×
Ad

ಉಡುಪಿ ಎಸ್‌ಡಿಎಂ ಆಯುರ್ವೇದ ಕಾಲೇಜಿಗೆ 24 ರ‍್ಯಾಂಕ್

Update: 2022-03-29 18:59 IST
ಅನುಷಾ, ಶ್ರೀಕುಟ್ಟಿ, ಪಲ್ಲವಿ

ಉಡುಪಿ : ಬೆಂಗಳೂರು ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನ ವಿಶ್ವವಿದ್ಯಾಲಯ ನಡೆಸಿದ ೨೦೨೧-೨೨ರ ಸಾಲಿನ ಮೊದಲ ವರ್ಷದ ಸ್ನಾತಕೋತ್ತರ ವಿಭಾಗದ ಪರೀಕ್ಷೆಯಲ್ಲಿ ಉಡುಪಿ ಎಸ್.ಡಿ.ಎಂ. ಆಯುರ್ವೇದ ಕಾಲೇಜಿನ ವಿದ್ಯಾರ್ಥಿಗಳು 24  ರ‍್ಯಾಂಕ್ ಗಳಿಸಿ ಸಾಧನೆ ಮಾಡಿದ್ದಾರೆ.

ಪರೀಕ್ಷೆಗೆ ಹಾಜರಾದ ೫೫ ವಿದ್ಯಾರ್ಥಿಗಳಲ್ಲಿ ಮಾನಸ ರೋಗ ವಿಭಾಗದಲ್ಲಿ ೪, ಅಗದ ತಂತ್ರ ವಿಭಾಗದಲ್ಲಿ ೪, ಪ್ರಸೂತಿ ತಂತ್ರ ಮತ್ತು ಸ್ತ್ರೀರೋಗ ವಿಭಾಗದಲ್ಲಿ ೩, ರೋಗ ನಿದಾನ, ಕಾಯ ಚಿಕಿತ್ಸಾ, ದ್ರವ್ಯಗುಣ, ಕೌಮಾರ ಭೃತ್ಯ ವಿಭಾಗದಲ್ಲಿ ತಲಾ ಇಬ್ಬರು, ಶರೀರರಚನ, ಸ್ವಸ್ಥವೃತ್ತ, ರಸಶಾಸ್ತ್ರ ಮತ್ತು ಬೈಷಜ್ಯಕಲ್ಪನ, ಪಂಚಕರ್ಮ, ಸಂಹಿತ ಮತ್ತು ಸಿದ್ಧಾಂತ ವಿಭಾಗದಲ್ಲಿ ತಲಾ ಒಬ್ಬರು   ರ‍್ಯಾಂಕ್ ಗಳನ್ನು ಪಡೆಯುವ ಮೂಲಕ ಚಿನ್ನದ ಪದಕಗಳನ್ನು ಗಳಿಸಿದ್ದಾರೆ.

ಮಾನಸರೋಗ ವಿಭಾಗದಿಂದ ಡಾ.ಪಾಟ ಅನುಷಾ, ಅಗದ ತಂತ್ರ ವಿಭಾಗ ದಿಂದ ಡಾ.ಶ್ರೀಕುಟ್ಟಿ ಪಿ.ವಿ., ರೋಗನಿಧಾನ ವಿಭಾಗದಿಂದ ಡಾ.ಪಲ್ಲವಿ ಗಣೇಶ್ ಪೂಜಾರಿ ಒಂದನೇ  ರ‍್ಯಾಂಕ್ ಪಡೆದಿದ್ದಾರೆ. ಮಾನಸರೋಗ ವಿಭಾಗದಿಂದ ಡಾ. ಆರ್.ಸಂತೋಷಿಣಿ, ಪ್ರಸೂತಿ ತಂತ್ರ ಮತ್ತು ಸ್ತ್ರೀರೋಗ ವಿಭಾಗದಿಂದ ಡಾ. ಕಾವ್ಯ ಬಿ.ಎನ್.,  ರೋಗನಿದಾನ ವಿಭಾಗದಿಂದ ಡಾ.ದೀಕ್ಷಾ ಡಿ. ಶೆಟ್ಟಿ, ರಚನಾ ಶರೀರ ವಿಭಾಗದಿಂದ ಡಾ.ಮಾಧುರಿ ಆಚಾರ್ಯ ೨ನೇ  ರ‍್ಯಾಂಕ್ ಗಳಿಸಿದ್ದಾರೆ.

ಡಾ.ದಿಲೀಪ್ ಪಿ., ಡಾ.ವಿಜಯಲಕ್ಷ್ಮೀ ಕಾಮತಾರ್, ಡಾ.ತೇಜಸ್ವಿನಿ, ಡಾ. ತೇಜಸ್ವಿನಿ ರಜನಾಲ್ ಮೂರನೇ  ರ‍್ಯಾಂಕ್, ಡಾ.ಸ್ವಾತಿ ಕೆ.ಎಸ್., ಡಾ.ಶ್ರದ್ಧ ಜಿ.ಎಸ್. ೪ನೇ ರ್ಯಾಂಕ್, ಡಾ.ಹರಿತ ಎಂ., ಡಾ.ಪವಾರ್ ಭಾಗ್ಯಶ್ರೀ ಗಿರಿಧರ್, ಡಾ.ಪೂಜಾ ಭಟ್ ೫ನೇ ರ‍್ಯಾಂಕ್, ಡಾ.ಅನ್ಶ ಮನೋಹರನ್, ಡಾ.ನೇಹಾ ಮೋಹನ್ ರೊಖಡೆ, ಡಾ.ಲೇಕ್ಷ್ಮಿ ಎಂ.ಎಸ್., ಡಾ.ಐಶ್ವರ್ಯ ಅಂಚನ್ ೬ನೇ ರ‍್ಯಾಂಕ್, ಡಾ.ಶಾಲಿನಿ ಕಟೋಚ ೭ನೇ ರ್ಯಾಂಕ್, ಡಾ. ಅಂಜು ಜಿ.ಕೆ. ೯ನೇ  ರ‍್ಯಾಂಕ್, ಡಾ.ನಯನ ಎನ್., ಡಾ.ಅಂಕಿತಾ ೧೦ನೇ ರ‍್ಯಾಂಕ್ ಪಡೆದಿದ್ದಾರೆ.

ಅಲ್ಲದೆ ರಿಸರ್ಚ್ ಮೆಥೊಡೋಲಜಿ ಹಾಗೂ ಬಯೋಸ್ಟ್ಯಾಟಿಸ್‌ಟಿಕ್ ವಿಷಯದಲ್ಲಿ ಪರೀಕ್ಷೆಗೆ ಹಾಜರಾದ ೫೫ ವಿದ್ಯಾರ್ಥಿಗಳಲ್ಲಿ ಒಟ್ಟು ೩೦ ವಿದ್ಯಾರ್ಥಿಗಳು ವಿವಿಧ  ರ‍್ಯಾಂಕ್ ಗಳನ್ನು ಗಳಿಸಿದ್ದಾರೆ. ವಿವಿಧ ವಿಷಯವಾರು ಪರೀಕ್ಷೆಯಲ್ಲಿ 33  ರ‍್ಯಾಂಕ್ ಗಳನ್ನು ಗಳಿಸಿದ್ದು, ಸಮಗ್ರ ವಿಭಾಗದಲ್ಲಿ ಒಟ್ಟು ೨೪  ರ‍್ಯಾಂಕ್ ಗಳು ಲಭಿಸಿದೆ ಎಂದು ಪ್ರಕಟಣೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News