ಐಪಿಎಲ್: ಹೈದರಾಬಾದ್ ವಿರುದ್ಧ ರಾಜಸ್ಥಾನಕ್ಕೆ ಭರ್ಜರಿ ಜಯ

Update: 2022-03-29 17:50 GMT
ಸಂಜು ಸ್ಯಾಮ್ಸನ್, Photo:twitter

ಪುಣೆ, ಮಾ.29: ಯಜುವೇಂದ್ರ ಚಹಾಲ್(3-22),ಪ್ರಸಿದ್ಧ ಕೃಷ್ಣ(2-16) ಹಾಗೂ ಟ್ರೆಂಟ್ ಬೌಲ್ಟ್(2-23)ಅವರ ಶಿಸ್ತುಬದ್ಧ ಬೌಲಿಂಗ್ ದಾಳಿಯ ನೆರವಿನಿಂದ ಐಪಿಎಲ್‌ನ ಐದನೇ ಪಂದ್ಯದಲ್ಲಿ ರಾಜಸ್ಥಾನ ರಾಯಲ್ಸ್ ತಂಡ ಸನ್‌ರೈಸರ್ಸ್ ಹೈದರಾಬಾದ್ ತಂಡವನ್ನು 61 ರನ್‌ಗಳ ಅಂತರದಿಂದ ಮಣಿಸಿತು.

ಮಂಗಳವಾರ ನಡೆದ ಪಂದ್ಯದಲ್ಲಿ ಗೆಲ್ಲಲು 211 ರನ್ ಗುರಿ ಪಡೆದ ಹೈದರಾಬಾದ್ ತಂಡ 20 ಓವರ್‌ಗಳಲ್ಲಿ 7 ವಿಕೆಟ್‌ಗಳ ನಷ್ಟಕ್ಕೆ 149 ರನ್ ಗಳಿಸಿತು.

10.2ನೇ ಓವರ್‌ನಲ್ಲಿ 37 ರನ್‌ಗೆ ಪ್ರಮುಖ 5 ವಿಕೆಟ್‌ಗಳನ್ನು ಕಳೆದುಕೊಂಡಿದ್ದ ಹೈದರಾಬಾದ್ ಕಳಪೆ ಆರಂಭ ಪಡೆಯಿತು. ಏಡೆನ್ ಮರ್ಕರಮ್ ತಂಡದ ಪರ ಸರ್ವಾಧಿಕ ಸ್ಕೋರ್ (ಔಟಾಗದೆ 57, 41 ಎಸೆತ, 5 ಬೌಂಡರಿ, 2 ಸಿಕ್ಸರ್)ಗಳಿಸಿದರು. ಆಲ್‌ರೌಂಡರ್ ವಾಷಿಂಗ್ಟನ್ ಸುಂದರ್ 40 ರನ್(14 ಎಸೆತ, 5 ಬೌಂ.,2 ಸಿ.) ಗಳಿಸಿದರು.
  
 ಇದಕ್ಕೂ ಮೊದಲು ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ರಾಜಸ್ಥಾನ ರಾಯಲ್ಸ್ ತಂಡ ನಾಯಕ ಸಂಜು ಸ್ಯಾಮ್ಸನ್(55 ರನ್) ಹಾಗೂ ದೇವದತ್ತ ಪಡಿಕ್ಕಲ್(41 ರನ್)ಸಾಹಸದಿಂದ ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ನಿಗದಿತ 20 ಓವರ್‌ಗಳಲ್ಲಿ 6 ವಿಕೆಟ್ ನಷ್ಟಕ್ಕೆ 210 ರನ್ ಗಳಿಸಿತು. ಕೇನ್ ವಿಲಿಯಮ್ಸನ್ ಬಳಗಕ್ಕೆ ಗೆಲ್ಲಲು ಕಠಿಣ ಗುರಿ ನೀಡಿತು.

ಆರಂಭಿಕ ಬ್ಯಾಟರ್ ಜೋಸ್ ಬಟ್ಲರ್(35 ರನ್,28 ಎಸೆತ, 3 ಬೌಂ.,3 ಸಿ.)ಯಶಸ್ವಿ ಜೈಸ್ವಾಲ್(20 ರನ್, 16 ಎಸೆತ,2 ಬೌಂ.,1 ಸಿ.)ಜೊತೆಗೆ ಇನಿಂಗ್ಸ್ ಆರಂಭಿಸಿ ಮೊದಲ ವಿಕೆಟಿಗೆ 58 ರನ್ ಜೊತೆಯಾಟ ನಡೆಸಿದರು. ತಂಡವು 75 ರನ್‌ಗೆ 2 ವಿಕೆಟ್ ಕಳೆದುಕೊಂಡಾಗ ಜೊತೆಯಾದ ಸ್ಯಾಮನ್ಸ್(55 ರನ್, 27 ಎಸೆತ, 3 ಬೌಂ.,5 ಸಿ.) ಹಾಗೂ ಪಡಿಕ್ಕಲ್(41 ರನ್, 29 ಎಸೆತ, 4 ಬೌಂ.,2 ಸಿ.) ಮೂರನೇ ವಿಕೆಟಿಗೆ 73 ರನ್ ಜೊತೆಯಾಟ ನಡೆಸಿ ರಾಜಸ್ಥಾನ ರಾಯಲ್ಸ್ ಉತ್ತಮ ಮೊತ್ತ ಗಳಿಸಲು ನೆರವಾದರು.

5ನೇ ವಿಕೆಟ್‌ಗೆ 44 ರನ್ ಸೇರಿಸಿದ ಶಿಮ್ರನ್ ಹೆಟ್ಮೆಯರ್(32 ರನ್,13 ಎಸೆತ, 2 ಬೌಂ.,3 ಸಿ.)ಹಾಗೂ ರಿಯಾನ್ ಪರಾಗ್(12,9 ಎಸೆತ)ತಂಡವು 6 ವಿಕೆಟ್ ನಷ್ಟಕ್ಕೆ 210 ರನ್ ಗಳಿಸಲು ನೆರವಾದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News