×
Ad

ಪ್ರಥಮ ಪಿಯುಸಿ ಪರೀಕ್ಷೆ: ಉಡುಪಿ ಜಿಲ್ಲೆಯಲ್ಲಿ 204 ವಿದ್ಯಾರ್ಥಿಗಳು ಗೈರು

Update: 2022-03-31 19:30 IST

ಉಡುಪಿ : ಗುರುವಾರ ನಡೆದ ಪ್ರಥಮ ಪಿಯುಸಿಯ ಪೊಲಿಟಿಕಲ್ ಸಾಯನ್ಸ್, ಬಯಾಲಜಿ ಹಾಗೂ ಕಂಪ್ಯೂಟರ್ ಸಾಯನ್ಸ್ ಎಂಡ್ ಇಲೆಕ್ಟ್ರಾನಿಕ್ಸ್ ಪರೀಕ್ಷೆಗೆ ಜಿಲ್ಲೆಯಲ್ಲಿ ಒಟ್ಟು ೨೦೪ ಮಂದಿ ವಿದ್ಯಾರ್ಥಿಗಳು ಗೈರುಹಾಜರಾಗಿದ್ದಾರೆ. ಇವರಲ್ಲಿ ೪೧ ಮಂದಿ ಮುಸ್ಲಿಮ್ ವಿದ್ಯಾರ್ಥಿನಿಯರು ಸೇರಿದ್ದಾರೆ.

ಇಂದಿನ ಮೂರು ವಿಷಯಗಳಿಗೆ ಒಟ್ಟಾಗಿ ಜಿಲ್ಲೆಯಲ್ಲಿ ನೋಂದಣಿಯಾದ ಒಟ್ಟು ವಿದ್ಯಾರ್ಥಿಗಳ ಸಂಖ್ಯೆ ೧೦೫೧೩. ಇವರಲ್ಲಿ ಬಾಲಕರು-೫೨೭೦ ಹಾಗೂ ಬಾಲಕಿಯರು-೫೨೪೩. ಈ ಪೈಕಿ ೫೧೩೨ ಬಾಲಕರು ಮತ್ತು ೫೧೭೭ ಬಾಲಕಿಯರು ಸೇರಿ ಒಟ್ಟು ೧೦೩೦೯ ಮಂದಿ ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದಾರೆ. 

ಜಿಲ್ಲೆಯಲ್ಲಿ ೧೩೮ ಬಾಲಕರು ಹಾಗೂ ೬೬ ಬಾಲಕಿಯರು ಸೇರಿ ಒಟ್ಟು ೨೦೪ ಮಂದಿ ವಿದ್ಯಾರ್ಥಿಗಳು ಇಂದುಗೈರುಹಾಜರಾಗಿದ್ದಾರೆ. ಸರಕಾರಿ ಪ.ಪೂ. ಕಾಲೇಜು ಗಳಲ್ಲಿ ೧೧೮ ಮಂದಿ (೮೪ಬಾಲಕರು+೩೪ ಬಾಲಕಿಯರು), ಅನುದಾನಿತ ಪ.ಪೂ. ಕಾಲೇಜುಗಳಲ್ಲಿ ೬೯(೩೭+೩೨) ಹಾಗೂ ಅನುದಾನ ರಹಿತ ಪ.ಪೂ. ಕಾಲೇಜುಗಳಲ್ಲಿ ೧೭ (೧೭+೦) ವಿದ್ಯಾರ್ಥಿಗಳು  ಗೈರುಹಾಜ ರಾದವರಲ್ಲಿ ಸೇರಿದ್ದಾರೆ.

ಇಂದಿನ ಪರೀಕ್ಷೆಗೆ ಒಟ್ಟು ೮೪೧ ಮಂದಿ ಮುಸ್ಲಿಂ ವಿದ್ಯಾರ್ಥಿಗಳು ಹೆಸರು ನೊಂದಾಯಿಸಿಕೊಂಡಿದ್ದು, ಇವರಲ್ಲಿ ೮೦೯ ಮಂದಿ ಪರೀಕ್ಷೆ ಬರೆದಿದ್ದು ಎಂಟು ಮಂದಿ ಬಾಲಕರು ಹಾಗೂ ೪೧ ಮಂದಿ ಬಾಲಕಿಯರು ಸೇರಿ ಒಟ್ಟು ೪೯ ಮಂದಿ ಪರೀಕ್ಷೆಗೆ ಗೈರಾಗಿದ್ದಾರೆ ಎಂದು ಜಿಲ್ಲಾ ಪದವಿಪೂರ್ವ ಶಿಕ್ಷಣ ಇಲಾಖೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News