×
Ad

ಮಂಗಳೂರು: ಸಿಟಿ ಗೋಲ್ಡ್‌ನಿಂದ ಎಸಿಪಿ ನಟರಾಜ್‌ಗೆ ಸನ್ಮಾನ

Update: 2022-04-05 18:58 IST

ಮಂಗಳೂರು : ಪ್ರಸಿದ್ಧ ಚಿನ್ನಾಭರಣ ಮಳಿಗೆಯಾದ ʼಸಿಟಿ ಗೋಲ್ಡ್ʼ ವತಿಯಿಂದ ೨೦೨೧ನೇ ಸಾಲಿನ ಮುಖ್ಯಮಂತ್ರಿ ಪದಕ ವಿಜೇತ ಮಂಗಳೂರು ಸಂಚಾರ ಉಪ ವಿಭಾಗದ ಎಸಿಪಿ ಎಂ.ಎ.ನಟರಾಜ್ ಅವರನ್ನು ನಗರದ ಪಾಂಡೇಶ್ವರದಲ್ಲಿರುವ ಸಹಾಯಕ ಸಂಚಾರ ಉಪವಿಭಾಗದ ಕಚೇರಿಯಲ್ಲಿ ಮಂಗಳವಾರ ಸನ್ಮಾನಿಸಲಾಯಿತು.

ಸನ್ಮಾನ ಸ್ವೀಕರಿಸಿ ಮಾತನಾಡಿದ ಎಂ.ಎ. ನಟರಾಜ್ ಪೊಲೀಸ್ ಇಲಾಖೆಯಲ್ಲಿ ನನ್ನ ಕರ್ತವ್ಯವನ್ನು ಗುರುತಿಸಿ ಸರಕಾರ ನನಗೆ ೨೦೨೧ನೆ  ಸಾಲಿನ ಮುಖ್ಯಮಂತ್ರಿ ಪದಕ ನೀಡಿ ಗೌರವಿಸಿದೆ. ಈ ಪ್ರಶಸ್ತಿಯಿಂದ ನನ್ನ ಜವಾಬ್ದಾರಿ ಹೆಚ್ಚಿದೆ ಎಂದರು.

ಈ ಸಂದರ್ಭ ಸಿಟಿ ಗೋಲ್ಡ್ ಮಂಗಳೂರು ಸಂಸ್ಥೆಯ ಬ್ರಾಂಚ್ ಮ್ಯಾನೇಜರ್ ಅಹ್ಮದ್ ಹಫೀಝ್, ಮಾರ್ಕೆಟಿಂಗ್ ಮ್ಯಾನೇಜರ್ ಇಮ್ರಾನ್ ವಿ. ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News