×
Ad

ಸುರತ್ಕಲ್: ಮಗುವಿನೊಂದಿಗೆ ತಾಯಿ ನಾಪತ್ತೆ

Update: 2022-04-11 18:43 IST

ಸುರತ್ಕಲ್, ಎ.11: ಮಹಿಳೆಯೋರ್ವರು 2 ವರ್ಷದ ಗಂಡು ಮಗುವಿನೊಂದಿಗೆ ನಾಪತ್ತೆಯಾಗಿರುವ ಪ್ರಕರಣ ತಡಂಬೈಲ್ ನಲ್ಲಿ ಸೋಮವಾರ ವರದಿಯಾಗಿದೆ.

ನಾಪತ್ತೆಯಾದವರನ್ನು ಮೇಘಾ ಯಾನೆ ಬಾಲಮ್ಮ (22) ಮತ್ತು ಅವರ 2 ವರ್ಷದ ಗಂಡು ಮಗು ಎಂದು ತಿಳಿದು ಬಂದಿದೆ.

ಇವರು ಮೂಲತಃ ಗದಗ ಜೆಲ್ಲೆಯ ರೋಣ ತಾಲೂಕಿನವರಾಗಿದ್ದು, ಸದ್ಯ ಸುರತ್ಕಲ್ ಠಾಣಾ ವ್ಯಾಪ್ಯಿಯ  ತಡಂಬೈಲ್ ಎಂಬಲ್ಲಿ ವಾಸವಾಗಿದ್ದರು.

ಮೇಘಾ ಯಾನೆ ಬಾಲಮ್ಮ ಅತಿಯಾದ ಮೊಬೈಲ್ ಉಪಯೋಗಿಸುತ್ತಿದ್ದ ಕುರಿತು ಬುದ್ದಿ ಹೇಳಿದ್ದಕ್ಕಾಗಿ ಕೋಪಗೊಂಡು ಪತ್ನಿ ಎ.8ರಂದು ಮಗನೊಂದಿಗೆ ಮನೆ ಬಿಟ್ಟು ಹೋಗಿದ್ದಾಳೆ ಎಂದು ಆಕೆಯ ಪತಿ ದೂರಿನಲ್ಲಿ ತಿಳಿಸಿದ್ದಾರೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಸುರತ್ಕಲ್ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ಚಹರೆ: ತಾಯಿ ಮತ್ತು ಮಗು ಇಬ್ಬರೂ ಗೋದಿ ಮೈಬಣ್ಣ ಹೊಂದಿದ್ದು, ಮೇಘಾ 4.5 ಉದ್ದ ಕನ್ನಡ ಮಾತನಾಡುತ್ತಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News