×
Ad

ರಾಜ್ಯದಲ್ಲಿ ಕಾಂಗ್ರೆಸ್, ಜೆಡಿಎಸ್ ಮುಖಂಡರ ಓಲೈಕೆ ರಾಜಕಾರಣ ನಡೆಯುತ್ತಿದೆ: ಸಚಿವ ಈಶ್ವರಪ್ಪ

Update: 2022-04-03 16:31 IST

ಮಂಗಳೂರು : ಕಾಂಗ್ರೆಸ್, ಜೆಡಿಎಸ್ ಮುಖಂಡರಿಂದ  ಓಲೈಕೆಯ ರಾಜಕಾರಣ ನಡೆಯುತ್ತಿದೆ ಎಂದು ಪಂಚಾಯತ್ ರಾಜ್ ಮತ್ತು ಗ್ರಾಮೀಣಾಭಿವೃದ್ಧಿ ಸಚಿವ ಈಶ್ವರಪ್ಪ ಆರೋಪಿಸಿದ್ದಾರೆ.

ದ.ಕ ಜಿಲ್ಲಾ ಪ್ರಗತಿ ಪರಿಶೀಲನಾ ಸಭೆಯ ಬಳಿಕ ಸುದ್ದಿಗಾರರೊಂದಿಗೆ ಅವರು ಮಾತನಾಡುತ್ತಾ ತಿಳಿಸಿದ್ದಾರೆ.

ಕಾಂಗ್ರೆಸ್ ಮುಖಂಡರಾದ ಸಿದ್ದರಾಮಯ್ಯ, ಡಿಕೆಶಿ, ಜೆಡಿಎಸ್ ಮುಖಂಡರಾದ ಎಚ್.ಡಿ.ಕುಮಾರಸ್ವಾಮಿ ಮುಸಲ್ಮಾನ ರನ್ನು ಓಲೈಸುವ ರಾಜಕಾರಣದಲ್ಲಿ ತೊಡಗಿದ್ದಾರೆ. ಅವರ ಈ ರಾಜಕಾರಣಕ್ಕಾಗಿ ಸರಕಾರವನ್ನು ಟೀಕಿಸುತ್ತಿದ್ದಾರೆ. ಕಾನೂನು ಸುವ್ಯವಸ್ಥೆಗೆ ರಾಜ್ಯದಲ್ಲಿ ತೊಡಕಾಗಿಲ್ಲ ಎಂದು ಈಶ್ವರಪ್ಪ ತಿಳಿಸಿದ್ದಾರೆ. ಹಲಾಲ್, ಜಟ್ಕಾ ಮಾಂಸ ತಿನ್ನುವವರು ತಿನ್ನಲಿ ಕಾಂಗ್ರೆಸ್ ರಾಜಕೀಯದ ಲಾಭ ಗಳಿಕೆಗೆ ಮಾತನಾಡುತ್ತಿದೆ ಎಂದು ಈಶ್ವರಪ್ಪ ತಿಳಿಸಿದ್ದಾರೆ.

ಹರ್ಷ ಹತ್ಯೆಯಾದಾಗ 25ಲಕ್ಷ ರೂ ಪರಿಹಾರ ನೀಡಿರುವುದನ್ನು ಕಾಂಗ್ರೆಸ್  ನಾಯಕರು ಪ್ರಶ್ನಿಸುತ್ತಾರೆ, ಈ ಹಿಂದೆ ಅವರ ಸರಕಾರ ಇದ್ದಾಗ ಹತ್ಯೆಗೀಡಾದ ಗೋರಕ್ಷಕರ ಕುಟುಂಬಕ್ಕೆ ಎಷ್ಟು ಪರಿಹಾರ ನೀಡಿದ್ದಾರೆಂದು ತಿಳಿಸಲಿ ಎಂದು ಈಶ್ವರಪ್ಪ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News