×
Ad

ಬೈಕ್ ಢಿಕ್ಕಿ: ಪಾದಚಾರಿ ಸಹಿತ ಮೂವರಿಗೆ ಗಾಯ

Update: 2022-04-16 19:48 IST

ಸುರತ್ಕಲ್, ಎ.16: ರಸ್ತೆ ದಾಟುತ್ತಿದ್ದ ವೇಳೆ ದ್ವಿಚಕ್ರ ವಾಹನ ಢಿಕ್ಕಿ ಹೊಡೆದು ಪಾದಚಾರಿ ಹಾಗೂ ಬೈಕ್ ಸವಾರರು ಗಾಯಗೊಂಡಿರುವ ಘಟನೆ ಸುರತ್ಕಲ್ ಪೊಲೀಸ್ ಠಾಣಾ ವ್ಯಾಪ್ತಿಯ ಕಾಟಿಪಳ್ಳದಲ್ಲಿ ನಡೆದಿದೆ.

ಘಟನೆಯಿಂದ ಕಾಟಿಪಳ್ಳ‌ ನಿವಾಸಿ  ಪಿ.ಎ. ಹಸನಬ್ಬ ಹಾಗೂ ಬೈಕ್ ಸವಾರರಾದ ಮುಹಮ್ಮದ್ ಬಶೀರ್ ಹಾಗೂ ಮುಹಮ್ಮದ್ ರಹೀಲ್ ಗಾಯಗೊಂಡವರು ಎಂದು ತಿಳಿದಿ ಬಂದಿದೆ.

ಪಿ.ಎ.‌ಹಸನಬ್ಬ ಎಂಬವರು ತನ್ನ ಮನೆ‌ ಸಮೀಪದಲ್ಲಿ ನಡೆದುಕೊಂಡು ರಸ್ತೆ ದಾಟುತ್ತಿದ್ದ ಸಂದರ್ಭ ಕಾಟಿಪಳ್ಳ ಗಣೇಶ ಪುರ ಕಡೆಯಿಂದ ಕಾಟಿಪಳ್ಳ ಪೇಟೆಯ ಕಡೆ ಬೈಕ್ ಚಲಾಯಿಸಿ ಕೊಂಡು ಬಂದ ಮುಹಮ್ಮದ್ ಬಶೀರ್ ಮತ್ತು ಸಹ ಸವಾರ ಮುಹಮ್ಮದ್‌ ರಹೀಲ್ ಢಿಕ್ಕಿ ಹೊಡೆದಿದ್ದಾರೆ ಎಂದು ಹಸನಬ್ಬ ಅವರು ದೂರು ನೀಡಿದ್ದಾರೆ. 

ಘಟನೆಯಿಂದ ಹಸನಬ್ಬ ಅವರಿಗೆ ಗಾಯಗಳಾಗಿದ್ದು, ನಗರದ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅಲ್ಲದೆ, ಬೈಕ್‌ ಸವಾರರಾದ ಬಶೀರ್ ಮತ್ತು ರಹೀಲ್ ಅವರಿಗೂ ಸಣ್ಣ ಪುಟ್ಟ ಗಾಯಗಳಾಗಿದ್ದು ಅವರನ್ನು ಆಸ್ಪತ್ರೆಯಲ್ಲಿ ಒಳರೋಗಿಗಳಾಗಿ ದಾಖಲಿಸಲಾಗಿದೆ ಎಂದು ತಿಳಿದುಬಂದಿದೆ.

ಈ ಸಂಬಂಧ ಮಂಗಳೂರು ಉತ್ತರ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News