×
Ad

ಮಿತ್ತಬೈಲ್ : 132ನೇ ಸಾರ್ವಜನಿಕ ರಕ್ತದಾನ ಶಿಬಿರ

Update: 2022-04-01 23:25 IST

ಮಿತ್ತಬೈಲ್: ಶ್ರೀಮಂತರು ಕೋಟ್ಯಂತರ ರೂಪಾಯಿ ಮೌಲ್ಯ ದಾನ ಮಾಡಿ ಪುಣ್ಯ ಲಭಿಸಲು ಸಂಪತ್ತು ವಿನಿಯೋಗ ಮಾಡಿದಂತೆ  ಬಡವರು ತನ್ನ ದೇಹದಲ್ಲಿರುವ ರಕ್ತವನ್ನು ದಾನ ಮಾಡುವುದಾದರೆ, ಪುಣ್ಯ ಪ್ರತಿಫಲ, ನೀರಿಕ್ಷಿಸಿರಿ ಎಂದು  ಬ್ಲಡ್ ಹೆಲ್ಪ್ ಕೇರ್ ಅಧ್ಯಕ್ಷರಾದ ನಝೀರ್ ಹುಸೈನ್ ಹೇಳಿದರು.

ಅವರು ಮುಹಿಯುದ್ದೀನ್ ಜುಮಾ ಮಸೀದಿ ಮಿತ್ತಬೈಲ್  ಇದರ ಆಡಳಿತ ಸಮಿತಿ  ಹಾಗೂ  ಬ್ಲಡ್ ಹೆಲ್ಪ್ ಕೇರ್ ಕರ್ನಾಟಕ(ರಿ), ಜಂಟಿಯಾಗಿ  ಸಂಘಟಿಸಿದ ಕೆ.ಎಂ.ಸಿ. ಆಸ್ಪತ್ರೆ ಮಂಗಳೂರು ಇವರ ಸಹಕಾರದಲ್ಲಿ  ಬ್ಲಡ್ ಹೆಲ್ಪ್ ಕೇರ್ ಕರ್ನಾಟಕ (ರಿ)ಸಂಸ್ಥೆಯ 132ನೇ ಬೃಹತ್  ಸಾರ್ವಜನಿಕ ರಕ್ತದಾನ ಶಿಬಿರವನ್ನು ಮಿತ್ತಬೈಲ್ ಮದ್ರಸ ಸಭಾಂಗಣದಲ್ಲಿ ಉದ್ಘಾಟಿಸಿ ಮಾತಾಡುತ್ತಿದ್ದರು.

ಸಮಾರಂಭದ ಅಧ್ಯಕ್ಷತೆಯನ್ನು ಮುಹಿಯುದ್ದೀನ್ ಜುಮಾ ಮಸೀದಿ ಅಧ್ಯಕ್ಷರಾದ ಮಹಮ್ಮದ್ ಸಾಗರ್ ವಹಿಸಿದರು. ವೇದಿಕೆಯಲ್ಲಿ  ಎಸ್,ಎಚ್, ಶಾಹುಲ್ ಪರ್ಲಿಯ, ಮುಹಿಯುದ್ದೀನ್ ಜುಮಾ ಮಸೀದಿ ಪ್ರಧಾನ ಕಾರ್ಯದರ್ಶಿ ಅಬ್ದುಲ್ ಸಲಾಂ, ಕೋಶಾಧಿಕಾರಿ ಮಹಮ್ಮದ್ ಅಲಿ, ಉದ್ಯಮಿ ಜಮಾಲ್ ಎ, ವನ್, ಹಸೈನಾರ್ ಶಾಂತಿ ಅಂಗಡಿ, ಶರೀಫ್ ಶಾಂತಿ ಅಂಗಡಿ, ಆದಂ ಪಳ್ಳ, ಕೆಎಂಸಿ ಆಸ್ಪತ್ರೆ ವೈದ್ಯೆ ದೀಕ್ಷಾ, ಉಪಸ್ಥಿತರಿದ್ದರು.

ಶಿಬಿರದ ಉಸ್ತುವಾರಿ ನಝೀನ್ ವಹಿಸಿದರು, ಬ್ಲಡ್ ಹೆಲ್ಪ್ ಕೇರ್ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಸಫ್ವಾನ್ ಕಲಾಯಿ ಸ್ವಾಗತಿಸಿದರು. ಅಬ್ದುಲ್ ಹಮೀದ್ ಗೋಳ್ತಮಜಲ್ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News