್ಷೆಗೆ ಹಿಜಾಬ್ ಹಕ್ಕಿಗಾಗಿ ನ್ಯಾಯಾಲಯದ ಮೆಟ್ಟಿಲೇರಿರುವ ಉಡುಪಿಯ ಐವರು ವಿದ್ಯಾರ್ಥಿನಿಯರ ಪೈಕಿ ಇಬ್ಬರು ಗೈರು ಹಾಜರಾಗಿದ್ದಾರೆ.
ಉಡುಪಿಯ ಸರಕಾರಿ ಪದವಿ ಪೂರ್ವ ಮಹಿಳಾ ಕಾಲೇಜಿನ ವಿದ್ಯಾರ್ಥಿನಿಯರಾದ ಮುಸ್ಕಾನ್ ಮತ್ತು ಸಫಾ ಇಂದಿನ ಪರೀಕ್ಷಗೆ ಗೈರು ಹಾಜರಾಗಿರುವುದಾಗಿ ಕಾಲೇಜಿನ ಆಡಳಿತ ಮಂಡಳಿ ಮಾಹಿತಿ ನೀಡಿದೆ.