×
Ad

ಉಪ್ಪಿನಂಗಡಿಯಲ್ಲಿ ಪಿಎಫ್‍ಐ ಪ್ರತಿಭಟನೆ

Update: 2022-04-15 22:19 IST

ಉಪ್ಪಿನಂಗಡಿ: ಮುಸ್ಲಿಮರ ಮೇಲೆ ಆರೆಸ್ಸೆಸ್‍ನಿಂದ ಅವಮಾನ, ವ್ಯವಸ್ಥಿತ ಪಿತೂರಿ, ಹಿಂದೂಗಳನ್ನು ಮುಸ್ಲಿಮರ ಮೇಲೆ ಎತ್ತಿಕಟ್ಟುವಂತಹ ಷಡ್ಯಂತ್ರಗಳು ಇದೀಗ ನಿರಂತರವಾಗಿ ನಡೆಯುತ್ತಿದ್ದು, ಹೀಗೆ ಹೋದರೆ ಈ ದೇಶದಲ್ಲಿ ಪ್ರಜಾಪ್ರಭುತ್ವ ಉಳಿಯಲು ಸಾಧ್ಯವಿಲ್ಲ. ಭಾರತವು ಜಾತ್ಯತೀತ ರಾಷ್ಟ್ರವಾಗಿ ಉಳಿಯಲು ಸಾಧ್ಯವಿಲ್ಲ ಎಂದು ಪಿಎಫ್‍ಐ ಜಿಲ್ಲಾ ಸಮಿತಿ ಸದಸ್ಯ ಅಬ್ದುರ್ರಝಾಕ್ ಸೀಮಾ ಆತಂಕ ವ್ಯಕ್ತಪಡಿಸಿದರು.

ʼಮುಸ್ಲಿಮ್ ವಿರೋಧಿ ಹಿಂಸಾಚಾರವು ಸಂಘಪರಿವಾರದ ಪಿತೂರಿ. ಮುಸ್ಲಿಮರ ಮೇಲಿನ ದಾಳಿಯನ್ನು ನಿಲ್ಲಿಸಿ' ಎಂಬ ಬೇಡಿಕೆಯೊಂದಿಗೆ ಪಿಎಫ್‍ಐ ಕರೆ ಕೊಟ್ಟಿರುವ  ದೇಶವ್ಯಾಪಿ ಪ್ರತಿಭಟನೆಯ ಹಿನ್ನೆಲೆಯಲ್ಲಿ ಉಪ್ಪಿನಂಗಡಿ ಬಸ್ ನಿಲ್ದಾಣದಲ್ಲಿ ಎ.15ರಂದು ನಡೆದ ಪ್ರತಿಭಟನೆಯನ್ನುದ್ದೇಶಿಸಿ ಅವರು ಮಾತನಾಡುತ್ತಿದ್ದರು.

ಪಿಎಫ್‍ಐ ಪುತ್ತೂರು ಜಿಲ್ಲಾ ಸಮಿತಿ ಸದಸ್ಯ ಉಸ್ಮಾನ್ ಮಾತನಾಡಿದರು. ಪ್ರತಿಭಟನೆಯಲ್ಲಿ ಪಿಎಫ್‍ಐ ಮುಖಂಡರಾದ ಮುಸ್ತಾಫ ನಿರ್ಮ, ರಝಾಕ್ ಕುದ್ರಡ್ಕ, ಖಿಲ್ಲ್‍ರ್ ಕೆಮ್ಮಾರ ಮತ್ತಿತರರಿದ್ದರು.

ಪಿಎಫ್‍ಐನ ಉಪ್ಪಿನಂಗಡಿ ಜಿಲ್ಲಾ ಸಮಿತಿ ಅಧ್ಯಕ್ಷ ಹಮೀದ್ ಹಾಜಿ ಮೆಜೆಸ್ಟಿಕ್ ಸ್ವಾಗತಿಸಿದರು. ಹನೀಫ್ ಬಿಳಿಯೂರು ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News