×
Ad

ಉಡುಪಿ: ಉಚಿತ ಆರೋಗ್ಯ ತಪಾಸಣಾ ಶಿಬಿರ

Update: 2022-04-04 18:50 IST

ಉಡುಪಿ : ರಾಷ್ಟ್ರೀಯ ನಗರ ಅರೋಗ್ಯ ಅಭಿಯಾನದ ಅಂಗವಾಗಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ನಗರ ಪ್ರಾಥಮಿಕ ಕೇಂದ್ರ ಮಣಿಪಾಲ, ಕಸ್ತೂರ್ಬಾ ಮೆಡಿಕಲ್ ಕಾಲೇಜಿನ ಸಮುದಾಯ ಔಷಧಿ ಕೇಂದ್ರ, ಉಡುಪಿ ನಗರಸಭೆಯ ಇಂದ್ರಾಳಿ, ಸಗ್ರಿ, ಕಸ್ತೂರ್ಬಾನಗರ ವಾರ್ಡ್ ಸಮಿತಿಗಳು ಹಾಗು ರೋಟರಿ ಕ್ಲಬ್ ಉಡುಪಿ ರಾಯಲ್ ಇವುಗಳ ಸಂಯುಕ್ತ ಆಶ್ರಯದಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರ ಮತ್ತು ಕೋವಿಡ್ ಲಸಿಕಾ ಅಭಿಯಾನ ರವಿವಾರ ಇಂದ್ರಾಳಿಯ ಆಂಗ್ಲ ಮಾಧ್ಯಮ ಶಾಲೆಯಲ್ಲಿ ನಡೆಯಿತು.

ಉಡುಪಿ ನಗರಸಭೆಯ ಸ್ಠಾಯಿ ಸಮಿತಿ ಅಧ್ಯಕ್ಷರಾದ ಡಿ ಬಾಲಕೃಷ್ಣ ಶೆಟ್ಟಿ ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿದರು. ಆರೋಗ್ಯ ಶಿಬಿರಗಳನ್ನು ನಿರಂತರವಾಗಿ ಆಯೋಜಿಸುವುದರಿಂದ ಜನರಲ್ಲಿ ಆರೋಗ್ಯದ ಬಗ್ಗೆ ಜಾಗೃತಿ ಮೂಡಿ ಸ್ವಸ್ಠ ಸಮಾಜ ನಿರ್ಮಾಣವಾಗುತ್ತದೆ ಎಂದರು.

ರೋಟರಿ ಕ್ಲಬ್ ರಾಯಲ್‌ನ ಅಧ್ಯಕ್ಷ ತೇಜೆಶ್ವರ್ ರಾವ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ರೋಟರಿ ಸಹಾಯಕ ಗವರ್ನರ್ ಡಾ.ಸುರೇಶ್ ಶೆಣೈ, ನಗರಸಭಾ ಸದಸ್ಯರಾದ ರಾಜು, ಮಂಜುನಾಥ್ ಮಣಿಪಾಲ, ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ ಚಾರ್ಮಿನ್, ಕೆಎಂಸಿಯ ವೈದ್ಯರಾದ ಡಾ ಅಖಿಲಾ, ಡಾ ಶ್ರೀಕೃಷ್ಣ ಐತಾಳ್, ಡಾ ನಿಹಾರಿಕಾ, ಡಾ ಪೂರ್ಣ, ಡಾ ಸ್ಥೀಫನ್, ಡಾ ಪ್ರಭಾಕರ ಮಲ್ಯ, ಸ್ಠಳಿಯರಾದ ಗೋಪಾಲ ಪ್ರಭು, ಪಾಂಡುರಂಗ ನಾಯಕ್, ಸಾಧು ಶೆಟ್ಟಿ, ಪ್ರೇಮಾ ನಾಯ್ಕ ಮತ್ತಿತರರು ಉಪಸ್ಥಿತರಿದ್ದರು.

ಆರೋಗ್ಯ ಸಹಾಯಕಿ  ಮಂಜವ್ವ ಸ್ವಾಗತಿಸಿ ಶ್ರೀದೇವಿ  ವಂದಿಸಿದರು. ರಾಯಲ್ ಸ್ಠಾಪಕ ಅಧ್ಯಕ್ಷ ರತ್ನಾಕರ ಇಂದ್ರಾಳಿ ಶಿಬಿರವನ್ನು ಸಂಯೋಜಿಸಿ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News