×
Ad

ಬ್ಯಾರಿ ಕಲಾವಿದರು ಮಾಹಿತಿ ನೀಡಲು ಸೂಚನೆ

Update: 2022-04-06 17:39 IST

ಮಂಗಳೂರು : ಕನ್ನಡ ಮತ್ತು ಸಂಸ್ಕೃತಿ ಹಾಗೂ ಇಂಧನ ಇಲಾಖಾ ಸಚಿವ ಸುನೀಲ್ ಕುಮಾರ್ ಅವರು ಕಲಾವಿದರ ದತ್ತಾಂಶ ಸಂಗ್ರಹಕ್ಕೆ ಆನ್‌ಲೈನ್ ಮೂಲಕ ನೊಂದಾಯಿಸುವ ಯೋಜನೆಯನ್ನು ಲೋಕಾರ್ಪಣೆಗೊಳಿಸಿದ್ದಾರೆ.

ಕಲಾವಿದರ ದತ್ತಾಂಶ ಸಂಗ್ರಹ ಯೋಜನೆಯಡಿ ಬ್ಯಾರಿ ಸಾಹಿತಿ/ಕಲಾವಿದರು ಸೇವಾಸಿಂಧು ಪೋರ್ಟಲ್ sevasindhu.karnataka.gov.in ಮೂಲಕ ತಮ್ಮ ಮಾಹಿತಿಯನ್ನು ದಾಖಲಿಸಬಹುದು.

ನಿಗದಿತ ಅರ್ಜಿಯನ್ನು ಆನ್‌ಲೈನ್‌ನಲ್ಲೇ ಭರ್ತಿ ಮಾಡಬೇಕು. ಅರ್ಜಿ ಸಲ್ಲಿಸುವ ಸಾಹಿತಿಗಳು ಸಾಹಿತ್ಯ ಕ್ಷೇತ್ರದಲ್ಲಿ ೮ ವರ್ಷದಿಂದ ಮತ್ತು ಕಲಾವಿದರು ಕನಿಷ್ಠ ೫ ವರ್ಷದಿಂದ ತೊಡಗಿಸಿಕೊಂಡಿರಬೇಕು. ಸಾಹಿತಿಗಳು ಕನಿಷ್ಠ ೧ ಪುಸ್ತಕ ಪ್ರಕಟಿಸಿರಬೇಕು. ಚಿತ್ರ, ಶಿಲ್ಪಕಲಾವಿದರು ಕನಿಷ್ಠ ೫ ಕಲಾಕೃತಿ ರಚಿಸಿರಬೇಕು. ಅರ್ಜಿಯಲ್ಲಿ ಹೆಸರು, ವಿಳಾಸ, ದೂರವಾಣಿ ಸಂಖ್ಯೆ, ಆಧಾರ್ ಸಂಖ್ಯೆ, ಬ್ಯಾಂಕ್ ವಿವರ ಸ್ಪಷ್ಟವಾಗಿ ನಮೂದಿಸಬೇಕು ಎಂದು ಅಕಾಡಮಿಯ ರಿಜಿಸ್ಟ್ರಾರ್ ಆರ್. ಮನೋಹರ್ ಕಾಮತ್ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News