×
Ad

ರಾಷ್ಟ್ರೀಯ ವೆಯ್ಟ್ ಲಿಫ್ಟಿಂಗ್ ಚಾಂಪಿಯನ್‌ಶಿಪ್; ಆಳ್ವಾಸ್ ಕಾಲೇಜಿನ ಹಿರಿಯ ವಿದ್ಯಾರ್ಥಿನಿ ಉಷಾಗೆ ಚಿನ್ನದ ಪದಕ

Update: 2022-03-31 19:01 IST

ಮೂಡುಬಿದಿರೆ: ಒರಿಸ್ಸಾದ ಭುವನೇಶ್ವರದಲ್ಲಿ ನಡೆಯುತ್ತಿರುವ ರಾಷ್ಟ್ರೀಯ ವೆಯ್ಟ್ ಲಿಫ್ಟಿಂಗ್ ಚಾಂಪಿಯನ್‌ಶಿಪ್‌ನಲ್ಲಿ ಮೂಡಬಿದಿರೆಯ ಆಳ್ವಾಸ್ ಕಾಲೇಜಿನ ಹಿರಿಯ ವಿದ್ಯಾರ್ಥಿನಿ ಉಷಾ ಬಿ.ಎನ್ ಚಿನ್ನದ ಪದಕವನ್ನು ಪಡೆದಿರುತ್ತಾರೆ.

ಕಾಮನ್ವೆಲ್ತ್ ಚಾಂಪಿಯನ್ ಆಗಿರುವ ಉಷಾ ಎಪ್ರಿಲ್‌ನಲ್ಲಿ ಇಂಗ್ಲೆಂಡ್‌ನಲ್ಲಿ ನಡೆಯಲಿರುವ ಕಾಮನ್ವೆಲ್ತ್ ಗೇಮ್ಸ್‌ ನಲ್ಲಿ ರಾಷ್ಟ್ರವನ್ನು ಪ್ರತಿನಿಧಿಸಲಿದ್ದಾರೆ.

ಮೂಲತಃ ಅರಸೀಕೆರೆಯವರಾದ ಉಷಾ ಬಿ.ಎನ್ ತನ್ನ ಪದವಿಪೂರ್ವ ಶಿಕ್ಷಣದಿಂದ ಸ್ನಾತಕೋತ್ತರ ಶಿಕ್ಷಣವನ್ನು ಆಳ್ವಾಸ್‌ನಲ್ಲಿ ದತ್ತು ಶಿಕ್ಷಣದಡಿ ಪೂರೈಸಿದ್ದಾರೆ.

ಪ್ರಸ್ತುತ ಇಂಡಿಯನ್ ರೈಲ್ವೇಸ್‌ನ ಉದ್ಯೋಗಿಯಾಗಿದ್ದಾರೆ. ಇವರ ಸಾಧನೆಯನ್ನು ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಡಾ. ಎಂ ಮೋಹನ್ ಆಳ್ವ  ಶ್ಲಾಘಿಸಿದ್ದಾರೆ.  

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News