ಮಂಗಳೂರು: ರಾಜ್ಯ ಫುಟ್ಬಾಲ್ ತಂಡಕ್ಕೆ ಬೀಳ್ಕೊಡುಗೆ
ಮಂಗಳೂರು : ಕೇರಳದ ಮಂಜೇರಿಯಲ್ಲಿ ನಡೆಯುವ ಸಂತೋಷ್ ಟ್ರೋಫಿ ರಾಷ್ಟ್ರೀಯ ಫುಟ್ಬಾಲ್ ಚಾಂಪಿಯನ್ ಶಿಪ್ ಪಂದ್ಯಾವಳಿಯಲ್ಲಿ ಭಾಗವಹಿಸುವ ಕರ್ನಾಟಕ ಫುಟ್ಬಾಲ್ ತಂಡವನ್ನು ಗುರುವಾರ ನಗರದ ಕೇಂದ್ರ ರೈಲ್ವೆ ನಿಲ್ದಾಣದಲ್ಲಿ ದ.ಕ.ಫುಟ್ಬಾಲ್ ಅಸೋಸಿಯೇಶನ್ ವತಿಯಿಂದ ಬೀಳ್ಕೊಡಲಾಯಿತು.
ಈ ಸಂದರ್ಭ ದ.ಕ.ಜಿಲ್ಲಾ ಫುಟ್ಬಾಲ್ ಸಂಸ್ಥೆಯ ಅಧ್ಯಕ್ಷ ಡಿಎಂ ಅಸ್ಲಂ, ಕಾರ್ಯದರ್ಶಿ ಹುಸೇನ್ ಬೋಳಾರ, ರಾಜ್ಯ ಸಂಸ್ಥೆಯ ಸದಸ್ಯರಾದ ವಿಜಯ ಸುವರ್ಣ, ಕೋಶಾಧಿಕಾರಿ ಅನಿಲ್ ಪಿ.ವಿ. ಉಪಸ್ಥಿತರಿದ್ದರು.
ರಾಜ್ಯ ತಂಡವು ಕಳೆದ ಎರಡು ವಾರದಿಂದ ದೇರಳಕಟ್ಟೆಯ ಯೆನೆಪೊಯ ಕಾಲೇಜ್ ಮೈದಾನದಲ್ಲಿ ತರಬೇತಿ ಪಡೆಯುತಿತ್ತು. ಈ ತಂಡದಲ್ಲಿ ಜಯಂತ್ ಕುಮಾರ್, ಕೃಷ್ಣಮೂರ್ತಿ, ಸಿಜು ಎಸ್., ಎಂ. ಸುನಿಲ್ ಕುಮಾರ್, ಸೊಲೈಮನಿ ಎನ್., ಸುಧೀರ್ ಕೋಟಿಕುಲ, ಮಗೇಶ್ ಸಿಲ್ವ, ಅಂಕಿತ್ ಪಿ. ವಿಗ್ಸ್ನೇಶ್ ಗುಣಶೇಕರ, ಮುಹಮ್ಮದ್ ರಿಯಾಝ್ ಪಿ.ಟಿ., ಪವನ್ ಎಸ್., ಅರುಣ್ ಕುಮಾರ್ ಡಿ, ಬಾವು ನಿಷಾದ್ ಟಿ.ಪಿ, ಕಮಲೇಶ್ ಪಿ, ಪ್ರಶಾಂತ್ ಕಲಿಂಗ, ಆರ್ಯನ್ ಅಮಲ, ದರ್ಶನ್ ಎಲ್, ಕೆವಿನ್ ಕೋಶಿ, ಬಿರ್ರಿಟೋ ಕಾರ್ಲೋಸ್, ಜೋನ್ಸನ್ ಎ ಸತ್ಯರಾಜ್ ದೇವನ್ (ಕೋಚ್) ಬಿಬಿ ಥೋಮಸ್ ಮುಟ್ಟತ್(ಕೋಚ್) ಆಂಡ್ರೂ ಜೋಸೆಫ್ ಲೂಕಾಸ್ (ಟೀಮ್ ಮ್ಯಾನೇಜರ್), ಸುಭಿ ಎಸ್(ಫಿಜಿಯೋ) ಇದ್ದಾರೆ.