ಮಂಗಳೂರು: ಯುವ ಕಾಂಗ್ರೆಸ್ ಬೈಕ್ ರ‍್ಯಾಲಿಗೆ ತಡೆ
Update: 2022-03-30 16:34 IST
ಮಂಗಳೂರು : ರಾಜ್ಯ ಯುವ ಕಾಂಗ್ರೆಸ್ ರಾಜ್ಯಾಧ್ಯಕ್ಷ ಮುಹಮ್ಮದ್ ಹಾರಿಸ್ ನಲಪಾಡ್ ಅವರನ್ನು ಸ್ವಾಗತಿಸಲು ಯುವ ಕಾಂಗ್ರೆಸ್ ಕಾರ್ಯಕರ್ತರು ಮಂಗಳೂರು ವಿಮಾನ ನಿಲ್ದಾಣದಿಂದ ಮಂಗಳೂರು ನಗರಕ್ಕೆ ಹಮ್ಮಿಕೊಂಡಿದ್ದ ಬೈಕ್ ರ‍್ಯಾಲಿಗೆ ಪೊಲೀಸರು ತಡೆ ಒಡ್ಡಿದ ಘಟನೆ ನಡೆದಿದೆ.
ಯುವ ಕಾಂಗ್ರೆಸ್ ಕಾರ್ಯಕರ್ತರು ವಿಮಾನ ನಿಲ್ದಾಣದಿಂದ ಆರಂಭಿಸಿ ಕೆಳಗಿನ ರಸ್ತೆಗೆ ಆಗಮಿಸುವ ದಾರಿಯಲ್ಲಿ ತಡೆದು ಬಳಿಕ ಹೆಲ್ಮೆಟ್ ಹಾಕಿದವರಿಗೆ ತೆರಳಲು ಅವಕಾಶ ನೀಡಿದರು.
ಹೆಲ್ಮೆಟ್ ಹಾಕದೆ ಮತ್ತು ಬೈಕ್ ರ‍್ಯಾಲಿ ಬಗ್ಗೆ ಮುಂಚಿತವಾಗಿ ಅನುಮತಿ ಪಡೆದಿಲ್ಲ ಎಂಬ ಕಾರಣಕ್ಕಾಗಿ ಬೈಕ್ ರ‍್ಯಾಲಿ ತಡೆದಿರುವುದಾಗಿ ಪೊಲೀಸರು ತಿಳಿಸಿದ್ದಾರೆ.