ಪೆಟ್ರೋಲ್,ಡೀಸೆಲ್: ಎರಡು ವಾರಗಳಲ್ಲಿ ಪ್ರತಿ ಲೀಟರ್ ಗೆ 8.40 ರೂ.‌ ಹೆಚ್ಚಳ

Update: 2022-04-04 15:53 GMT

ಹೊಸದಿಲ್ಲಿ,ಎ.4: ಪೆಟೆ್ರಿಲ್ ಮತ್ತು ಡೀಸೆಲ್ ಬೆಲೆಗಳನ್ನು ಸೋಮವಾರ ಪ್ರತಿ ಲೀ.ಗೆ ತಲಾ 40 ಪೈಸೆ ಹೆಚ್ಚಿಸಲಾಗಿದೆ. ಇದರೊಂದಿಗೆ ಕಳೆದ ಎರಡು ವಾರಗಳಲ್ಲಿ ಈ ಇಂಧನಗಳ ಬೆಲೆಗಳಲ್ಲಿ ಒಟ್ಟು ತಲಾ 8.40 ರೂ.ಏರಿಕೆಯಾಗಿದೆ.

ದಿಲ್ಲಿಯಲ್ಲಿ ಈಗ ಪ್ರತಿ ಲೀ.ಪೆಟ್ರೋಲ್ ಬೆಲೆ 103.41 ರೂ.ನಿಂದ 103.81 ರೂ.ಗೆ ಮತ್ತು ಡೀಸೆಲ್ ಬೆಲೆ 94.67 ರೂ.ನಿಂದ 95.0

7 ರೂ.ಗೆ ಏರಿಕೆಯಾಗಿವೆ. ದೇಶಾದ್ಯಂತ ಬೆಲೆಗಳನ್ನು ಹೆಚ್ಚಿಸಲಾಗಿದ್ದು,ಸ್ಥಳೀಯ ತೆರಿಗೆಗಳನ್ನು ಅವಲಂಬಿಸಿ ಏರಿಕೆ ಪ್ರಮಾಣವು ರಾಜ್ಯದಿಂದ ರಾಜ್ಯಕ್ಕೆ ಭಿನ್ನವಾಗಿರುತ್ತದೆ.

ನಾಲ್ಕೂವರೆ ತಿಂಗಳ ವಿರಾಮದ ಬಳಿಕ ಮಾ.22ರಂದು ಇಂಧನ ಬೆಲೆಗಳ ಪರಿಷ್ಕರಣೆ ಆರಂಭಗೊಂಡಾಗಿನಿಂದ ಇಂದಿನದು 12ನೇ ಏರಿಕೆಯಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News