×
Ad

ಪುತ್ತೂರು: ಕಾನೂನು ಪದವಿಯಲ್ಲಿ ಬದ್ರುದ್ದೀನ್ ಗೆ 4ನೇ ಮತ್ತು ಬಿ. ಸಿಂಧುಗೆ 8ನೇ ರ‍್ಯಾಂಕ್

Update: 2022-04-06 22:51 IST

ಪುತ್ತೂರು: ಇಲ್ಲಿನ ವಿವೇಕಾನಂದ ಕಾನೂನು ಮಹಾವಿದ್ಯಾಲಯದ 2020ರ  ಬ್ಯಾಚ್ ನ ಇಬ್ಬರು ವಿದ್ಯಾರ್ಥಿಗಳು  5 ವರ್ಷದ ಕಾನೂನು ಪದವಿಯಲ್ಲಿ ರ‍್ಯಾಂಕ್ ಪಡೆದುಕೊಂಡಿದ್ದಾರೆ.

ವಿವೇಕಾನಂದ  ಸಂಸ್ಥೆಯ ವಿದ್ಯಾರ್ಥಿಗಳಾದ ಬದ್ರುದ್ದೀನ್ ಅವರು ನಾಲ್ಕನೇ ರ‍್ಯಾಂಕ್ ಹಾಗೂ  ಬಿ. ಸಿಂಧು ಅವರು 8ನೇ ರ‍್ಯಾಂಕ್  ಗಳಿಸಿದ್ದಾರೆ.  ಅವರಿಗೆ ಧಾರವಾಡ ಕೃಷಿ ವಿವಿಯ  ಜ್ಞಾನ ಕೇಂದ್ರದಲ್ಲಿ  ನಡೆದ ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯದ ಘಟಿಕೋತ್ಸವದಲ್ಲಿ ರಾಜ್ಯಪಾಲರು ಪದವಿ ಪ್ರದಾನ ಮಾಡಿದರು.

ಬೆಳ್ತಂಗಡಿ ತಾಲೂಕಿನ ಉರುವಾಲು ಪದವು ನಿವಾಸಿ ಅಬ್ಬಾಸ್ ಬಟಾರಿ ಮತ್ತು ಸಾರಮ್ಮ ದಂಪತಿ ಪುತ್ರನಾಗಿರುವ ಬದ್ರುದ್ದೀನ್ ಪ್ರಸ್ತುತ ಬೆಂಗಳೂರಿನಲ್ಲಿ ಪ್ರಾಕ್ಟೀಸ್ ಅಡ್ವೋಕೇಟ್ ಆಗಿರುತ್ತಾರೆ.

ಮೂಲತಃ ರಿಯಾಪಟ್ಟಣ ತಾಲೂಕಾ ಭವನದ ಗ್ರಾಮದವರಾಗಿರುವ ಬಿ. ಸಿಂದು ಬೆಂಗಳೂರಿನ ಜಿಲ್ಲಾ ನ್ಯಾಯಾಧೀಶರಾಗಿರುವ ಬಸವರಾಜು ಮತ್ತು ಸಿ.ಎನ್.ಮಂಜುಳಾ ಅವರ ಪುತ್ರಿ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News