×
Ad

ಉತ್ತರಪ್ರದೇಶ: 12ನೇ ತರಗತಿಯ ಇಂಗ್ಲೀಷ್ ಪ್ರಶ್ನೆ ಪತ್ರಿಕೆ ಸೋರಿಕೆ, ಪರೀಕ್ಷೆ ಮುಂದೂಡಿಕೆ

Update: 2022-03-30 22:23 IST

ಸಾಂದರ್ಭಿಕ ಚಿತ್ರ

ಲಕ್ನೋ, ಮಾ. 30: ಪ್ರಶ್ನೆ ಪತ್ರಿಕೆ ಸೋರಿಕೆಯಾದ ಬಳಿಕ ಉತ್ತರಪ್ರದೇಶದ 12ನೇ ತರಗತಿ ಪರೀಕ್ಷಾ ಮಂಡಳಿ ರಾಜ್ಯದ 75ರಲ್ಲಿ 24 ಜಿಲ್ಲೆಗಳ ಇಂಗ್ಲೀಷ್ ಪರೀಕ್ಷೆಯನ್ನು ರದ್ದುಗೊಳಿಸಿದೆ.

ಉಳಿದ 51 ಜಿಲ್ಲೆಗಳಲ್ಲಿ ಪರೀಕ್ಷೆ ವೇಳಾಪಟ್ಟಿಯಂತೆ ನಡೆದವು ಎಂದು ಉತ್ತರಪ್ರದೇಶ ಸರಕಾರ ಟ್ವೀಟರ್‌ನಲ್ಲಿ ಹೇಳಿದೆ. ‘‘24 ಜಿಲ್ಲೆಗಳಲ್ಲಿ ಪರೀಕ್ಷೆ ನಡೆಯುವ ಹೊಸ ದಿನಾಂಕವನ್ನು ಶೀಘ್ರದಲ್ಲಿ ಘೋಷಿಸಲಾಗುವುದು’’ ಎಂದು ಸೆಕಂಡರಿ ಶಿಕ್ಷಣ ಇಲಾಖೆಯ ನಿರ್ದೇಶಕ ವಿನಯ್ ಕುಮಾರ್ ಪಾಂಡೆ ಅವರು ಹೇಳಿದ್ದಾರೆ.

ಬಲ್ಲಿಯಾ ಜಿಲ್ಲೆಯಲ್ಲಿ ಪ್ರಶ್ನೆ ಪತ್ರಿಕೆ ಸೋರಿಕೆಯಾಗಿದೆ ಎಂದು ಶಂಕಿಸಲಾಗಿದೆ. 316 ಇಡಿ ಹಾಗೂ 316 ಇಐ ಶ್ರೇಣಿಯ ಪ್ರಶ್ನೆ ಪತ್ರಿಕೆ ಸೋರಿಕೆಯಾದ ಬಗ್ಗೆ ಸಂದೇಹಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ. ಮಂಗಳವಾರ ಪರೀಕ್ಷೆ ಆರಂಭವಾಗುವುದಕ್ಕಿಂತ ಮುನ್ನ ಉತ್ತರಪ್ರದೇಶ ಸರಕಾರ, ದುಷ್ಕೃತ್ಯದಲ್ಲಿ ತೊಡಗಿದವರ ವಿರುದ್ಧ ಕಠಿಣ ರಾಷ್ಟ್ರೀಯ ಭದ್ರತಾ ಕಾಯ್ದೆ ಅಡಿಯಲ್ಲಿ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಹೇಳಿದೆ. ಆದರೆ, ಪರೀಕ್ಷೆಯ ಮೊದಲ ದಿನ 10ನೇ ತರಗತಿಯ ಸಂಸ್ಕೃತ ಪ್ರಶ್ನೆ ಪತ್ರಿಕೆಯ ಉತ್ತರ ಕೀ ಸೋರಿಕೆಯಾಗಿದೆ ಎಂದು ಹಿಂದಿ ದೈನಿಕ ‘ದೈನಿಕ್ ಜಾಗರಣ್’ ವರದಿ ಮಾಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News