ಮಾಂಸಹಾರಕ್ಕೆ ಎಬಿವಿಪಿ ಅಡ್ಡಿ ಆರೋಪ; ಜೆಎನ್‌ಯುನಲ್ಲಿ ವಿದ್ಯಾರ್ಥಿ ಸಂಘಟನೆಗಳ ನಡುವೆ ಘರ್ಷಣೆ

Update: 2022-04-10 17:11 GMT
photo: twitter/AISA_tweets

ಹೊಸದಿಲ್ಲಿ: ಜವಹಾರ್‌ ಲಾಲ್‌ ನೆಹರೂ ವಿಶ್ವ ವಿದ್ಯಾಲಯದಲ್ಲಿ ವಿದ್ಯಾರ್ಥಿ ಸಂಘಟನೆಗಳ ನಡುವೆ ಸಂಘರ್ಷ ನಡೆದಿದೆ. ಪ್ರಾಥಮಿಕ ಮಾಹಿತಿಗಳ ಪ್ರಕಾರ, ಶ್ರೀ ರಾಮ ನವಮಿ ಹಿನ್ನೆಲೆಯಲ್ಲಿ ಹಾಸ್ಟೆಲ್‌ ನಲ್ಲಿ ಮಾಂಸಹಾರ ಸೇವಿಸುವ ವಿದ್ಯಾರ್ಥಿಗಳಿಗೆ ಎಬಿವಿಪಿ ಕಾರ್ಯಕರ್ತರು ಆಕ್ಷೇಪ ವ್ಯಕ್ತಪಡಿಸಿ ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ.

ಜವಾಹರಲಾಲ್ ನೆಹರು ವಿಶ್ವವಿದ್ಯಾಲಯದ ವಿದ್ಯಾರ್ಥಿ ಸಂಘದ (ಜೆಎನ್‌ಯುಎಸ್‌ಯು) ಅಧ್ಯಕ್ಷೆ ಐಶೆ ಘೋಷ್, ಎಬಿವಿಪಿ ಸದಸ್ಯರು ವಿದ್ಯಾರ್ಥಿಗಳನ್ನು ಕ್ಯಾಂಪಸ್‌ನಲ್ಲಿ ಮಾಂಸಾಹಾರ ತಿನ್ನುವುದನ್ನು ತಡೆದು ಹಿಂಸಾಚಾರದಲ್ಲಿ ತೊಡಗಿದ್ದಾರೆ ಎಂದು ಆರೋಪಿಸಿದ್ದಾರೆ.

ಎಬಿವಿಪಿ ಸದಸ್ಯರು ಸಂಜೆ ವೇಳೆ ಕಲ್ಲು ತೂರಾಟ ನಡೆಸಿದ್ದು, ಕೆಲ ವಿದ್ಯಾರ್ಥಿಗಳು ಗಾಯಗೊಂಡಿದ್ದಾರೆ ಎಂದು ಎಡ ಸಂಘಟನೆಯ ಸದಸ್ಯರು ಆರೋಪಿಸಿದ್ದಾರೆ. ಮೆಸ್ ಕಾರ್ಯದರ್ಶಿ ಮೇಲೂ ಎಬಿವಿಪಿ ವಿದ್ಯಾರ್ಥಿಗಳು ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ ಎಂದು Hindustantimes ವರದಿ ಮಾಡಿದೆ.

ಸಾಮಾಜಿಕ ಮಾಧ್ಯಮಗಳಲ್ಲಿ ಇದೀಗ, ರಕ್ತ ಸುರಿಯುತ್ತಿರುವ ಜೆಎನ್‌ಯು ವಿದ್ಯಾರ್ಥಿಗಳ ಫೋಟೋಗಳು ವೈರಲ್‌ ಗೊಂಡಿದ್ದು, ಶ್ರೀ ರಾಮ ನವಮಿ ಹಿನ್ನೆಲೆಯಲ್ಲಿ ಸಸ್ಯಾಹಾರ ಹೇರುವ ಎಬಿವಿಪಿ ಕ್ರಮವನ್ನು ಹಲವರು ಖಂಡಿಸಿದ್ದಾರೆ.

ಇನ್ನು, ಪ್ರತಿಯಾಗಿ ಎಬಿವಿಪಿ ಸದಸ್ಯರೂ ಪ್ರತ್ಯಾರೋಪ ಮಾಡಿದ್ದು, ಎಡ ಸಂಘಟನೆಗಳ ಕಾರ್ಯಕರ್ತರು ತಮ್ಮ ಮೇಲೆ ಹಲ್ಲೆ ನಡೆಸಿದ್ದಾರೆಂದು ಆರೋಪಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News