×
Ad

ಬೆಳ್ತಂಗಡಿ; ನಿಷೇಧಾಜ್ಞೆ ಉಲ್ಲಂಘಿಸಿ ಪ್ರತಿಭಟನೆ ಆರೋಪ: ಎಸ್ಡಿಪಿಐ ಮುಖಂಡರ ವಿರುದ್ಧ ಪ್ರಕರಣ ದಾಖಲು

Update: 2022-03-31 16:34 IST
ಫೈಲ್‌ ಫೋಟೊ 

ಬೆಳ್ತಂಗಡಿ: ನಿಷೇಧಾಜ್ಞೆ ಉಲ್ಲಂಘಿಸಿ ಪ್ರತಿಭಟನೆ ನಡೆಸಿದ ಆರೋಪದಲ್ಲಿ ಬೆಳ್ತಂಗಡಿ ತಹಶೀಲ್ದಾರ್ ನೀಡಿರುವ ದೂರಿನಂತೆ ಎಸ್ಡಿಪಿಐ ಮುಖಂಡರುಗಳ ವಿರುದ್ಧ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ಜಿಲ್ಲಾಧಿಕಾರಿಯವರು ಘೋಷಿಸಿದ ನಿಷೇದಾಜ್ಞೆ  ಜಾರಿಯಲ್ಲಿರುವಾಗಲೇ ಮಾ.29ರಂದು ಬೆಳ್ತಂಗಡಿ ಬಸ್ ನಿಲ್ದಾಣದ ಸಮೀಪ ಕೂಟ ಸೇರಿ ಧ್ವನಿವರ್ಧಕ ಉಪಯೋಗಿಸಿ ಮೆರವಣಿಗೆ ನಡೆಸಿ ಕಾನೂನು ಉಲ್ಲಂಘಿಸಿರುವುದಾಗಿ ತಹಶೀಲ್ದಾರ್ ಅವರು ನೀಡಿದ ದೂರಿನಂತೆ ಬೆಳ್ತಂಗಡಿ ಠಾಣೆಯಲ್ಲಿ ಕಲಂ143,188,ಜೊತೆಗೆ 149ಐಪಿಸಿ ಹಾಗೂ 34,36,107,109,kpಆಕ್ಟ್ ‌ನಂತೆ ಪ್ರಕರಣ ದಾಖಲಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News