×
Ad

ರಾಮನವಮಿ ಶೋಭಯಾತ್ರೆ ವೇಳೆ ಘರ್ಷಣೆ: ಮಧ್ಯಪ್ರದೇಶದ ಖಾರ್ಗೊನ್‌ ಪಟ್ಟಣದಲ್ಲಿ ನಿಷೇಧಾಜ್ಞೆ ಜಾರಿ

Update: 2022-04-10 23:47 IST
Photo: twitter/SamiullahKhan__/

ಭೋಪಾಲ್: ಮಧ್ಯಪ್ರದೇಶದ ಖಾರ್ಗೊನ್‌ ಪಟ್ಟಣದಲ್ಲಿ ರಾಮನವಮಿ ಶೋಭೈಾತ್ರ ವೇಳೆ ಘರ್ಷಣೆ ನಡೆದಿದೆ. ಘರ್ಷಣೆ ವಿಕೋಪಕ್ಕೆ ತಿರುಗುತ್ತಿದ್ದಂತೆ ಸ್ಥಳೀಯಾಡಳಿತ ಸೆಕ್ಷನ್‌ 144 ಹಾಕಿ ನಿಷೇಧಾಜ್ಞೆ ಜಾರಿಗೊಳಿಸಿದೆ.

ಶೋಭಯಾತ್ರೆ ವೇಳೆ ಕಲ್ಲು ತೂರಾಟ ನಡೆದಿದ್ದು, ಪೊಲೀಸರು ಕೂಡಾ ಗಾಯಗೊಂಡಿದ್ದಾರೆ ಎಂದು indianexpress ವರದಿ ಮಾಡಿದೆ. ಪರಿಸ್ಥಿತಿ ಹತೋಟಿಗೆ ತರಲು ಆಶ್ರುವಾಯು ಸಿಡಿಸಿದ್ದು, ಪರಿಸ್ಥಿತಿ ಬಿಗಡಾಯಿಸಿದಾದ ಸಂಪೂರ್ಣ ಪಟ್ಟಣಕ್ಕೆ ನಿಷೇಧಾಜ್ಞೆ ಹೇರಲಾಗಿದೆ ಎಂದು ವರದಿಯಾಗಿದೆ.

 ಇಡೀ ನಗರದಲ್ಲಿ ಸಿಆರ್‌ಪಿಸಿಯ ಸೆಕ್ಷನ್ 144 (ನಾಲ್ಕು ಅಥವಾ ಅದಕ್ಕಿಂತ ಹೆಚ್ಚು ಜನರು ಒಟ್ಟು ಸೇರುವುದನ್ನು ನಿಷೇಧಿಸುವುದು) ವಿಧಿಸಲಾಗಿದೆ ಎಂದು ಖಾರ್ಗೋನ್ ಜಿಲ್ಲಾಧಿಕಾರಿ ಅನುಗ್ರಹ್ ಪಿ ಹೇಳಿದ್ದಾರೆ.

"ನಗರದ ತಲಾಬ್ ಚೌಕ್ ಮತ್ತು ತಾವಡಿ ಸೇರಿದಂತೆ ಮೂರು ಪ್ರದೇಶಗಳಲ್ಲಿ ಕರ್ಫ್ಯೂ ಅನ್ನು ಬಿಗಿಗೊಳಿಸಲಾಗಿದೆ" ಎಂದು ಅವರು ಹೇಳಿದ್ದಾರೆ, ಕಲ್ಲು ತೂರಾಟದ ನಂತರ ವಾಹನಗಳಿಗೆ ಬೆಂಕಿ ಹಚ್ಚಿದ ಘಟನೆಯೂ ಸಂಭವಿಸಿವೆ ಎಂದು ವರದಿಯಾಗಿದೆ.

ಜಿಲ್ಲಾ ಕೇಂದ್ರದ ಬಳಿಯಿರುವ ತಾಲಾಬ್ ಚೌಕ್‌ನಿಂದ ರಾಮನವಮಿ ಮೆರವಣಿಗೆ ಆರಂಭವಾದಾಗ ಮೆರವಣಿಗೆ ಮೇಲೆ ಕಲ್ಲು ತೂರಾಟ ನಡೆಸಲಾಯಿತು, ಪರಿಸ್ಥಿತಿ ನಿಯಂತ್ರಿಸಲು ಪೊಲೀಸರು ಅಶ್ರುವಾಯು ಸಿಡಿಸಿದರು. ಕೆಲವು ಪೊಲೀಸರು ಮತ್ತು ಜನರು ಗಾಯಗೊಂಡಿದ್ದಾರೆ ಎಂದು ಖಾರ್ಗೋನ್ ಹೆಚ್ಚುವರಿ ಜಿಲ್ಲಾಧಿಕಾರಿ ಸುಮರ್‌ಸಿಂಗ್ ಮುಜಾಲ್ದೆ ಹೇಳಿದ್ದಾರೆ.

ಮೆರವಣಿಗೆಯು ಖಾರ್ಗೋನ್ ನಗರವನ್ನು ಸುತ್ತಬೇಕಾಗಿತ್ತು ಆದರೆ ಹಿಂಸಾಚಾರದ ನಂತರ ಅದನ್ನು ಮಧ್ಯದಲ್ಲಿಯೇ ಕೈಬಿಡಲಾಯಿತು ಎಂದು ಜಿಲ್ಲಾಧಿಕಾರಿ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News