×
Ad

ದ.ಕ. ಜಿಲ್ಲೆ : 6 ಮಂದಿ ಪೊಲೀಸರು ಮುಖ್ಯಮಂತ್ರಿ ಪದಕಕ್ಕೆ ಆಯ್ಕೆ

Update: 2022-03-30 19:37 IST
ನಂದಕುಮಾರ್

ಮಂಗಳೂರು : ದ.ಕ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವ್ಯಾಪ್ತಿಯ ಓರ್ವ  ಪೊಲೀಸ್ ಅಧಿಕಾರಿ ಸೇರಿದಂತೆ ದ.ಕ. ಜಿಲ್ಲೆಯ ಒಟ್ಟು ಆರು ಮಂದಿ ಪೊಲೀಸರು ಮುಖ್ಯಮಂತ್ರಿ ಪದಕಕ್ಕೆ ಆಯ್ಕೆಯಾಗಿದ್ದಾರೆ.

ಮಂಗಳೂರು ಪೊಲೀಸ್ ಕಮಿಷನರೇಟ್ ವ್ಯಾಪ್ತಿಯ ನಟರಾಜ್ (ಎಸಿಪಿ, ಸಂಚಾರ), ಪ್ರದೀಪ್ ಟಿ.ಆರ್ (ಪಿಎಸ್‌ಐ, ಸಿಸಿಬಿ), ಶೋಭಾ (ಪಿಎಸ್‌ಐ, ಬರ್ಕೆ ಠಾಣೆ), ಕುಶಾಲ್ ಮಣಿಯಾಣಿ (ಎಎಸ್‌ಐ ಬಜಪೆ ಠಾಣೆ), ಇಸಾಕ್ ಕೆ (ಸಿಎಚ್‌ಸಿ ಪಣಂಬೂರು ಠಾಣೆ) ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವ್ಯಾಪ್ತಿಯ ಬೆಳ್ತಂಗಡಿ ಠಾಣೆಯ ನಂದಕುಮಾರ್ (ಪಿಎಸ್‌ಐ) ಮುಖ್ಯಮಂತ್ರಿ ಪದಕಕ್ಕೆ ಆಯ್ಕೆಯಾಗಿದ್ದಾರೆ.

ಇವರಿಗೆ ಮಂಗಳೂರು ಪೊಲೀಸ್ ಕಮಿಷನರ್ ಎನ್. ಶಶಿಕುಮಾರ್ ಹಾಗೂ ಪೊಲೀಸ್ ವರಿಷ್ಠಾಧಿಕಾರಿ ಋಷಿಕೇಶ್ ಸೊನಾವಣೆ ಅಭಿನಂದನೆ ಸಲ್ಲಿಸಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News