ದಸಂಸ ವತಿಯಿಂದ ಅಂಬೇಡ್ಕರ್ ಜಯಂತಿ
Update: 2022-04-14 19:26 IST
ಮಂಗಳೂರು : ಕರ್ನಾಟಕ ದಲಿತ ಸಂಘರ್ಷ ಸಮಿತಿ (ರಿ) ಮಂಗಳೂರು ತಾಲೂಕು ಸಮಿತಿಯ ವತಿಯಿಂದ ಡಾ. ಬಾಬಾ ಸಾಹೇಬ್ ಅಂಬೇಡ್ಕರ್‌ರ ೧೩೧ನೆ ಜನ್ಮ ದಿನವನ್ನು ನಗರದ ಎನ್‌ಜಿಒ ಹಾಲ್‌ನಲ್ಲಿ ಗುರುವಾರ ಆಚರಿಸಲಾಯಿತು.
ಸಮಿತಿಯ ಅಧ್ಯಕ್ಷ ಕೆ. ನಾಗೇಶ್ ಬಲ್ಮಠ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಸಂಚಾಲಕ ಶೇಖರ್ ಚಿಲಿಂಬಿ, ರಾಜ್ಯ ಸಮಿತಿಯ ಸದಸ್ಯರಾದ ಎಂ.ವಿ. ಪದ್ಮನಾಭ್, ಸುಂದರ ಉಳ್ಳಾಲ್, ಜೆ. ಶ್ರೀನಿವಾಸಲು, ಜಿಲ್ಲಾ ಸಮಿತಿಯ ಈಶ್ವರ್ ಪಡುಪೆರಾರ್, ರಾಮರಾಯ, ಕೆ.ಎಸ್. ಹೊನ್ನಯ್ಯ, ಗೋಪಾಲ ಟಿ. ತಲಪಾಡಿ, ಜಿಲ್ಲಾ ಸಂಚಾಲಕಿ ಯಶೋಧಾ ಮತ್ತಿತರರು ಪಾಲ್ಗೊಂಡಿದ್ದರು.