×
Ad

ಪುತ್ತೂರಿನಲ್ಲಿ ಪಿಎಫ್ಐ ವತಿಯಿಂದ ಪ್ರತಿಭಟನೆ

Update: 2022-04-16 16:46 IST

ಪುತ್ತೂರು : ದೇಶದಲ್ಲಿ ನಡೆಯುತ್ತಿರುವ ಮುಸ್ಲಿಮರ ಮೇಲಿನ ಹಿಂಸಾಚಾರ, ದಾಳಿಯನ್ನು ಖಂಡಿಸಿ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯ ಪುತ್ತೂರು ವತಿಯಿಂದ ಎ.ಸಿ ಕಚೇರಿ ಮುಂಭಾಗದಲ್ಲಿ ಶನಿವಾರ ಪ್ರತಿಭಟನೆ ನಡೆಯಿತು.

ಪ್ರತಿಭಟನೆಯನ್ನುದ್ದೇಶಿಸಿ ಪಿಎಫ್ಐ ಜಿಲ್ಲಾ ಮುಖಂಡ ರಿಯಾಝ್ ಬಳಕ್ಕ ಮಾತನಾಡಿ ದೇಶದಲ್ಲಿ ಅಂಬೇಡ್ಕರ್‌ರವರ ಸಂವಿಧಾನವನ್ನು ಬುಡಮೇಲು ಮಾಡಿಕೊಂಡು ಮನುವಾದಿಗಳು ಮುಸಲ್ಮಾನರ ವಿರುದ್ಧ ಹಿಂಸಾಚಾರ ಕೃತ್ಯಗಳನ್ನು ನಡೆಸುತ್ತಿದ್ದಾರೆ, ನೈಜ ಹಿಂದೂಗಳು ರಾಮನವಮಿ ಹಬ್ಬವನ್ನು ಭಕ್ತಿಯಿಂದ ಆಚರಿಸಿದರೆ  ಹಿಂದುತ್ವವಾದಿಗಳು ಮುಸಲ್ಮಾನರ ವಿರುದ್ಧ ದೌರ್ಜನ್ಯ, ಹಿಂಸಾಚಾರ ನಡೆಸಿ, ಮುಸಲ್ಮಾನರ ವಿರುದ್ಧ ಪ್ರಚೋದನಕಾರಿ ಘೋಷಣೆ ಕೂಗಿ ಸಮಾಜದಲ್ಲಿ ಅಶಾಂತಿಯ ವಾತಾವರಣ ನಿರ್ಮಾಣ ಮಾಡುತ್ತಿದ್ದಾರೆ. ಪುತ್ತೂರಿನಲ್ಲಿ ಹಿಂದುತ್ವವಾದಿಗಳು ಮುಸಲ್ಮಾನರ ವ್ಯಾಪಾರಕ್ಕೆ ಬಹಿಷ್ಕಾರ ಮಾಡಿದ್ದಾರೆ. ಹಿಂದೂ ಧರ್ಮದ ಒಬ್ಬ ರೋಗಿಗೆ ಅವಶ್ಯವಿದ್ದ ರಕ್ತವನ್ನು ರಂಝಾನ್ ಉಪವಾಸವಿದ್ದರೂ ಮುಸಲ್ಮಾನ ಸಹೋದರ ರಕ್ತದಾನ ಮಾಡಿರುವುದು ಸೌಹಾರ್ದ ಭಾರತಕ್ಕೆ ಸಾಕ್ಷಿಯಾಗಿದೆ. ಈ  ದೇಶದ ಪ್ರಜ್ಞಾವಂತ ನಾಗರಿಕರು, ನೈಜ ಹಿಂದೂಗಳು ನಕಲಿ ಹಿಂದುತ್ವವಾದಿಗಳ  ಆಕ್ರಮಣಕಾರಿ ಕೃತ್ಯಗಳನ್ನು ಎದುರಿಸಬೇಕು, ಸೌಹಾರ್ದ ಭಾರತ ನಿರ್ಮಾಣ ಮಾಡಲು ಎಲ್ಲರೂ ಜೊತೆಯಾಗಬೇಕು ಎಂದರು.

ಉಸ್ಮಾನ್ ಎ.ಕೆ ಪ್ರಾಸ್ತಾವಿಕವಾಗಿ ಮಾತನಾಡಿದರು.

ಈ ಸಂದರ್ಭದಲ್ಲಿ ಪಿಎಫ್ಐ ಪುತ್ತೂರು ಜಿಲ್ಲಾ ಕಾರ್ಯದರ್ಶಿ ಇಸ್ಮಾಯಿಲ್ ಕೆಮ್ಮಾಯಿ, ಜಿಲ್ಲಾ ಸಮಿತಿ ಸದಸ್ಯರಾದ ರಫೀಕ್ ಎಂ.ಎಸ್, ಸಿಟಿ ಡಿವಿಝನ್ ಅಧ್ಯಕ್ಷರಾದ ಉಮ್ಮರ್ ಕೂರ್ನಡ್ಕ, ಕುಂಬ್ರ ಡಿವಿಝನ್ ಅಧ್ಯಕ್ಷರಾದ ಶಾಕಿರ್ ಕಟ್ಟತ್ತಾರ್, ಸವಣೂರು ಡಿವಿಝನ್ ಅಧ್ಯಕ್ಷರಾದ ಬಾತಿಷ್ ಬಡಕ್ಕೋಡಿ,  ಎಸ್‌ಡಿಪಿಐ ಪುತ್ತೂರು ವಿಧಾನಸಭಾ ಕ್ಷೇತ್ರ ಉಪಾಧ್ಯಕ್ಷರಾದ ಅಬ್ದುಲ್ ಹಮೀದ್ ಸಾಲ್ಮರ  ಮುಂತಾದವರು ಉಪಸ್ಥಿತರಿದ್ದರು.

ಇಕ್ಬಾಲ್ ಮುರ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News