×
Ad

ಸತತ 11ನೇ ಬಾರಿ ರೆಪೊ ದರ ಯಥಾಸ್ಥಿತಿಯಲ್ಲಿಟ್ಟ ಆರ್‌ಬಿಐ

Update: 2022-04-08 10:22 IST

ಹೊಸದಿಲ್ಲಿ: ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ಶುಕ್ರವಾರ ಸತತ 11ನೇ ಬಾರಿಗೆ ರೆಪೊ ದರವನ್ನು ಶೇ.4ರಲ್ಲಿ ಯಥಾಸ್ಥಿತಿಯಲ್ಲಿಟ್ಟಿದೆ.

ರಿವರ್ಸ್ ರೆಪೊ ದರವನ್ನು ಕೂಡ ಶೇ.3.35ರಲ್ಲಿ ಯಥಾಸ್ಥಿತಿಯಲ್ಲಿ ಇರಿಸಲಾಗಿದೆ. ಪ್ರಸಕ್ತ ಹಣಕಾಸು ವರ್ಷ 2022-23ಕ್ಕೆ ಇದು ಮೊದಲ ದ್ವೈಮಾಸಿಕ ನೀತಿಯಾಗಿದೆ.

ಆರ್‌ಬಿಐ ಪ್ರಮುಖ ರೆಪೊ ದರವನ್ನು ಮೇ 2020 ರಿಂದ ದಾಖಲೆಯ ಕನಿಷ್ಠ ಮಟ್ಟದಲ್ಲಿ ಇರಿಸಿದೆ. ಇದು ಆರ್ಥಿಕ ಬೆಳವಣಿಗೆಗೆ ಬೆಂಬಲವಾಗಿ ಉಳಿಯುತ್ತದೆ ಎಂದು ಪದೇ ಪದೇ ಪುನರುಚ್ಚರಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News