×
Ad

ಕೆಐಒಸಿಎಲ್ 47ನೇ ಸಂಸ್ಥಾಪನಾ ದಿನಾಚರಣೆ

Update: 2022-03-31 20:19 IST

ಮಂಗಳೂರು : ಕೆಐಓಸಿಎಲ್  ದೇಶದ ಅಭಿವೃದ್ಧಿಯ ಕೊಡುಗೆ ನೀಡುವುದರ  ಜೊತೆಗೆ ಸ್ಥಳೀಯ ಸಂಸ್ಥೆಗಳ ಬೇಡಿಕೆಗಳಿಗೂ ಸ್ಪಂದಿಸುತ್ತಾ ಬಂದಿದೆ ಎಂದು ಕೆಐಓಸಿಎಲ್ ನ ಸಿಎಂ ಡಿ ಟಿ.ಸ್ವಾಮಿನಾಥನ್ ತಿಳಿಸಿದ್ದಾರೆ.

ಕೆಐಒಸಿಲ್ ನ ಪಣಂಬೂರು ಕೆ.ಎಸ್.ಆರ್.ಸಿ ಕಲಾ ಮಂಟಪದಲ್ಲಿ ಹಮ್ಮಿಕೊಂಡಿದ್ದ ಸಂಸ್ಥೆಯ 47ನೇ ಸಂಸ್ಥಾಪನಾ ದಿನಾಚರಣೆ ಯನ್ನುದ್ದೇಶಿಸಿ ಮಾತನಾಡುತ್ತಿದ್ದರು.

ಸರಕಾರಿ ಶಾಲೆಗಳು ಸೇರಿದಂತೆ ಸ್ಥಳೀಯ ಸಂಸ್ಥೆ ಗಳ ತುರ್ತು ಅಗತ್ಯ ಗಳಿಗೆ ಸಂಸ್ಥೆ ಸಿಎಸ್‌ಆರ್ ನಿಧಿಯಿಂದ ಸಹಾಯ ನೀಡುತ್ತಾ ಬಂದಿದೆ. ಕೋವಿಡ್ ಸಂದರ್ಭದಲ್ಲಿ ಜನರಿಗೆ ತುರ್ತು ಚಿಕಿತ್ಸೆಗೆ ಸಹಾಯ ನೀಡಲು ಕೆಐಓಸಿಎಲ್  ಆರ್ಥಿಕ  ನೆರವು ನೀಡಿದೆ ಎಂದು ಟಿ.ಸ್ವಾಮಿನಾಥನ್ ತಿಳಿಸಿದ್ದಾರೆ.

ಸಮಾರಂಭದಲ್ಲಿ ಕೆಏಓಸಿಎಲ್ ನಿರ್ದೇಶಕ (ಹಣಕಾಸು) ಸ್ವಪನ್ ಕುಮಾರ್ ಗೊರಾಯ್, ನಿರ್ದೇಶಕ (ಪ್ರೊಡಕ್ಷನ್) ಕೆ.ವಿ.ಭಾಸ್ಕರ ರೆಡ್ಡಿ, ಜನರಲ್ ಮ್ಯಾನೇಜರ್ ಗಳಾದ ದಾಸಪ್ಪ ಶೆಟ್ಟಿ, ರಾಮಕೃಷ್ಣ ರಾವ್ ಮೊದಲಾದವರು ಉಪಸ್ಥಿತರಿದ್ದರು, ಸಾರ್ವಜನಿಕ ಸಂಪರ್ಕಾಧಿಕಾರಿ ಮುರುಗೇಶ್ ಸ್ವಾಗತಿಸಿದರು.

ಇದೇ ಸಂದರ್ಭದಲ್ಲಿ ಸಂಸ್ಥೆಯ ಸಿಎಸ್‌ಆರ್ ನಿಧಿಯಿಂದ ವಿವಿಧ ಶಾಲೆ ಕಾಲೇಜುಗಳಿಗೆ ಮತ್ತು ವಿದ್ಯಾರ್ಥಿಗಳಿಗೆ ವಿವಿಧ ಸೌಲಭ್ಯ ಗಳನ್ನು ವಿತರಿಸಲಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News