ಮಿಲ್ಲತ್ ಸೊಸೈಟಿಯಿಂದ ರಮಝಾನ್ ಕಿಟ್ ವಿತರಣೆ
Update: 2022-04-13 18:40 IST
ಮಂಗಳೂರು : ಮಿಲ್ಲತ್ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ ಮಂಗಳೂರು ಇದರ ವತಿಯಿಂದ ಮಂಗಳವಾರ ಸೊಸೈಟಿಯ ಕಚೇರಿಯಲ್ಲಿ ಅರ್ಹ 100 ಮಂದಿಗೆ ರಮಝಾನ್ ಕಿಟ್ ವಿತರಿಸಲಾಯಿತು.
ಸಂಸ್ಥೆಯ ಅಧ್ಯಕ್ಷ, ಮಾಜಿ ರಾಜ್ಯಸಭಾ ಸದಸ್ಯ ಹಾಜಿ ಬಿ. ಇಬ್ರಾಹೀಂ, ನಿರ್ದೇಶಕರಾದ ನಿಸಾರ್ ಫಕೀರ್ ಮುಹಮ್ಮದ್, ಎನ್.ಪಿ. ಪುಷ್ಪರಾಜನ್, ಅಬ್ದುಲ್ ರಝಾಕ್, ಮುನೀರ್ ಅಹ್ಮದ್ ಉಪಸ್ಥಿತರಿದ್ದರು.