ಬಜ್ಪೆ: ಅಂಬೇಡ್ಕರ್ ಜಯಂತಿ ಪ್ರಯುಕ್ತ ಸೌಹಾರ್ದ ಇಫ್ತಾರ್ ಕೂಟ
Update: 2022-04-15 15:29 IST
ಮಂಗಳೂರು, ಎ.15: ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಅವರ 131ನೇ ಜನ್ಮ ದಿನದ ಪ್ರಯುಕ್ತ ಕರ್ನಾಟಕ ದಲಿತ ಸಂಘರ್ಷ ಸಮಿತಿ ಮತ್ತು ಕರಾವಳಿ ಟೀಮ್ ವತಿಯಿಂದ ಬಜ್ಪೆಯ ಸಿದ್ಧಾರ್ಥ ನಗರದಲ್ಲಿ ಗುರುವಾರ ಸೌಹಾರ್ದ ಇಫ್ತಾರ್ ಕೂಟ ಆಯೋಜಿಸಲಾಗಿತ್ತು.
ಕಾರ್ಯಕ್ರಮದಲ್ಲಿ ರಾಜ್ಯ ದಲಿತ ಸಂಘಟನೆಯ ಸಂಚಾಲಕ ದೇವದಾಸ್, ವಿಮಾನ ನಿಲ್ದಾಣ ನಿರ್ವಸಿತರ ಅಭಿವೃದ್ಧಿ ಸಂಘದ ಅಧ್ಯಕ್ಷ ಕೃಷ್ಣಾನಂದ, ಕರ್ನಾಟಕ ದಲಿತ ಸಂಘರ್ಷ ಸಮಿತಿ ಶಾಖಾ ಸಂಚಾಲಕ ಸತೀಶ್, ಸಾಮಾಜಿಕ ಕಾರ್ಯಕರ್ತ ಸಿರಾಜ್ ಬಜ್ಪೆ, ದಲಿತ ಸಂಘರ್ಷ ಸಮಿತಿಯ ಜಿಲ್ಲಾ ಸಂಚಾಲಕ ರಘು ಎಕ್ಕಾರ್ ಮತ್ತಿತರ ಗಣ್ಯರು ಮತ್ತು ಊರಿನ ಹಿಂದೂ ಸಹೋದರ, ಸಹೋದರಿಯರು ಭಾಗವಹಿಸಿದ್ದರು.