×
Ad

ಮಂಜನಾಡಿ ಬಂಡೆಸಾಲೆ ಖತೀಜಾ ಮಸೀದಿ ಉದ್ಘಾಟನೆ

Update: 2022-03-29 12:49 IST

ಉಳ್ಳಾಲ, ಮಾ.29: ಮಂಜನಾಡಿ ಎನ್.ಎಸ್. ಫ್ಯಾಮಿಲಿಯು ಮಂಜನಾಡಿ ಗ್ರಾಮದ ಬಂಡಸಾಲೆಯಲ್ಲಿ ನಿರ್ಮಿಸಿದ ಖದೀಜಾ ಮಸೀದಿ ಉದ್ಘಾಟನೆಗೊಂಡಿತು.

ಸಮಸ್ತ ಕೇರಳ ಜಂಇಯ್ಯತುಲ್ ಉಲಮಾ ಕೇಂದ್ರ ಮುಶಾವರದ ಉಪಾಧ್ಯಕ್ಷ ಸೈಯದ್ ಕೆ.ಎಸ್.ಆಟಕೋಯ ತಂಙಳ್ ಕುಂಬೋಳ್ ನೂತನ ಮಸೀದಿಯನ್ನು ಉದ್ಘಾಟಿಸಿದರು.

ಮಂಜನಾಡಿ ಕೇಂದ್ರ ಜುಮಾ ಮಸೀದಿಯ ಮುದರ್ರಿಸ್ ಅಹ್ಮದ್ ಬಾಖವಿ ಪ್ರಾಸ್ತಾವಿಕ‌‌ ಮಾತುಗಳನ್ನಾಡಿದರು‌.

ಅಲ್-ಮದೀನ ಇಸ್ಲಾಮಿಕ್ ಕಾಂಪ್ಲೆಕ್ಸ್ ನ ಮ್ಯಾನೇಜರ್ ಅಬ್ದುಲ್ ಖಾದರ್ ಸಖಾಫಿ, ನಿದೇರ್ಶಕ ಮುಹಮ್ಮದ್ ಕುಂಞಿ ಅಮ್ಜದಿ, ಎನ್.ಎಸ್ ಮಹ್ಮೂದ್ ಹಾಜಿ, ಮಂಜನಾಡಿ ಜುಮಾ ಮಸೀದಿಯ ಪ್ರ.ಕಾರ್ಯದರ್ಶಿ ಅಬ್ದುಲ್ ಅಝೀಝ್ ಪರ್ತಿಪ್ಪಾಡಿ, ಕೋಶಾಧಿಕಾರಿ ಅಹ್ಮದ್ ಕುಂಞಿ ನೆಕ್ಕರೆ ಬಾವು, ಮುಸ್ಲಿಮ್ ಜಮಾಅತ್ ಉಳ್ಳಾಲ್ ತಾಲೂಕು ಅಧ್ಯಕ್ಷ ಅಲಿಕುಂಞಿ ಹಾಜಿ‌ ಪಾರೆ, ಬಂಡಸಾಲೆ ಮುನವ್ವಿರುಲ್ ಇಸ್ಲಾಂ ಮದ್ರಸದ ಸದರ್‌ ಮುಅಲ್ಲಿಂ ಮುಹಮ್ಮದ್ ಶರೀಫ್ ಮದನಿ, ಎಚ್.ಎನ್.ಹಮೀದ್ ಹಾಜಿ, ಶಾಕಿರ್ ಹಾಜಿ, ಮೂಸಬ್ಬ ಹಾಜಿ‌ ಕಾರ್ಕಳ, ಖತೀಜಾ‌ ಮಸೀದಿಯ ಅಧ್ಯಕ್ಷ ಮುಹಮ್ಮದ್ ಮೋನು, ಕಾರ್ಯದರ್ಶಿ ಅಬ್ದುಲ್ ಖಾದರ್ ಉಸ್ತಾದ್, ಮಂಜನಾಡಿ ಗ್ರಾಪಂ ಸದಸ್ಯ ಇಸ್ಮಾಯೀಲ್ ಬಾವು, ನರಿಂಗಾನ ಗ್ರಾಪಂ ಸದಸ್ಯರಾದ ಮುರಳೀದರ್ ಶೆಟ್ಟಿ ಮೋರ್ಲ, ಸಲೀಂ ನರಿಂಗಾನ‌ ಉಪಸ್ಥಿತರಿದರು‌.

ಬಂಡಸಾಲೆ ಮುನವ್ವಿರುಲ್ ಇಸ್ಲಾಂ ಮದ್ರಸದ ಗೌರವಾಧ್ಯಕ್ಷ ಎ.ಎಂ.ಇಬ್ರಾಹೀಂ ಹಾಜಿ ಸ್ವಾಗತಿಸಿದರು. ಹಾಜಿ‌ ಎನ್.ಎಸ್.ಕರೀಂ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News